ಹೈದರಬಾದ್: ಹೌದು, ನೀವು ನಿದ್ದೆಯಿಂದ ಏಳಲು ನಿಮ್ಮ ಫೋನ್ಗಳಲ್ಲಿ ಸೆಟ್ ಮಾಡುವ ಸಾಂಗ್ಗಳು ನಿಮ್ಮ ನಿದ್ದೆ, ನೀವು ಹೊಡೆಯುವ ಗೊರಕೆ ಹಾಗೂ ನಿದ್ದೆಯಿಂದ ಎದ್ದ ನಂತರ ನಿಮ್ಮ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಇತ್ತೀಚಿನ ಸಂಶೋಧನೆ ಹೇಳುತ್ತದೆ.
ಆರ್ಎಮ್ಐಟಿ ವಿಶ್ವವಿದ್ಯಾನಿಲಯ ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ, ಯಾವ ರೀತಿಯ ಅಲಾರಂಗಳು ಜನರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ತಿಳಿಸಿದೆ. ಸುಮಧುರವಾಗಿರುವ ಅಲಾರಂಗಳು ನಮ್ಮನ್ನು ಹೆಚ್ಚು ಜಾಗರೂಕತೆಯಿಂದ ಇರುವಂತೆ ಮಾಡಿದರೆ, ಬಿರುಸಾದ(ಹಾರ್ಶ್) ಅಲಾರಂಗಳು ಬೆಳಗಿನ ಗೊರಕೆ ಮಟ್ಟವನ್ನು ಹೆಚ್ಚಿಸುತ್ತದೆ.
ಪಿಎಲ್ಒಎಸ್ ಒನ್ ಎಂಬ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನವೂ ಹಲವರನ್ನು ಚಕಿತಗೊಳಿಸಿವೆ. ಏಕೆಂದರೆ, 'ಬೀಪ್ ಬೀಪ್ ಬೀಪ್' ಅಲಾರಂಗಳು ನಮ್ಮನ್ನು ಬೇಗನೆ ಎಚ್ಚರಗೊಳಿಸುತ್ತದೆ. ಆದರೆ, ತಿಳಿಯಾದ ಸುಮಧುರವಾದ ಅಲಾರಂಗಳು ಹೆಚ್ಚಿನ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಬಹಿರಂಗಗೊಳಿಸಿದೆ.
ಆರ್ಎಮ್ಐಟಿ ಡಾಕ್ಟರೇಟ್ ಸಂಶೋಧಕ ಸ್ಟುವರ್ಟ್ ಮೆಕ್‌ಫಾರ್ಲೇನ್ ಹೇಳುವ ಪ್ರಕಾರ, ಬೆಳಗಿನ ಗೊರಕೆ ಮತ್ತು ನಿದ್ರೆಯ ಕೊರತೆ ಜಗತ್ತಿನ ಅತಿದೊಡ್ಡ ಗಂಭೀರ ಸಮಸ್ಯೆಯಾಗಿದೆ.
ಹೆಚ್ಚಿನ ಜನರು ಎಚ್ಚರಗೊಳ್ಳಲು ಅಲಾರಂ ಬಳಸುವುದರಿಂದ, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಮಧುರವಾದ ಮತ್ತು ಲಯವಾದ ನಿಖರ ಅಲಾರಾಂಗಳು ಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.