ETV Bharat / bharat

ಗಾಯಕ ಎಸ್​​ಪಿಬಿ ಆರೋಗ್ಯ ಸ್ಥಿರ... ಎಂಜಿಎಂ ಆಸ್ಪತ್ರೆ ಹೆಲ್ತ್​ ಬುಲೆಟಿನ್​​ ರಿಲೀಸ್​! - ಕೊರೊನಾ ವೈರಸ್​

ಕೊರೊನಾ ವೈರಸ್​​ನಿಂದಾಗಿ ಚೆನ್ನೈನ ಎಂಜಿಎಂ ಹೆಲ್ತ್​ ಕೇರ್​​​ನಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯದಲ್ಲಿ ಕಳೆದ ಎರಡು ದಿನಗಳಿಂದ ಸ್ಥಿರತೆ ಇದೆ ಎಂದು ಹೆಲ್ತ್​ ಬುಲೆಟಿನ್​ ರಿಲೀಸ್​ ಆಗಿದೆ.

SP Balasubrahmanyam
SP Balasubrahmanyam
author img

By

Published : Aug 24, 2020, 8:44 PM IST

ಚೆನ್ನೈ: ಕೊರೊನಾ ವೈರಸ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಂಜಿಎಂ ಆಸ್ಪತ್ರೆ ಹೆಲ್ತ್​ ಬುಲೆಟಿನ್​ ರಿಲೀಸ್​ ಮಾಡಿದೆ.

SP Balasubrahmanyam
ಗಾಯಕ ಎಸ್​​ಪಿಬಿ ಆರೋಗ್ಯ ಸ್ಥಿರ: ಹೆಲ್ತ್​ ಬುಲೆಟಿನ್​

ಆಗಸ್ಟ್​ 5ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದಲ್ಲಿ ಹೆಚ್ಚಿನ ಏರುಪೇರು ಕಾಣಿಸಿಕೊಂಡಿರುವ ಕಾರಣ ಆಗಸ್ಟ್​ 13ರಂದು ಐಸಿಯುನಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿರುವ ಆಸ್ಪತ್ರೆ ಸದ್ಯ ಅವರಿಗೆ ವೆಂಟಿಲೇಟರ್ ಇಸಿಎಂಒ ಸಪೋರ್ಟ್​ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯ ವೈದ್ಯಕೀಯ ಟೀಂನಿಂದ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದೆ.

ಅವರಿಗೆ ಕೊರೊನಾ ನೆಗೆಟಿವ್​ ಬಂದಿದೆ ಎಂಬ ಮಾಹಿತಿ ಹರಿದಾಡುತ್ತಿದ್ದಂತೆ ಖುದ್ದಾಗಿ ಅವರ ಮಗ ಎಸ್​.ಪಿ ಚರಣ್​ ಮಾಹಿತಿ ನೀಡಿದ್ದು, ನಾನು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಿನ್ನೆಯಿಂದ ನಮ್ಮ ತಂದೆ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ವರದಿ ಇನ್ನೂ ಬಂದಿಲ್ಲ. ತಂದೆಯ ರಿಪೋರ್ಟ್​ ನೆಗೆಟಿವ್ ಬರುವುದಾಗಿ ನಾವೂ ಕೂಡಾ ನಂಬಿದ್ದೇವೆ. ಅಷ್ಟೇ ಅಲ್ಲ ವೆಂಟಿಲೇಟರ್​​​ ಮೂಲಕವೇ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಶೀಘ್ರವೇ ಅವರು ಗುಣಮುಖರಾಗಲಿದ್ದಾರೆ. ತಂದೆ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.