ETV Bharat / bharat

'ಗೀತಾ ಪ್ರೆಸ್'‌ನ ಹೆಮ್ಮೆಯ ಮಾಸಿಕ: ಹಿಂದೂ ಪರಂಪರೆಯನ್ನು ಸಾರುತ್ತಿರುವ 'ಕಲ್ಯಾಣ ಪತ್ರಿಕೆ'

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೀತಾ ಪ್ರೆಸ್‌ನ ಕಲ್ಯಾಣ ಪತ್ರಿಕೆಯು, ಕಳೆದ 92 ವರ್ಷಗಳಲ್ಲಿ 1,102 ಸಂಚಿಕೆಗಳನ್ನು ಪ್ರಕಟಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.

Geeta Press in Gorakhpur
ಹಿಂದೂ ಪರಂಪರೆಯನ್ನು ಸಾರುತ್ತಿರುವ 'ಕಲ್ಯಾಣ ಪತ್ರಿಕೆ'
author img

By

Published : Oct 23, 2020, 6:03 AM IST

ಉತ್ತರ ಪ್ರದೇಶ: ಪುರಾಣ ಪುಣ್ಯ ಕಥೆಗಳು, ಧರ್ಮ, ಭಕ್ತಿ, ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಯಲು ಜನರು ತುಂಬಾ ಇಷ್ಟಪಡುತ್ತಾರೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೀತಾ ಪ್ರೆಸ್‌ನ ಕಲ್ಯಾಣ ಪತ್ರಿಕೆಯು, ಹಲವಾರು ವರ್ಷಗಳಿಂದ ಜನರಿಗೆ ಈ ವಿಚಾರಗಳನ್ನು ಉಣಬಡಿಸುತ್ತದೆ. ಗೀತಾ ಪ್ರೆಸ್ ಅ​​​​ನ್ನು 1926ರಲ್ಲಿ ಪ್ರಾರಂಭಿಸಲಾಯಿತು. ಕಳೆದ 92 ವರ್ಷಗಳಲ್ಲಿ ಈ ಪತ್ರಿಕೆಯು 1,102 ಸಂಚಿಕೆಗಳನ್ನು ಪ್ರಕಟಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಪತ್ರಿಕೆಯ ಮುಖಪುಟದಲ್ಲಿ ದೇವತೆಗಳ ಅಪರೂಪದ ಚಿತ್ರಗಳನ್ನು ಹಾಕಲಾಗುತ್ತದೆ. ಇದು ಪತ್ರಿಕೆಯ ಬ್ರಾಂಡ್ ಮಾರ್ಕ್​ ಆಗಿ ಮಾರ್ಪಟ್ಟಿದೆ. ಗೀತಾ ಪ್ರೆಸ್ ಅ​​​ನ್ನು ಜಯದಾಲ್ ಗೋಯೆಂಕಾ ಮತ್ತು ಹನುಮಾನ್ ಪ್ರಸಾದ್ ಪೋದ್ದಾರ್ ಎಂಬುವವರು ಪ್ರಾರಂಭಿಸಿದರು. ಇದೀಗ ಕಲ್ಯಾಣ ಪತ್ರಿಕೆಯ ಸಂಪಾದಕರಾಗಿ ರಾಧೇಶ್ಯಾಮ್ ಖೇಮ್ಕಾ ಮತ್ತು ಟ್ರಸ್ಟ್​​ನ ಅಧ್ಯಕ್ಷ ಹಾಗೂ ಪ್ರಕಾಶಕರಾಗಿ ದೇವದಯಾಲ್ ಅಗರ್‌ವಾಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಿಂದೂ ಪರಂಪರೆಯನ್ನು ಸಾರುತ್ತಿರುವ 'ಕಲ್ಯಾಣ ಪತ್ರಿಕೆ'

ಪತ್ರಿಕೆ ಪ್ರಕಟಣೆಯನ್ನು ಪ್ರಾರಂಭಿಸಿದಾಗ ಬ್ರಿಟಿಷ್ ಆಡಳಿತವಿತ್ತು. ಆದ್ದರಿಂದ ಆರಂಭದಲ್ಲಿ ಪತ್ರಿಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಇಂದು ಪತ್ರಿಕೆಯ ಸುಮಾರು ಎರಡು ಲಕ್ಷ ಪ್ರತಿಗಳನ್ನು ಪ್ರತಿ ತಿಂಗಳು ದೇಶದ ಮೂಲೆ ಮೂಲೆಗಳಿಗೆ ಅಂಚೆ ಮೂಲಕ ಕಳುಹಿಸಲಾಗುತ್ತಿದೆ.

1940 ರ ದಶಕದಲ್ಲಿ ಸ್ವಾತಂತ್ರ್ಯದ ಕೂಗು ಜೋರಾಗಿ ಕೇಳುತ್ತಿದ್ದಂತೆ, ಕಲ್ಯಾಣ ಪತ್ರಿಕೆ ಹಿಂದೂ ಮಹಾಸಭಾ ಪರವಾಗಿ ಇದೆ ಎಂದು ಆರೋಪಿಸಲಾಯಿತು. 1946 ರಲ್ಲಿ ಮದನ್ ಮೋಹನ್ ಮಾಳವಿಯಾ ಅವರ ಮರಣದ ನಂತರ, ಪತ್ರಿಕೆಯು ಮಾಳವಿಯಾಜಿ ಎಂಬ ವಿಶೇಷ ಸಂಚಿಕೆಯನ್ನು ಹೊರತಂದಿತು. ಆದರೆ ಯುನೈಟೆಡ್ ಪ್ರಾಂತ್ಯಗಳು ಮತ್ತು ಬಿಹಾರ ಸರ್ಕಾರವು ಅದನ್ನು ‘ಆಕ್ಷೇಪಾರ್ಹ’ ಎಂದು ಹೇಳಿದ್ದವು.

ಸ್ವಲ್ಪ ಸಮಯದ ನಂತರ ಈ ಪತ್ರಿಕೆಯು ರಾಮನಾಮ್ ಪಠಣ ಅಭಿಯಾನ ಪ್ರಾರಂಭಿಸಿತು. ಹಾಗೂ ಸಾರ್ವಜನಿಕರಿಂದ ಬಂದ ಪತ್ರಗಳನ್ನು ಪ್ರಕಟಿಸುತ್ತಿದ್ದರು. ಈ ಮೂಲಕ ರಾಮನಾಮ್ ಜಪದ ಪ್ರಯೋಜನ ಏನು ಎಂದು ಬರೆಯುತ್ತಿದ್ದರು. ಇದರೊಂದಿಗೆ ಪತ್ರಿಕೆ ರಾಮಾಯಣದ ಬಗ್ಗೆಯೂ ಪರೀಕ್ಷೆ ನಡೆಸಿತು.

ಹಿಂದೂ ಸಂಹಿತೆ ಮಸೂದೆಯನ್ನು ನಾಲ್ಕು ಭಾಗಗಳಲ್ಲಿ ಅಂಗೀಕರಿಸುವವರೆಗೂ ಕಲ್ಯಾಣ ಪತ್ರಿಕೆಯು ಅಭಿಯಾನವನ್ನು ನಡೆಸಿತು. ಈಗಲೂ ಕೂಡ ಈ ಪತ್ರಿಕೆ ಜನರ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುತ್ತಿದೆ. ಅದಕ್ಕಾಗಿಯೇ ಗೋರಖ್‌ಪುರದ ಗೀತಾ ಪ್ರೆಸ್‌ನ ಯಶಸ್ಸಿನ ಕಥೆ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಚರ್ಚೆಯ ವಿಷಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.