ನವದೆಹಲಿ: 2018ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇದೀಗ ಸುಪ್ರೀಂ ಕೋರ್ಟ್ನಲ್ಲಿ ಆರಂಭಗೊಂಡಿದೆ.ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ-ವಿವಾದ ಆಲಿಸಲಾಗುತ್ತಿದ್ದು, ಜಸ್ಟೀಸ್ ಡಿವೈ ಚಂದ್ರಚೂಡ್ ಹಾಗೂ ಇಂದಿರಾ ಬ್ಯಾನರ್ಜಿ ವಿಚಾರಣೆ ನಡೆಸುತ್ತಿದ್ದಾರೆ.
-
"If we as a constitutional court do not lay down law and protect liberty then who will?... If a state targets an individual like that, a strong message needs to be sent out...Our democracy is extraordinarily resilient," says Justice Chandrachud of Supreme Court https://t.co/KhIBROOf0p
— ANI (@ANI) November 11, 2020 " class="align-text-top noRightClick twitterSection" data="
">"If we as a constitutional court do not lay down law and protect liberty then who will?... If a state targets an individual like that, a strong message needs to be sent out...Our democracy is extraordinarily resilient," says Justice Chandrachud of Supreme Court https://t.co/KhIBROOf0p
— ANI (@ANI) November 11, 2020"If we as a constitutional court do not lay down law and protect liberty then who will?... If a state targets an individual like that, a strong message needs to be sent out...Our democracy is extraordinarily resilient," says Justice Chandrachud of Supreme Court https://t.co/KhIBROOf0p
— ANI (@ANI) November 11, 2020
ಇವರಿಗೆ ಮಧ್ಯಂತರ ಜಾಮೀನು ನೀಡಲು ಮುಂಬೈ ಹೈಕೋರ್ಟ್ ನಿರಾಕರಣೆ ಮಾಡಿದ್ದು, ಈ ಆದೇಶ ಪ್ರಶ್ನಿಸಿ ಅರ್ನಬ್ ಗೋಸ್ವಾಮಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದಾರೆ. ಹಿರಿಯ ಪತ್ರಕರ್ತನ ಪರವಾಗಿ ಹರೀಶ್ ಸಾಳ್ವೆ ವಕಾಲತ್ತು ವಹಿಸಿಕೊಂಡಿದ್ದಾರೆ. ಮುಂಬೈ ಪೊಲೀಸರಿಂದ ತಮ್ಮ ಬಂಧನ ಕಾನೂನು ಬಾಹಿರವಾಗಿದ್ದು, ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಗೋಸ್ವಾಮಿ ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ಗೋಸ್ವಾಮಿ ಉಲ್ಲೇಖ ಮಾಡಿದ್ದಾರೆ.
2019 ರಲ್ಲಿ ಅಂತ್ಯ ಹಾಡಲಾಗಿದ್ದ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ವಿರುದ್ಧದ ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪ ಪ್ರಕರಣವನ್ನು ನಾಯಕ್ ಅವರ ಪತ್ನಿ ಅಕ್ಷತಾ ಸಲ್ಲಿಸಿದ ಅರ್ಜಿ ಮೇರೆಗೆ ಮತ್ತೆ ತೆರೆಯಲಾಗಿದೆ.