ಅಸ್ಸೊಂ: ಇಲ್ಲಿ ಹೀಗೆ ಬಾಳೆ ದಿಂಡಿನ ಮೇಲೆ ಶಾಲೆಗೆ ತೆರಳುತ್ತಿರುವ ಮಕ್ಕಳು, ಅವರನ್ನು ಸುರಕ್ಷಿತವಾಗಿ ಮತ್ತೊಂದು ತೀರಕ್ಕೆ ಕಳುಹಿಸುತ್ತಿರುವ ಪೋಷಕರು.. ಈ ದೃಶ್ಯ ಕಂಡುಬಂದಿದ್ದು ಅಸ್ಸೊಂನ ದಾರಂಗ್ ಜಿಲ್ಲೆಯಲ್ಲಿ.
ನದಿಯಂತಾದ ರಸ್ತೆಗಳಲ್ಲಿ ಮನೆಗಳಿಂದ ಹೊರಗೆ ತೆರಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಮಕ್ಕಳು ಬಾಳೆ ದಿಂಡಿನ ಸಹಾಯದಿಂದ ನದಿಯನ್ನು ದಾಟಿ ಶಾಲೆಗೆ ತೆರಳುತ್ತಿದ್ದಾರೆ. ಅವರನ್ನು ಸುರಕ್ಷಿತವಾಗಿ ತಲುಪಿಸಲು ಅವರ ಪೋಷಕರು ಮುಂದಡಿಯಿಟ್ಟಿದ್ದಾರೆ.
-
Assam: Students cross a river on banana stems to reach their school in Darrang district. pic.twitter.com/i6w1DWzagU
— ANI (@ANI) August 6, 2019 " class="align-text-top noRightClick twitterSection" data="
">Assam: Students cross a river on banana stems to reach their school in Darrang district. pic.twitter.com/i6w1DWzagU
— ANI (@ANI) August 6, 2019Assam: Students cross a river on banana stems to reach their school in Darrang district. pic.twitter.com/i6w1DWzagU
— ANI (@ANI) August 6, 2019
ಮಳೆಯ ಭಾರಿ ಹೊಡೆತಕ್ಕೆ ತತ್ತರಿಸಿರುವ ಅಸ್ಸೋಂನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲೆಡೆ ನೀರು ಆವರಿಸಿರುವುದರಿಂದ ದಿನ ದೂಡಲು ಜನರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಶಾಲೆಗೆ ತೆರಳುವ ಮಕ್ಕಳ ಪಾಡು ಹೇಳತೀರದಾಗಿದೆ.