ಆಗ್ರಾ (ಉ.ಪ್ರ.): ನಗರದಲ್ಲಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸಿರುವುದರಿಂದ ತಾಜ್ ಮಹಲ್‌ನ ರಾಯಲ್ ಗೇಟ್ಗೆ ಹಾನಿಯಾಗಿದೆ.
![storms-damage](https://etvbharatimages.akamaized.net/etvbharat/prod-images/09:20_up-agr-02-hurricane-at-a-speed-of-120-kilometers-per-hour-in-agra-and-destruction-on-tajmahal-photo-7203925_30052020090225_3005f_1590809545_914.jpg)
ತಾಜ್ ಮಹಲ್, ಫತೇಪುರ್ ಸಿಕ್ರಿ ಮತ್ತು ಆಗ್ರಾ ಕೋಟೆ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಐತಿಹಾಸಿಕ ತಾಣಗಳು ಜಿಲ್ಲೆಯಲ್ಲಿ ಬೀಸಿದ ಅನಿರೀಕ್ಷಿತ ಗುಡುಗು ಸಹಿತ ಗಾಳಿಯಿಂದಾಗಿ ಹಾನಿಗೊಳಗಾಗಿವೆ.
![storms-damage](https://etvbharatimages.akamaized.net/etvbharat/prod-images/09:20_up-agr-02-hurricane-at-a-speed-of-120-kilometers-per-hour-in-agra-and-destruction-on-tajmahal-photo-7203925_30052020090225_3005f_1590809545_206.jpg)
ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದು ಹೆಣ್ಣು ಮಗು ಸೇರಿದಂತೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹಲವಾರು ಭಾಗಗಳಲ್ಲಿ ಸುಮಾರು 50 ನಿಮಿಷಗಳ ಕಾಲ ಬಿರುಗಾಳಿ ಬೀಸಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು.