ಹಿಸ್ಸಾರ್ (ಹರಿಯಾಣ): ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕಿ ವಿಚಿತ್ರ ಶಿಕ್ಷೆ ಕೊಟ್ಟಿದ್ದು, 4 ನೇ ತರಗತಿ ಬಾಲಕಿ ಮುಖಕ್ಕೆ ಕಪ್ಪು ಬಣ್ಣ ಬಳಿದು ಶಾಲೆಯ ಆವರಣದಲ್ಲಿ ಓಡಾಡುವಂತೆ ಹೇಳಿದ್ದಾರೆ.
ಹರಿಯಾಣದ ಹಿಸ್ಸಾರ್ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ಡಿಸೆಂಬರ್ 6ರಂದು ನಡೆದ ಪರೀಕ್ಷೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೀಗಾಗಿ 9 ವರ್ಷದ ಬಾಲಕಿಗೆ ಶಿಕ್ಷಕಿ ಈ ರೀತಿಯ ಶಿಕ್ಷೆ ಕೊಟ್ಟಿದ್ದಾರೆ. ಕಪ್ಪು ಬಣ್ಣ ಬಳಿದು ಆವರಣದಲ್ಲಿ ಓಡಾಡುವಂತೆ ಮಾಡಿದ್ದರಿಂದ ಬಾಲಕಿಗೆ ಅವಮಾನ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೂರು ವರ್ಷಗಳಿಂದ ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ ಈ ತಾಯಿ... ಕಾರಣ ?
ಘಟನೆ ಖಂಡಿಸಿ ಪ್ರತಿಭಟನೆಗೆ ನಿಂತಿರುವ ಬಾಲಕಿ ಪೋಷಕರು ಶಾಲೆಯನ್ನು ಮುಚ್ಚುವಂತೆ ಹಠ ಹಿಡಿದಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.