ಹಜಾರಿಬಾಗ್: ಜಿಲ್ಲೆಯ ಕಾಟ್ಕಾಮ್‌ದಾಗ್ ಬ್ಲಾಕ್‌ನ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಕೆಜಿವಿಕೆ (Krishi Gram Vikas Kendra) ಸಹಾಯದಿಂದ ರೈತರು ಸ್ಟ್ರಾಬೆರಿ ಬೆಳೆಯಲು ಪ್ರಾರಂಭಿಸಿದ್ದಾರೆ. ಕೆಂಪು ಸ್ಟ್ರಾಬೆರಿಗಳನ್ನು ಬೆಳೆದ ರೈತರು ಮಾರುಕಟ್ಟೆಗಳಿಗೆ ಸಾಗಿಸುವ ಮೂಲಕ ಕೈ ತುಂಬಾ ಆದಾಯ ನೋಡುತ್ತಿದ್ದಾರೆ.
ಭವಿಷ್ಯದಲ್ಲಿ ಹಜಾರಿಬಾಗ್ ಜಿಲ್ಲೆಯ ಎಲ್ಲಾ ರೈತರು ಸ್ಟ್ರಾಬೆರಿ ಬೆಳೆ ಬೆಳೆಯಲು ಉತ್ಸಾಹ ತೋರುತಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರದ ಪ್ರಾಯೋಗಿಕ ಯೋಜನೆಯಡಿ ಹಜಾರಿಬಾಗ್‌ನ ಕಾಟ್‌ಕಮ್‌ಡಾಗ್ ಬ್ಲಾಕ್‌ನ ದೂರದ ಆದ್ರಾ ಗ್ರಾಮದಲ್ಲಿ ಸ್ಟ್ರಾಬೆರಿ ಕೃಷಿಯನ್ನು ಪ್ರಾರಂಭಿಸಲಾಗಿದೆ. ಈ ಗ್ರಾಮದ ವಿನಯ್ ಪ್ರಜಾಪತಿ, ಸಂಜೀವ್ ಪ್ರಜಾಪತಿ ಮತ್ತು ತೇಜ್ ನಾರಾಯಣ್ ಪ್ರಜಾಪತಿ ಎಂಬ ರೈತರು ಕೆಜಿವಿಕೆ ಬೆಂಬಲದಿಂದ ಸ್ಟ್ರಾಬೆರಿ ಬೆಳೆದಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಹಜಾರಿಬಾಗ್‌ನ ಸ್ಥಳೀಯ ಮಾರುಕಟ್ಟೆಗಳಲ್ಲಿ ಸ್ಟ್ರಾಬೆರಿಗಳನ್ನು ಮಾರಾಟ ಮಾಡಿದ್ದಾರೆ. ಸ್ಟ್ರಾಬೆರಿ ಬೆಳೆಯಿಂದ ಖರ್ಚು ಮಾಡಿದ ಮೊತ್ತಕ್ಕಿಂತ 4 ಪಟ್ಟು ಹೆಚ್ಚು ಹಣ ಗಳಿಸುತ್ತಿರುವ ರೈತರು, ಸ್ಟ್ರಾಬೆರಿಯನ್ನು ಲಾಭದಾಯಕ ಬೆಳೆ ಎಂದೇ ಹೇಳುತ್ತಿದ್ದಾರೆ.
ಸಾಂಪ್ರದಾಯಿಕ ಕೃಷಿಗಿಂತ ಭಿನ್ನವಾದ ಈ ಬೆಳೆಯಲ್ಲಿ ರೈತರು ನಿರೀಕ್ಷೆಗತಿಂತ ಹೆಚ್ಚು ಲಾಭ ಪಡೆಯಬಹುದು. ಈ ಕಾರಣಕ್ಕಾಗಿ ಪ್ರಸ್ತುತ ಸರ್ಕಾರದ ಪೈಲಟ್ ಯೋಜನೆಯಡಿ ಇದನ್ನು ಮುಂದಿನ ವರ್ಷ ಹಜಾರಿಬಾಗ್‌ನ 14 ಹಳ್ಳಿಗಳಲ್ಲಿ ಈ ಬೆಳೆಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರಂಭದಲ್ಲಿ ಸ್ವಲ್ಪ ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆದಿರುವ ರೈತರು ಸದ್ಯ ಕೆಜಿಗೆ 600ರಿಂದ 1200 ರೂಪಾಯಿಗಳವರೆಗೆ ಬೆಲೆ ಇರುವುದರಿಂದ ಹೆಚ್ಚು ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: 11 ಶಾಸಕರು ಪಕ್ಷ ತೊರೆಯಬಹುದು : ಬಿಹಾರ ಕಾಂಗ್ರೆಸ್ ಮುಖಂಡ