ನವದೆಹಲಿ: ಲೋಕಸಭಾ ಚುನಾವಣೆ ಪಲಿತಾಂಶದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಸಂಸದೀಯ ಸದಸ್ಯರು ಸಭೆ ನಡೆಸಿದ್ದು. ಸೋನಿಯಾ ಗಾಂಧಿ ಅವರನ್ನ ಸಂಸದೀಯ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
-
#Visuals Sonia Gandhi has been elected as Chairperson of Congress Parliamentary Party (CPP). pic.twitter.com/hDapq8FkJ3
— ANI (@ANI) June 1, 2019 " class="align-text-top noRightClick twitterSection" data="
">#Visuals Sonia Gandhi has been elected as Chairperson of Congress Parliamentary Party (CPP). pic.twitter.com/hDapq8FkJ3
— ANI (@ANI) June 1, 2019#Visuals Sonia Gandhi has been elected as Chairperson of Congress Parliamentary Party (CPP). pic.twitter.com/hDapq8FkJ3
— ANI (@ANI) June 1, 2019
ಕಳೆದ ವಾರವಷ್ಟೇ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ರಾಹುಲ್ ಗಾಂಧಿ ಎಐಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ರಾಹುಲ್ ಅವರ ನಿರ್ಧಾರವನ್ನ ತಿರಸ್ಕರಿಸಿರುವ ಕೈ ನಾಯಕರು, ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯ ಬೇಕು ಎಂದು ಮನವಿ ಮಾಡಿದ್ದಾರೆ.
543 ಲೋಕಸಭಾ ಸ್ಥಾನಗಳಲ್ಲಿ 52 ಸ್ಥಾನವನ್ನ ಗೆದ್ದಿರುವ ಕಾಂಗ್ರೆಸ್ ಪಾರ್ಟಿ, ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಇನ್ನೂ 3 ಸ್ಥಾನಗಳ ಕೊರತೆಯನ್ನ ಎದುರಿಸುತ್ತಿದೆ.