ಚೆನ್ನೈ: ಸೌರವ್ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಶಿಶ್ ಅವರನ್ನು ಹೊಸ ಕಾರ್ಯದರ್ಶಿಯಾಗಿ ನೇಮಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಸಜ್ಜಾಗಿದೆ ಎಂದು ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ.
ಫೆಬ್ರವರಿ 5 ರಂದು ಕೋಲ್ಕತ್ತಾದಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ಸಂಘವು ಅವಿಶೇಕ್ ದಾಲ್ಮಿಯಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಜ್ಜಾಗಿದ್ದು, ಅವರು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಸ್ನೇಹಶಿಶ್ ಗಂಗೂಲಿ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ, ಇವರು ಬಂಗಾಳ ಪರ 59 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 39.59 ಸರಾಸರಿಯಲ್ಲಿ 2,534 ರನ್ ಗಳಿಸಿದ್ದಾರೆ. ಆದಾಗ್ಯೂ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸ್ನೇಹಶಿಶ್ ಅವರ ಸಾಧನೆಯೂ ಸಾಧಾರಣವಾಗಿತ್ತು, ಏಕೆಂದರೆ ಅವರು 18 ಪಂದ್ಯಗಳಲ್ಲಿ ಕೇವಲ 2,733 ರನ್ಗಳನ್ನು 18.33 ಸರಾಸರಿಯಲ್ಲಿ ಪೇರಿಸಿದ್ದಾರೆ.
54 ವರ್ಷದ ಸ್ನೇಹಶಿಶ್ ಅವರನ್ನು ಬಂಗಾಳ ರಾಜ್ಯ ಸಂಘದ ಕಾರ್ಯದರ್ಶಿಯಾಗಿ ನೇಮಕ ಮಾಡಿದರೆ, ಅದು ದೇಶಾದ್ಯಂತ ಆಡಳಿತಾತ್ಮಕ ಪಾತ್ರಗಳಲ್ಲಿ ಮಾಜಿ ಕ್ರಿಕೆಟಿಗರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.
ಸೌರವ್ ಮತ್ತು ಸ್ನೇಹಶಿಶ್ ಹೊರತುಪಡಿಸಿ, ಮಾಜಿ ಅಂತಾರಾಷ್ಟ್ರೀಯ ಆಟಗಾರರಾಗಿ ಮೊಹಮ್ಮದ್ ಅಜರುದ್ದೀನ್ (ಹೈದರಾಬಾದ್ ಅಧ್ಯಕ್ಷ) ಮತ್ತು ರೋಜರ್ ಬಿನ್ನಿ (ಕರ್ನಾಟಕದ ಅಧ್ಯಕ್ಷ), ಜಯದೇವ್ ಷಾ (ಸೌರಾಷ್ಟ್ರ ಅಧ್ಯಕ್ಷ) ದೀರ್ಘಕಾಲ ಆಡಿದ್ದರು. ಸಂಜೀವ್ ರಾವ್ (ಮಧ್ಯಪ್ರದೇಶದ ಕಾರ್ಯದರ್ಶಿ) ಮತ್ತು ದೇವಾಜಿತ್ ಸೈಕಿಯಾ (ಅಸ್ಸಾಂ ಕಾರ್ಯದರ್ಶಿ) ಕೂಡ ತಮ್ಮ ರಾಜ್ಯಗಳನ್ನು ಪ್ರತಿನಿಧಿಸಿದ್ದರು.