ಮುಂಬೈ: ದೇಶದಾದ್ಯಂತ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ದರ್ಬಾರ್' ಚಿತ್ರ ಇಂದು (ಜನವರಿ 9) ಥಿಯೇಟರ್ಗೆ ಲಗ್ಗೆ ಇಟ್ಟಿದೆ. ಲೈಕ್ ಪ್ರೊಡಕ್ಷನ್ ಕಂಪನಿ ನಿರ್ಮಾಣದ ಈ ಸಿನಿಮಾ ಏಕಕಾಲಕ್ಕೆ ತಮಿಳು ಸೇರಿದಂತೆ ಹಿಂದಿ, ತೆಲಗು, ಮಲಯಾಳಂದಲ್ಲಿ ತೆರೆ ಕಂಡಿದೆ.
ಇಂದು ಮುಂಜಾನೆಯಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ತಂಡೋಪ ತಂಡವಾಗಿ ಟಿಕೆಕ್ ಕೌಂಟರ್ ಬಳಿ ಸಾಲುಗಟ್ಟಿ ನಿಂತಿದ್ದಾರೆ. ಇನ್ನು ರಜನಿ ಕಾಂತ್ ಮಡದಿ ಲತಾ ರಜಿನಿ ಕಾಂತ್ ಮತ್ತು ನಿರ್ದೇಶಕ ರಾಘವ ಲಾರೆಂನ್ಸ್ ಚೆನ್ನೈನ ಚಿತ್ರ ಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಣೆ ಮಾಡಿದರು.
ಇನ್ನು ಕೆಲವು ಅಭಿಮಾನಿಗಳು ರಜನಿ ಕಾಂತ್ ಫೋಟೋ ಇರುವ ಬ್ಯಾನರ್ ಹಿಡಿದು ಸಂಭ್ರಮಿಸಿದರೆ, ಇನ್ನು ಕೆಲವು ಅಭಿಮಾನಿಗಳು ತಲೈವಾ ಇರುವ ಟಿ-ಶರ್ಟ್ ಧರಿಸಿ ಕಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಚಿತ್ರ ಮಂದಿರದ ಹೊರಗಡೆ ಹಾಡು, ಡ್ಯಾನ್ಸ್, ಪಟಾಕಿ ಸಿಡಿಸುವ ಮೂಲಕ ಚಿತ್ರಕ್ಕೆ ಶುಭ ಕೋರುತ್ತಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿರುವ ರೋಹಿಣಿ ಚಿತ್ರಮಂದಿರದ ಎದುರು ರಜನಿಕಾಂತ್ ಕಟೌಟ್ಗಳನ್ನು ನಿಲ್ಲಿಸಿದ್ದು, ಸರ್ಕಾರ ವಿಶೇಷ ಪ್ರದರ್ಶನಕ್ಕೆ ಅನುಮತಿ ನೀಡಿದೆ. ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ಪ್ರತಿದಿನ 4 ಪ್ರದರ್ಶನಗಳನ್ನು ನೀಡಲು ಅನುಮತಿ ನೀಡಿದೆ. ಚಂಡೀಘಡದಲ್ಲೂ ಅಭಿಮಾನಿಗಳ ಹರ್ಷೋಧ್ಘಾರ ಮುಗಿಲು ಮುಟ್ಟಿದೆ