ETV Bharat / bharat

ವಿಶೇಷ ಅಂಕಣ: ಹೇಗಿದೆ ಭಾರತ-ಬ್ರೆಜಿಲ್​​​​ ನಡುವಿನ ಪರಸ್ಪರ ಹಿತಾಸಕ್ತಿಗಳ ಸಂಬಂಧ?

author img

By

Published : Jan 27, 2020, 2:56 PM IST

ಭಾರತದ ಆಹ್ವಾನದ ಮೇರೆಗೆ ಬ್ರೆಜಿಲ್‌ ಅಧ್ಯಕ್ಷ ಜೈರ್ ಬೋಲ್ಸೆನಾರೋ ಭಾರತದ ಗಣರಾಜ್ಯೋತ್ಸವ ಪರೇಡ್‌ನ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಧಿಕಾರಿಗಳು ಮತ್ತು 59 ಪ್ರಮುಖ ಸಮುದಾಯವನ್ನು ಒಳಗೊಂಡ ಬೃಹತ್ ನಿಯೋಗದೊಂದಿಗೆ ಅವರು ಭಾರತಕ್ಕೆ ಆಗಮಿಸಿದ್ದರು. ಜನವರಿ 25ರಂದು ಭಾರತದ ನಿಯೋಗದೊಂದಿಗೆ ಹಲವು ಮಾತುಕತೆ ನಡೆಸಿದ್ದಾರೆ.

India Brazil Relationship of mutual interests
ಬ್ರೆಜಿಲ್‌ ಅಧ್ಯಕ್ಷ ಜೈರ್ ಬೋಲ್ಸೆನಾರೋ, ಪ್ರಧಾನಿ ನರೇಂದ್ರ ಮೋದಿ

ಭಾರತದ ಆಹ್ವಾನದ ಮೇರೆಗೆ ಬ್ರೆಜಿಲ್‌ ಅಧ್ಯಕ್ಷ ಜೈರ್ ಬೋಲ್ಸೆನಾರೋ ಭಾರತದ ಗಣರಾಜ್ಯೋತ್ಸವ ಪರೇಡ್‌ನ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಧಿಕಾರಿಗಳು ಮತ್ತು 59 ಪ್ರಮುಖ ಸಮುದಾಯವನ್ನು ಒಳಗೊಂಡ ಬೃಹತ್ ನಿಯೋಗದೊಂದಿಗೆ ಅವರು ಭಾರತಕ್ಕೆ ಆಗಮಿಸಿದ್ದರು. ಜನವರಿ 25ರಂದು ಭಾರತದ ನಿಯೋಗದೊಂದಿಗೆ ಹಲವು ಮಾತುಕತೆ ನಡೆಸಿದ್ದಾರೆ.

ಬೊಲ್ಸೆನಾರೋ ಬಲಪಂಥೀಯ ದೃಷ್ಟಿಕೋನವನ್ನು ಹೊಂದಿದ್ದರಿಂದ ಅವರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದ್ದು ಕೆಲವರಿಗೆ ಅಪಥ್ಯವೂ ಆಗಿತ್ತು. ಅವರನ್ನು ಸ್ತ್ರೀ ದ್ವೇಷಿ ಹಾಗೂ ಸಲಿಂಗ ಕಾಮದ ವಿರೋಧಿಯೂ ಆಗಿದ್ದಾರೆ ಎಂದು ಅವರ ವಿರುದ್ಧ ಆರೋಪಗಳಿವೆ. ಸೇನೆಯ ಮಾಜಿ ಅಧಿಕಾರಿ ಬೊಲ್ಸೆನಾರೋ 2018ರ ವರೆಗೂ ಬ್ರೆಜಿಲ್ ರಾಜಕೀಯದಲ್ಲಿ ಅಷ್ಟೇನೂ ಮುನ್ನೆಲೆಗೆ ಬಂದಿರಲಿಲ್ಲ. ಸತತ ಏಳು ಅವಧಿಗೆ ಅವರು ಹಲವು ಅಧೀನ ಹುದ್ದೆಗಳನ್ನು ನಿರ್ವಹಿಸಿದ್ದರು. ಆದರೆ ಪ್ರಮುಖ ಪ್ರತಿಸ್ಫರ್ಧಿ ಮತ್ತು ಮಾಜಿ ಅಧ್ಯಕ್ಷ ಲುಲಾ ಅನರ್ಹಗೊಂಡ ನಂತರದಲ್ಲಿ, ಬೊಲ್ಸೆನಾರೊ ಸುಲಭವಾಗಿ ಅಧಿಕಾರಕ್ಕೇರುವಂತಾಗಿತ್ತು.

ಬೊಲ್ಸೆನಾರೊ ಹೊಂದಿರುವ ಚಿಂತನೆಗಳು ಏನೇ ಇದ್ದರೂ, ಅವರು ಕಾನೂನಾತ್ಮಕವಾಗಿ ಆಯ್ಕೆಯಾಗಿ ಅಧ್ಯಕ್ಷ ಹುದ್ದೆಗೇರಿದ್ದಾರೆ. ಹಲವು ದೊಡ್ಡ ದೊಡ್ಡ ಮತ್ತು ಸ್ನೇಹಪರ ದೇಶಗಳು ಇದ್ದಾಗಲೂ ಯಾಕೆ ಬ್ರೆಜಿಲ್‌ನ ಅಧ್ಯಕ್ಷರನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಯಾರಾದರೂ ಕೇಳಬಹುದು. ಆದರೆ ಕಾರಣ ಹುಡುಕುವುದು ಕಷ್ಟವೇನಲ್ಲ. ರಾಜಕೀಯವಾಗಿ, ಭಾರತದ ಕೆಲವೇ ಪ್ರಮುಖ ಪಾಲುದಾರರಲ್ಲಿ ಬ್ರೆಜಿಲ್ ಕೂಡ ಒಂದಾಗಿದ್ದು, ಈ ಕುರಿತ ಒಪ್ಪಂದಕ್ಕೆ 2006 ರಲ್ಲಿ ಸಹಿ ಹಾಕಲಾಗಿದೆ. ಇದು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ), ಐಬಿಎಸ್‌ಎ (ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ) ಮತ್ತು ಜಿ20 ಸದಸ್ಯರಾಷ್ಟ್ರವೂ ಹೌದು. ಜಿ4 (ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್) ಸದಸ್ಯನಾಗಿರುವ ಬ್ರೆಜಿಲ್ ಮತ್ತು ಭಾರತ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಶಾಶ್ವತ ಸದಸ್ಯತ್ವ ಪಡೆಯಲು ಶ್ರಮಿಸುತ್ತಿದ್ದು, ಇದಕ್ಕೆ ಎರಡೂ ದೇಶಗಳು ಪೂರಕವಾಗಿವೆ. ವಿಶ್ವಸಂಸ್ಥೆಯಲ್ಲಿ ಬ್ರೆಜಿಲ್‌ ಎಂದಿಗೂ ಭಯೋತ್ಪಾದನೆ, ಎಸ್‌ಡಿಜಿ ಮತ್ತು ಶಾಂತಿ ಉಪಕ್ರಮಗಳ ಬಗ್ಗೆ ಭಾರತದ ನಿಲುವನ್ನು ಬೆಂಬಲಿಸಿದೆ.

ವ್ಯಾಪಾರದ ವಿಚಾರದಲ್ಲಿ ಎರಡೂ ದೇಶಗಳು ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿವೆ. ಬ್ರೆಜಿಲ್ 2010 ರಲ್ಲಿ ಆರ್ಥಿಕ ಕುಸಿತವನ್ನು ಅನುಭವಿಸಿದ ನಂತರ ಎರಡೂ ದೇಶಗಳ ಜಿಡಿಪಿ ಬಹುತೇಕ ಒಂದೇ ಸ್ಥಿತಿಯಲ್ಲಿದೆ. ಭಾರತದ ಆರ್ಥಿಕತೆಯೂ ಈಗ ಇಳಿಕೆ ಗತಿಯಲ್ಲಿದೆ. ಆದರೆ ಬ್ರೆಜಿಲ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಇರುವುದರಿಂದ ಮತ್ತು ಹೈಬ್ರಿಡ್‌ ಎನರ್ಜಿಗೆ ಅಗತ್ಯವಿರುವ ಎಥೆನಾಲ್‌ನ ಅತ್ಯಂತ ಪ್ರಮುಖ ಸಂಪನ್ಮೂಲ ಬ್ರೆಜಿಲ್ ಆಗಿರುವುದರಿಂದ ಭಾರತಕ್ಕೆ ಇದು ಇಂದಿಗೂ ಪ್ರಮುಖ ದೇಶವಾಗಿದೆ. ಇನ್ನು ಕಚ್ಚಾ ತೈಲದ ವಿಚಾರದಲ್ಲೂ, ಬ್ರೆಜಿಲ್‌ನಲ್ಲಿ ಅಮದಾಜು 82 ಬಿಲಿಯನ್ ಬ್ಯಾರೆಲ್‌ನಷ್ಟು ಕಚ್ಚಾ ತೈಲವಿದೆ. ಗಲ್ಫ್‌ ವಲಯದಲ್ಲಿ ಪ್ರಸ್ತುತ ಅಸ್ಥಿರ ಸನ್ನಿವೇಶವಿದ್ದು ಇದು ಸಾಂಪ್ರದಾಯಿಕ ಇಂಧನದ ಮೂಲವಾಗಿಯೂ ಬಳಕೆಯಾಗಬಹುದು. ಈ ವಲಯದಲ್ಲಿ ಬ್ರೆಜಿಲ್ ಜೊತೆಗೆ ಈಗಾಗಲೇ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಸಕ್ಕರೆ, ಕಾಫಿ, ಸೋಯಾಬೀನ್ಸ್‌ ಅನ್ನು ಉತ್ಪಾದಿಸುವ ಅತಿದೊಡ್ಡ ದೇಶವೂ ಆಗಿದೆ. ಇದರ ಒಟ್ಟಾರೆ ಫಲವತ್ತಾದ ಭೂಮಿಯ ಪೈಕಿ ಶೇ. 20 ರಷ್ಟನ್ನು ಇದು ಬಳಸಿಕೊಳ್ಳುತ್ತಿದೆ.

ಭಾರತಕ್ಕೆ ಹೋಲಿಸಿದರೆ ಇದು 2.7 ಪಟ್ಟು ಆಗಿದೆ. ಬ್ರೆಜಿಲ್‌ನಲ್ಲಿ ವಿಶ್ವದ ಶೇ. 20 ಕ್ಕೂ ಹೆಚ್ಚು ಅರಣ್ಯವೂ ಇದೆ. ಇಲ್ಲಿ ಅಮೇಜಾನ್ ಮಳೆಕಾಡುಗಳಿವೆ. ಈ ಅರಣ್ಯವು ಜೀವ ವೈವಿಧ್ಯ ಮತ್ತು ಔಷಧೀಯ ಸಸ್ಯಗಳ ಸಂಗ್ರಹವೇ ಇದೆ. ಉತ್ಪಾದನೆ ವಲಯದಲ್ಲಿ ಬ್ರೆಜಿಲ್ ಮಾಡಿದ ಮಹತ್ವದ ಪ್ರಗತಿಯು ನಮಗೆ ಪಾಠವಾದೀತು ಮತ್ತು ಇದು ಮುಂದಿನ ದಿನಗಳಲ್ಲಿ ಸಹಕಾರಕ್ಕೂ ಪೂರಕವಾದೀತು. 1896 ರಲ್ಲಿ ನಮ್ಮ ಗಿರ್ ವಲಯದಿಂದ 700 ಆಕಳುಗಳನ್ನು ಆಮದು ಮಾಡಿಕೊಂಡಿದ್ದ ಬ್ರೆಜಿಲ್‌ ಈಗ ವಿಶ್ವದ ಪ್ರಮುಖ ಮಾಂಸ ರಫ್ತುದಾರನಾಗಿದೆ. ಅಷ್ಟೇ ಅಲ್ಲ, ಇದು ಪ್ರಮುಖವಾದ ಹಾಲು ಉತ್ಪನ್ನಗಳ ಉತ್ಪಾದಕನೂ ಆಗಿದೆ. ಜೊತೆಗೆ ಇದು ಜಾನುವಾರುಗಳ ತಳಿಯ ಸುಧಾರಣೆಯಲ್ಲೂ ಮಹತ್ವದ ಸಾಧನೆ ಮಾಡಿದೆ. ಬ್ರೆಜಿಲ್ ಪ್ರಮುಖ ಸದಸ್ಯನಾಗಿರುವ ಮೆರ್ಕೊಸುರ್‌ನ ಜೊತೆಗೆ ನಾವು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದೇವೆ.

ಸಾಮಾಜಿಕವಾಗಿ ಬಡತನವನ್ನು ನಿವಾರಿಸುವಲ್ಲಿ ಬ್ರೆಜಿಲ್ ಹಮ್ಮಿಕೊಂಡ ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದು. ಬ್ರೆಜಿಲ್‌ನಲ್ಲಿ ಜಾರಿಗೆ ತಂದಿರುವ ಬೋಲ್ಸಾ ಫೆಮಿಲಿಯಾ (ಕುಟುಂಬ ಪ್ಯಾಕೇಜ್) ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ಮಾಸಿಕ ಬೆಂಬಲ ಮೊಮತ್ತವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದನ್ನು ದೇಶದ ಬಿಪಿಎಲ್ ಕುಟುಂಬಗಳಿಗೆ ಹಣಕಾಸು ಬೆಂಬಲ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಈ ಕುಟುಂಬಗಳು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಮಕ್ಕಳನ್ನು ನಿತ್ಯ ಶಾಲೆಗೆ ಕಳುಹಿಸಬೇಕು. ಇದನ್ನು ಭಾರತದಲ್ಲಿ ಇತ್ತೀಚೆಗೆ ಭಾಗಶಃ ಅನುಷ್ಠಾನಕ್ಕೆ ತರಲಾಗಿದೆ. ಹೀಗಾಗಿ ಪರಸ್ಪರ ಅಭಿವೃದ್ಧಿಯಲ್ಲಿ ನೆರವಾಗುವ ಬ್ರೆಜಿಲ್ ಪ್ರಮುಖ ದೇಶವಾಗಿದೆ.

ಈ ಭೇಟಿಯ ವೇಳೆ, ಎರಡೂ ದೇಶಗಳು ಸುಮಾರು 15 ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿವೆ, ಉದ್ಯಮ, ನಾಗರಿಕ ವಿಮಾನಯಾನ, ಆರೋಗ್ಯ, ಸಾಂಪ್ರದಾಯಿಕ ಔಷಧ, ಕೃಷಿ, ಇಂಧನ, ಗಣಿಗಾರಿಕೆ, ನಾವೀನ್ಯತೆ, ಪ್ರಾಣಿ ಸಾಕಾಣಿಕೆ, ರಕ್ಷಣೆ ಸೇರಿದಂತೆ ಹಲವು ವಿಷಯಗಳಲ್ಲಿ ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದನ್ನು ಅನುಷ್ಠಾನಕ್ಕೆ ತಂದಲ್ಲಿ ನಮ್ಮ ದೇಶದ ಆರ್ಥಿಕತೆಗೆ ನೆರವಾಗಲಿದೆ.

Intro:Body:

FOR UPLOAD 4

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.