ನವದೆಹಲಿ : ಭಾರತ ಮೂಲದ ಸ್ಟಾಂಡ್ ಅಪ್ ಕಾಮಿಡಿಯನ್ ಮಂಜುನಾಥ್ ನಾಯ್ಡು ದುಬೈಯ ವೇದಿಕೆಯೊಂದರಲ್ಲಿ ಕಾಮಿಡಿ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವೇದಿಕೆ ಮೇಲೆ ಕಾಮಿಡಿ ಮಾಡುತ್ತಿದ್ದ ಮಂಜುನಾಥ್ ನಾಯ್ಡುಗೆ ಹೃದಯಾಘಾತವಾಗಿ ನೆಲಕ್ಕೆ ಬಿದ್ದಿದ್ದಾರೆ. ಆದ್ರೆ ಮುಂದೆ ಕೂತಿದ್ದ ಪ್ರೇಕ್ಷಕರು ಮಂಜುನಾಥ್ ಕಾಮಿಡಿ ಮಾಡುತ್ತಿದ್ದಾರೆ ಎಂದು ಭಾವಿಸಿ ಜೋರಾಗಿ ಕೂಗ ತೊಡಗಿದ್ದರು, ಆದ್ರೆ ತುಂಬಾ ಹೊತ್ತಿನ ಬಳಿಕವೂ ಮಂಜುನಾಥ್ ಮೇಲೆಳದಿದ್ದನ್ನು ಗಮನಿಸಿದ ಕಾರ್ಯಕ್ರಮ ಆಯೋಜಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಷ್ಟರ ವೇಳೆಗಾಗಲೆ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಕಾಮಿಡಿ ಮಾಡುವ ವೇಳೆ ತನ್ನ ಮತ್ತು ಅವರ ತಂದೆಯ ವಿಷಯವನ್ನು ಇಟ್ಟುಕೊಂಡು ಹಾಸ್ಯ ಮಾಡುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದೆ. ಮಂಜುನಾಥ್ ನಾಯ್ಡು ಸ್ಥಳೀಯ ವಿಷಯಗಳನ್ನು ಬಳಸಿಕೊಂಡು ಹಾಸ್ಯ ಮಾಡುವುದರಲ್ಲಿ ನಿಪುಣರಾಗಿದ್ದರು.
ಇನ್ನು ಮಂಜುನಾಥ್ಗೆ 36 ವರ್ಷ ವಯಸ್ಸಾಗಿದ್ದು, ಅಬುದಾಬಿಯಲ್ಲಿ ಜನಿಸಿದ್ದಾರೆ, ನಂತರದ ದಿನಗಳಲ್ಲಿ ದುಬೈಗೆ ಅವರು ಮನೆ ಶಿಫ್ಟ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.