ಪ್ರಕಾಶಂ(ಆಂಧ್ರ ಪ್ರದೇಶ) : ಇಲ್ಲೊಬ್ಬ ಅಳಿಯ ತನಗೆ ಮಗಳನ್ನು ಕೊಟ್ಟ ಅಭಿಮಾನ ಹಾಗೂ ಅಕ್ಕರೆಯಿಂದ ತನ್ನ ಅತ್ತೆ ಮನೆಗೇ ಎಸಿ ಹಾಕಿಸಿದ್ದಾನೆ.
ನೆರೆಯ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲು ಪಟ್ಟಣದ ಬಾಲಾಜಿ ನಗರದ ಅಳಿಯನೊಬ್ಬ, ಬಿರು ಬಿಸಿಲಿನಲ್ಲಿ ನನ್ನ ಅತ್ತೆ ತಂಪಗಿರಬೇಕೆಂದು ಅತ್ತೆಯ ಗುಡಿಸಲಿಗೇ ಕೂಲರ್ ಹಾಕಿಸಿದ್ದಾನೆ. ಹೇಳಿ ಕೇಳಿ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಸಿಲು ಜಾಸ್ತಿ. ಈ ಬಿಸಿಲಿಗೆ ಹೈರಾಣಾಗೋದು ಗ್ಯಾರಂಟಿ. ಈ ನಡುವೆ ಈ ಅಳಿಯನ ಸೇವೆ ಮಾತ್ರ ನೋಡುಗರ ಹುಬ್ಬೇರಿಸುವಂತೆ ಮಾಡಿದೆ.
ಸಾಮಾನ್ಯವಾಗಿ ದುಡ್ಡಿದ್ದು, ದೊಡ್ಡ ಮನೆ ಕಟ್ಟಿಸಿಕೊಂಡೋರು ಎಸಿ ಹಾಕಿಸೋ ಬಗ್ಗೆ ಯೋಚನೆ ಮಾಡೋದುಂಟು. ಆದ್ರೆ ಈ ಅಳಿಯ ಮಾತ್ರ ಸ್ವಲ್ಪ ಡಿಫರೆಂಟ್. ಅರಮನೆಯಂಥಾ ಮನೆ ಇಲ್ಲದಿದ್ರೂ, ಇರೋ ಗುಡಿಸಲಿಗೆ ಎಸಿ ಹಾಕಿಸಿದ್ದಾನೆ. ಸಿಕ್ರೆ ಇಂಥಾ ಅಳಿಯ ಸಿಗ್ಬೇಕಲ್ವೇ!