ETV Bharat / bharat

ಪ್ರಧಾನಿಗೆ ಸೋನಿಯಾ ಮತ್ತೊಂದು ಪತ್ರ: ಕೈಗಾರಿಕೆಗಳ ಪುನಶ್ಚೇತನಕ್ಕೆ 5 ಸಲಹೆ

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಎಂಎಸ್​ಎಂಇ ವಲಯದ ಪುನಶ್ಚೇತನಕ್ಕೆ 5 ಅಂಶಗಳ ಸೂತ್ರವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

sonia-writes-letter-to-modi
sonia-writes-letter-to-modi
author img

By

Published : Apr 25, 2020, 6:49 PM IST

ಹೊಸದಿಲ್ಲಿ: ಕೊರೊನಾ ವೈರಸ್​ ಬಿಕ್ಕಟ್ಟಿನಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು (ಎಂಎಸ್​ಎಂಇ ವಲಯ ಕೈಗಾರಿಕೆಗಳು) ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

"ಭಾರತದ ಜಿಡಿಪಿಯಲ್ಲಿ ಮೂರನೇ ಒಂದರಷ್ಟು ಪಾಲು ಎಂಎಸ್​ಎಂಇ ನೀಡುತ್ತಿದ್ದು, ಶೇ.50 ರಷ್ಟು ಒಟ್ಟು ರಫ್ತು ಇದೇ ವಲಯದಿಂದ ಆಗುತ್ತಿದೆ. ಆದರೆ ಕೊರೊನಾ ಲಾಕ್​ಡೌನ್​ನಿಂದಾಗಿ ದೇಶದ ಸುಮಾರು 6.3 ಕೋಟಿ ಎಂಎಸ್​ಎಂಇ ಘಟಕಗಳು ಆರ್ಥಿಕ ಬಿಕ್ಕಟ್ಟಿನಲ್ಲಿವೆ. ಲಾಕ್​ಡೌನ್​ನ ಪ್ರತಿಯೊಂದು ದಿನ ಎಂಎಸ್​ಎಂಇ ವಲಯಕ್ಕೆ 30,000 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗುತ್ತಿದೆ. ಬಹುತೇಕ ಎಂಎಸ್​ಎಂಇ ಗಳಿಗೆ ಹೊಸ ಆರ್ಡರ್​ಗಳು ನಿಂತು ಹೋಗಿವೆ." ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.

ಎಂಎಸ್​ಎಂಇ ವಲಯದ ಪುನಶ್ಚೇತನಕ್ಕೆ 5 ಅಂಶಗಳ ಸೂತ್ರವೊಂದನ್ನು ಸೋನಿಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಂಎಸ್​ಎಂಇ ವಲಯಕ್ಕೆ 1 ಲಕ್ಷ ಕೋಟಿ ರೂ. ವೇತನ ಭದ್ರತಾ ಪ್ಯಾಕೇಜ್​ ಘೋಷಿಸಬೇಕು. ಜೊತೆಗೆ 1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಫಂಡ್ ಮೀಸಲಿಡಬೇಕು. ಆರ್​ಬಿಐ ಆದೇಶಗಳನ್ನು ವಾಣಿಜ್ಯ ಬ್ಯಾಂಕುಗಳು ಕಟ್ಟುನಿಟ್ಟಾಗಿ ಪಾಲಿಸಿ, ಎಂಎಸ್​ಎಂಇ ಘಟಕಗಳಿಗೆ ಶೀಘ್ರವಾಗಿ ಹಾಗೂ ಸರಳವಾಗಿ ಸಾಲ ದೊರಕುವಂತೆ ಮಾಡಬೇಕು. ಎಂಎಸ್​ಎಂಇಗಳ ಸಾಲ ಕಂತು ಮರುಪಾವತಿಯನ್ನು ಮೂರು ತಿಂಗಳಿಗೂ ಹೆಚ್ಚು ಮುಂದೂಡಬೇಕು. ಸಾಲ ನೀಡುವಾಗ ಬ್ಯಾಂಕುಗಳು ಕೇಳುವ ಹೆಚ್ಚಿನ ಭದ್ರತಾ ಖಾತರಿಯ ಕಾರಣದಿಂದ ಸಾಲ ಸಿಗುವುದೇ ಕಷ್ಟವಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಬೇಕೆಂಬ 5 ಅಂಶಗಳ ಬೇಡಿಕೆಯನ್ನು ಸೋನಿಯಾ ಪ್ರಧಾನಿ ನರೇಂದ್ರ ಮೋದಿಯವರ ಮುಂದಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.