ನವದೆಹಲಿ: ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ 9,000 ಕೋಟಿ ರೂ. ಸಾಲ ಮಾಡಿ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದೆ.
ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರನ್ನ ವಾಪಸ್ ಕರೆತರುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಏನು ಎಂದು ಪ್ರಶ್ನೆ ಮಾಡಿರುವ ಸುಪ್ರೀಂಕೋರ್ಟ್, ಮುಂದಿನ ಆರು ವಾರಗಳಲ್ಲಿ ಅದರ ಸಂಪೂರ್ಣ ವರದಿ ಸಲ್ಲಿಕೆ ಮಾಡುವಂತೆ ಕೇಂದ್ರಕ್ಕೆ ವಾರ್ನ್ ಮಾಡಿದೆ.
-
Supreme Court seeks status report from Centre on extradition of fugitive businessman Vijay Mallya within six weeks. pic.twitter.com/nS0CVR7l6H
— ANI (@ANI) November 2, 2020 " class="align-text-top noRightClick twitterSection" data="
">Supreme Court seeks status report from Centre on extradition of fugitive businessman Vijay Mallya within six weeks. pic.twitter.com/nS0CVR7l6H
— ANI (@ANI) November 2, 2020Supreme Court seeks status report from Centre on extradition of fugitive businessman Vijay Mallya within six weeks. pic.twitter.com/nS0CVR7l6H
— ANI (@ANI) November 2, 2020
ಕಳೆದ ಕೆಲ ದಿನಗಳ ಹಿಂದೆ ಇದೇ ವಿಚಾರವಾಗಿ ಉತ್ತರ ನೀಡಿದ್ದ ಕೇಂದ್ರ ಸರ್ಕಾರ ಬ್ರಿಟನ್‌ನಿಂದ ಭಾರತಕ್ಕೆ ಉದ್ಯಮಿ ವಿಜಯ್ ಮಲ್ಯ ಅವರನ್ನು ಕರೆತರಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ ಎಂದು ತಿಳಿಸಿತ್ತು. ಇದಾದ ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಇಂಗ್ಲೆಂಡ್ನಲ್ಲಿ ಅವರ ವಿರುದ್ಧ ರಹಸ್ಯವಾದ ವಿಚಾರಣೆ ಆರಂಭಗೊಂಡಿರುವ ಕಾರಣ ಭಾರತಕ್ಕೆ ಅವರ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿತ್ತು.