ETV Bharat / bharat

ಪರೀಕ್ಷೆ ತಪ್ಪಿಸಿಕೊಳ್ಳಲು ಮಾಸ್ಟರ್​ ಪ್ಲಾನ್​... ಮೂರು ವರ್ಷದ ಮಗು ಕಿಡ್ನಾಪ್​ ಮಾಡಿದ ವಿದ್ಯಾರ್ಥಿ!

ನಾಳೆಯಿಂದ ನಡೆಯಬೇಕಾಗಿದ್ದ ಪರೀಕ್ಷೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಯೊಬ್ಬ ಮಗುವಿನ ಕಿಡ್ನಾಪ್​ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Mar 3, 2020, 9:32 AM IST

Updated : Mar 3, 2020, 9:51 AM IST

ಮೊರೆನಾ(ಮಧ್ಯಪ್ರದೇಶ): 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ವಾರ್ಷಿಕ ಪರೀಕ್ಷೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಾಸ್ಟರ್​ ಪ್ಲಾನ್​ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಾಳೆಯಿಂದ ಶುರುವಾಗಲಿದ್ದ ವಾರ್ಷಿಕ ಪರೀಕ್ಷೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸೋದರಸಂಬಂಧಿ ಮಗುವನ್ನ ಕಿಡ್ನಾಪ್​ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ. ವಿದ್ಯಾರ್ಥಿಯನ್ನ 18 ವರ್ಷದ ರಣಬೀರ್​ ಎಂದು ಗುರುತಿಸಲಾಗಿದ್ದು, ಮೂರು ವರ್ಷದ ಮಗು ಮಲಗಿದ್ದ ವೇಳೆ ತೆಗೆದುಕೊಂಡು ಹೋಗಿದ್ದು, ಸ್ಥಳದಲ್ಲೇ ಪತ್ರವೊಂದನ್ನ ಬರೆದಿಟ್ಟಿದ್ದ. ಮಗು ಕಿಡ್ನಾಪ್​ ಹಿನ್ನೆಲೆಯಲ್ಲಿ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ದೂರು ದಾಖಲಿಸಿಕೊಂಡು ಸ್ಥಳಕ್ಕಾಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ, ವಿದ್ಯಾರ್ಥಿ ಬರೆದಿಟ್ಟ ಪತ್ರ ಪತ್ತೆಹಚ್ಚಿದ್ದರು. ಇದೇ ಪತ್ರದ ಆಧಾರದ ಮೇಲೆ ಆತ ಅವಿತುಕೊಂಡಿದ್ದ ಸ್ಥಳ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವಿನ ರಕ್ಷಣೆ ಮಾಡಿರುವ ಪೊಲೀಸರು, ವಿದ್ಯಾರ್ಥಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು, ಈ ವೇಳೆ ಆತ ತಾನು ಮಗುವನ್ನ ಏತಕ್ಕಾಗಿ ಕಿಡ್ನಾಪ್​ ಮಾಡಿದ್ದೆ ಎಂಬ ಅಂಶವನ್ನ ಪೊಲೀಸರೆದರು ಬಾಯ್ಬಿಟ್ಟಿದ್ದ. ಪ್ರಾಥಮಿಕ ವಿಚಾರಣೆ ಬಳಿಕ ಆತನ ಮೇಲೆ ಕಿಡ್ನಾಪ್​ ಪ್ರಕರಣ ದಾಖಲು ಮಾಡಲಾಗಿದೆ.

Last Updated : Mar 3, 2020, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.