ಕೊಲ್ಕತ್ತಾ: ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ಅವರಿಗೆ ಕೋವಿಡ್-19 ದೃಢಪಟ್ಟಿದೆ.
ಕೊಲ್ಕತ್ತಾದ ಖಾಸಗಿ ಪ್ರಯೋಗಾಲಯದಲ್ಲಿ ಸ್ನೇಹಶಿಶ್ ಅವರ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸಹೋದರನಿಗೆ ಕೋವಿಡ್ ಪಾಸಿಟಿವ್ ಹಿನ್ನೆಲೆ ಸೌರವ್ ಸೇರಿದಂತೆ ಅವರ ಎಲ್ಲಾ ಕುಟುಂಬ ಸದಸ್ಯರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
![Snehashish Ganguly tests positive for Covid-19](https://etvbharatimages.akamaized.net/etvbharat/prod-images/snehasish_1607newsroom_1594839772_825.jpg)
ಸೌರವ್ ಜುಲೈ 8ರಂದು ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಎಲ್ಲ ಸದಸ್ಯರೊಂದಿಗೆ ಆಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪರಿಷ್ಕೃತ ಆರೋಗ್ಯ ಸಲಹೆಯ ಪ್ರಕಾರ, 10 ದಿನಗಳ ಐಸೋಲೇಷನ್ ಕಡ್ಡಾಯವಾಗಿದೆ.