ETV Bharat / bharat

ಕೋವಿಡ್ ಎಫೆಕ್ಟ್.. ಆಂಧ್ರದ ದೇವರಗಟ್ಟು ಗ್ರಾಮದಲ್ಲಿ ಬನ್ನಿ ಹಬ್ಬ ರದ್ದು..! - ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗುಟ್ಟು ಗ್ರಾಮ

ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ಬನ್ನಿ ಹಬ್ಬವನ್ನು ರದ್ದುಗೊಳಿಸಿ, 144 ಸೆಕ್ಷನ್​​​ ಅನ್ನು ಜಾರಿಗೊಳಿಸಲಾಗಿದೆ.

Kurnool
ಬನ್ನಿ ಹಬ್ಬ
author img

By

Published : Oct 26, 2020, 1:59 PM IST

Updated : Oct 26, 2020, 2:05 PM IST

(ಕರ್ನೂಲ್) ಆಂಧ್ರಪ್ರದೇಶ: ಕೋವಿಡ್ ವ್ಯಾಪಕವಾಗಿ ವ್ಯಾಪಿಸುತ್ತಿರುವ ಹಿನ್ನೆಲೆ, ಆಂಧ್ರದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ಆಚರಿಸಲಾಗುತ್ತಿದ್ದ ಬನ್ನಿ ಹಬ್ಬವನ್ನು ಈ ವರ್ಷ ರದ್ದುಗೊಳಿಸಲಾಗಿದೆ.

ಜನ ನಿಯಂತ್ರಣಕ್ಕೆ ಆಂಧ್ರ, ಕರ್ನಾಟಕ ಗಡಿಯಲ್ಲಿ 11 ಚೆಕ್​ಪೋಸ್ಟ್​​ಗಳನ್ನ ಸ್ಥಾಪಿಸಲಾಗಿದೆ. ಆಲೂರು, ಹೊಲಗೊಂಡ, ಹಲಹರ್ವಿ ಮಂಡಲಗಳಿಗೆ ಕೆಎಸ್​ಆರ್​ಟಿಸಿ ಬಸ್​​ಗಳನ್ನ ನಿರ್ಬಂಧಿಸಲಾಗಿದೆ. ಆದ್ರೂ, ಜನರು ಬನ್ನಿ ಹಬ್ಬ ಆಚರಣೆಗೆ ಸ್ವಂತ ವಾಹನಗಳ ಮೂಲಕ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ದೇವರಗಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ.

ಇನ್ನೂ, ದೇವರಗಟ್ಟುಗೆ ಭೇಟಿ ನೀಡಿದ ಅಡೋನಿ ಡಿಎಸ್​ಪಿ ಮತ್ತು ಡಿಆರ್​​​ಒ ಇಂದು ಬೆಳಗ್ಗೆ ಸಚಿವ ಗುಮ್ಮನುರಿ ಜಯರಾಮ್​ರನ್ನು ಭೇಟಿ ಮಾಡಿ ಜನರು ಈ ಬಾರಿ ಬನ್ನಿ ಹಬ್ಬ ಆಚರಿಸದಂತೆ ತಿಳಿಸಿ ಎಂದು ಹೇಳಿದರು.

ದೇವರಕೊಂಡ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಪ್ರತಿ ವರ್ಷ ವಿಜಯದಶಮಿಯ ಮರುದಿನ ಬನ್ನಿ ಹಬ್ಬ ಆಚರಿಸುತ್ತಾರೆ. ಅಲ್ಲದೆ ದೇವಿಯ ವಿಗ್ರಹಗಳನ್ನ ಹೊತ್ತು ಮೆರವಣಿಗೆ ಮಾಡುತ್ತಾರೆ. ಈ ವೇಳೆ ಜನರು ತುಳಿತಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜನಸಂದಣಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದ್ದು, ಕೋವಿಡ್ ಹರಡದಂತೆ ಮುಂಜಾಗ್ರತೆ ಕೈಗೊಂಡಿದೆ.

Last Updated : Oct 26, 2020, 2:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.