ETV Bharat / bharat

ಪ್ರತಿ ಮನೆಗೂ ಮುಂಗಡ ಪಾವತಿಯ ಸ್ಮಾರ್ಟ್ ವಿದ್ಯುತ್ ಮಾಪಕ!

author img

By

Published : Jul 3, 2020, 2:01 PM IST

ಆಂಧ್ರಪ್ರದೇಶದಿಂದ ಪ್ರತ್ಯೇಕವಾಗಿ ತೆಲಂಗಾಣ ಸ್ಥಾಪನೆಯಾದ ಬಳಿಕ ವಿದ್ಯುತ್ ದರ ಏರಿಕೆಯಾಗಿಲ್ಲ. ಆದ್ರೆ ನಾವು ಎದುರಿಸುತ್ತಿರುವ ನಷ್ಟದ ನಡುವೆಯೂ ವಿದ್ಯುತ್ ಬಿಲ್ ಹೆಚ್ಚಳದ ಬಗ್ಗೆ ಬಂದ ದೂರಿನ ಮೇಲೆ ಗಮನ ಹರಿಸಿದ್ದೇವೆ ಎಂದು ತೆಲಂಗಾಣ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

Smart prepaid meter, Smart prepaid meter for every household, Smart prepaid meter news, ಸ್ಮಾರ್ಟ್ ವಿದ್ಯುತ್ ಮಾಪಕ, ಮುಂಗಡ ಪಾವತಿಯ ಸ್ಮಾರ್ಟ್ ವಿದ್ಯುತ್ ಮಾಪಕ, ಪ್ರತಿ ಮನೆಗೂ ಮುಂಗಡ ಪಾವತಿಯ ಸ್ಮಾರ್ಟ್ ವಿದ್ಯುತ್ ಮಾಪಕ, ಸ್ಮಾರ್ಟ್ ವಿದ್ಯುತ್ ಮಾಪಕ ಸುದ್ದಿ,
ಪ್ರತಿ ಮನೆಗೂ ಮುಂಗಡ ಪಾವತಿಯ ಸ್ಮಾರ್ಟ್ ವಿದ್ಯುತ್ ಮಾಪಕ

ಹೈದರಾಬಾದ್​: ಕೇಂದ್ರ ಸರಕಾರ "ಆದಿತ್ಯ" ಯೋಜನೆಯನ್ನು ಸುಮಾರು 1 ಲಕ್ಷ ಕೋಟಿ ಬಜೆಟ್ ಮೂಲಕ ಜಾರಿಗೊಳಿಸುತ್ತಿದೆ. ವಿದ್ಯುತ್ ಸಂಸ್ಥೆಗಳು, ದರ ಹೆಚ್ಚಳ ಪ್ರಸ್ತಾಪಿಸಿದರೆ, ಪರಸ್ಪರ ಚರ್ಚೆಯ ಬಳಿಕ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಈ ನಡುವೆ, ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯುತ್ ಬಿಲ್ ಹೆಚ್ಚಳ ಸಂಬಂಧ ಬಂದ ದೂರುಗಳ ಬಗ್ಗೆಯೂ ಗಮನ ಹರಿಸಿದ್ದೇವೆ ಎಂದು ತೆಲಂಗಾಣ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶ್ರೀ ರಂಗಾರಾವ್ ಹೇಳಿದ್ದಾರೆ.

ವಿದ್ಯುತ್ ಗ್ರಾಹಕರೇ ಪ್ರತಿ ತಿಂಗಳು ಅವರ ಮನೆಯ ವಿದ್ಯುತ್ ಮಾಪಕದ ಛಾಯಾ ಚಿತ್ರವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ನಮಗೆ ಕಳುಹಿಸುವಂತಹ ವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿದ್ದೇವೆ.

ಕೃಷಿ ಬೋರ್​ವೆಲ್‍ಗಳಿಗೆ ವಿದ್ಯುತ್ ಮಾಪಕ ಅಳವಡಿಕೆ ಬಳಿಕವೇ ಅದರ ದತ್ತಾಂಶಗಳನ್ನು ವಿಶ್ಲೇಷಿಸುವುದು ಒಳ್ಳೆಯದು ಎಂದು ತೆಲಂಗಾಣ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶ್ರೀ ರಂಗಾರಾವ್ ತಿಳಿಸಿದ್ದಾರೆ.

"ಪ್ರತ್ಯೇಕ ತೆಲುಗು ರಾಜ್ಯ ತೆಲಂಗಾಣ ಸ್ಥಾಪನೆಯಾದ ಬಳಿಕ ವಿದ್ಯುತ್ ದರ ಏರಿಕೆಯಾಗಿಲ್ಲ. ಆದರೆ, ನಾವು ಎದುರಿಸುತ್ತಿರುವ ನಷ್ಟದ ಕಾರಣಕ್ಕಾಗಿ ವಿದ್ಯುತ್​ ಬಿಲ್​ ಹೆಚ್ಚಳ ಬಗ್ಗೆ ಗಮನ ಹರಿಸಿದ್ದೇವೆ. ವಿದ್ಯುಚ್ಛಕ್ತಿ ವಿತರಕ ಕಂಪನಿಗಳು (ಡಿಐಎಸ್‍ಸಿಒಎಂ) ಈ ಸಂಬಂಧ ಪ್ರಸ್ತಾಪ ಕಳುಹಿಸಿದ್ದಾರೆ. ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಇಆರ್​ಸಿ) ಈ ಬಗ್ಗೆ ಸಂಬಂಧಿಸಿದ ಎಲ್ಲರ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆಯೋಗದ ಅಧ್ಯಕ್ಷ ಶ್ರೀ ರಂಗಾರಾವ್ ತಿಳಿಸಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯುತ್ ಬಿಲ್ ಮೊತ್ತ ಹೆಚ್ಚಳವಾದ ಬಗ್ಗೆ ಹಲವಾರು ದೂರು ಬಂದಿವೆ. ಮೂರು ತಿಂಗಳ ಸರಾಸರಿ ತೆಗೆದು, ವಿದ್ಯುತ್ ಬಿಲ್ ನೀಡಲಾಗಿದೆ. ಈಗ ಪ್ರತಿ ತಿಂಗಳು, ವಿದ್ಯುತ್ ಮಾಪಕದ ಓದಿನ ಬಳಿಕ ಬಿಲ್ ನೀಡಬೇಕು ಎಂಬ ಆಗ್ರಹವಿದೆ. ಅದನ್ನು ಕೂಡಾ ಆಯೋಗ ಗಮನಕ್ಕೆ ತೆಗೆದುಕೊಳ್ಳಲಿದೆ. ಜೂನ್ 30 ರಂದು, ಎಲ್ಲ ವಿದ್ಯುತ್ ವಿತರಕ ಸಂಸ್ಥೆಗಳು ಆಯೋಗಕ್ಕೆ ವಾರ್ಷಿಕ ವರಮಾನ ಬೇಡಿಕೆಯನ್ನು ಸಲ್ಲಿಸಿವೆ. ಈ ಆರ್ಥಿಕ ವರ್ಷದಲ್ಲಿ 2020-21ರಲ್ಲಿ ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಈ ಬೇಡಿಕೆ ಸಲ್ಲಿಸಲಾಗಿದೆ. ಈ ಹಿನ್ನೆಲೆ ಆಯೋಗದ ಅಧ್ಯಕ್ಷರಾದ ಶ್ರೀ ರಂಗರಾವ್, ಈಟಿವಿ ಭಾರತಗೆ ನೀಡಿದ ಸಂದರ್ಶನದಲ್ಲಿ ರಾಜ್ಯದ ವಿದ್ಯುತ್ ಕ್ಷೇತ್ರದ ಸಾಧನೆ ಬಗ್ಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

ಈಟಿವಿ ಭಾರತ: ವಿದ್ಯುತ್ ವಿತರಣಾ ಸಂಸ್ಥೆಗಳು, ಪ್ರತಿ ವರ್ಷ ನವೆಂಬರ್​ ​ವೊಳಗೆ ತಮ್ಮ ವಾರ್ಷಿಕ ಆದಾಯದ ಬೇಡಿಕೆಯನ್ನು ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ ಪ್ರತಿ ವರ್ಷ ಇದರ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಆಯೋಗ ಏನಾದ್ರೂ ಕ್ರಮಕೈಗೊಳ್ಳಲಿದೆಯೆ?

ಶ್ರೀ ರಂಗರಾವ್: ಹೌದು... ಪ್ರತಿ ವರ್ಷ ವಿದ್ಯುತ್ ವಿತರಣಾ ಸಂಸ್ಥೆಗಳು ಕಾನೂನು ಪಾಲಿಸುತ್ತಿಲ್ಲ. ಆದರೆ, ಈ ಸಂಸ್ಥೆಗಳು ಕಾನೂನನ್ನು ಪಾಲಿಸದಿದ್ರೆ ಆ ಸಂಸ್ಥೆಗಳು ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಲಿದೆ. ನೀರಾವರಿ ಇಲಾಖೆಯು ಅದರ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳಿಗೆ ಅಗತ್ಯವಾದ ವಿದ್ಯುಚ್ಛಕ್ತಿಯ ಪ್ರಮಾಣವನ್ನು ಈ ಸಂಸ್ಥೆಗಳಿಗೆ ಸಕಾಲಕ್ಕೆ ನೀಡಲು ಸಾಧ್ಯವಾಗದ ಹಿನ್ನೆಲೆ ಅವುಗಳು ನಿಗದಿತ ಸಮಯದಲ್ಲಿ ತಮ್ಮ ವರದಿ ಸಲ್ಲಿಕೆ ಸಾಧ್ಯವಾಗಲಿಲ್ಲ. ಈ ವರ್ಷ ಇದು ಸರಿಯಾಗುವ ಸಾಧ್ಯತೆ ಇದೆ

ಈಟಿವಿ ಭಾರತ: ವಿದ್ಯುತ್ ವಿತರಣಾ ಸಂಸ್ಥೆಗಳ ನಷ್ಟ ತಪ್ಪಿಸಲು ಪರಿಹಾರೋಪಾಯಗಳೇನು?

ಶ್ರೀ ರಂಗರಾವ್: ಕೇಂದ್ರ ಸರಕಾರ, ಆದಿತ್ಯ ಯೋಜನೆಯ ಅನುಷ್ಠಾನದಲ್ಲಿ ತೊಡಗಿದೆ. ಎಲ್ಲ ರಾಜ್ಯಗಳ ನಡುವೆ ಹಂಚಿಕೆ ಮಾಡಲು ಈ ಯೋಜನೆಯಡಿ ಕೇಂದ್ರ ಸರಕಾರ ಒಂದೂವರೆ ಲಕ್ಷ ಕೋಟಿ ರೂಪಾಯಿ ನೀಡಲಿದೆ. ಈ ಯೋಜನೆಯಡಿ ಮುಂಗಡ ಪಾವತಿಯ ‘ಸ್ಮಾರ್ಟ್ ವಿದ್ಯುತ್ ಮಾಪಕ’ಗಳನ್ನು ನಿರ್ಮಾಣ - ಒಡೆತನ - ನಿರ್ವಹಣೆ ಹಾಗೂ ಹಸ್ತಾಂತರ (BOOT-ಬಿಒಒಟಿ) ಮಾದರಿಯಲ್ಲಿ ಎಲ್ಲ ವಿದ್ಯುತ್ ಸಂಪರ್ಕಗಳಿಗೆ ಒದಗಿಸುವ ಉದ್ದೇಶವಿದೆ.

ಈಗಿನ ವಿದ್ಯುತ್ ಮಾಪಕಗಳನ್ನು ಈ ಸ್ಮಾರ್ಟ್ ಮೀಟರ್​ಗಳ ಮೂಲಕ ಬದಲಾವಣೆ ಮಾಡಲಾಗುವುದು. ಸಂಸ್ಥೆಗಳು ತಮ್ಮದೇ ಖರ್ಚಿನಲ್ಲಿ ಈ ಮೀಟರ್​ಗಳನ್ನು ಅಳವಡಿಸಲಿವೆ. ಒಂದೊಮ್ಮೆ ಈ ಸ್ಮಾರ್ಟ್ ಮೀಟರ್​ಗಳು ಅಳವಡಿಕೆಯಾದ ಬಳಿಕ ವಿತರಣಾ ಸಂಸ್ಥೆಗಳ ನಷ್ಟ ನಿಂತು, ಆದಾಯ ಹೆಚ್ಚಳವಾಗಲಿದೆ.

ಈ ವಿದ್ಯುತ್ ಮೀಟ‍ರ್​ಗಳ ಮೊತ್ತವನ್ನು ಕಂಪನಿಗಳಿಗೆ ವಿದ್ಯುತ್ ವಿತರಣಾ ಸಂಸ್ಥೆಗಳೇ ನೀಡಲಿವೆ. ಇದರಿಂದ ಗ್ರಾಹಕರಿಗೆ ಯಾವುದೇ ಹೊರೆಯಾಗುವುದಿಲ್ಲ. ಇದರ ಜೊತೆಗೆ ವಿದ್ಯುತ್ ನಿರ್ವಹಣಾ ಸಂಸ್ಥೆಗಳು ಲಾಭದತ್ತ ಮುಖಮಾಡಲಿವೆ. ಈ ‘ಆದಿತ್ಯ’ ಯೋಜನೆಯಡಿ ಕೇಂದ್ರ ಸರಕಾರ ಒಟ್ಟು ಖರ್ಚಿನ ಶೇ 60ರಷ್ಟು ಮೊತ್ತ ಭರಿಸಿದರೆ, ಉಳಿದ ಮೊತ್ತವನ್ನು ವಿತರಣಾ ಸಂಸ್ಥೆಗಳು ಭರಿಸಲಿವೆ. ಒಟ್ಟಾರೆ, ಇದೊಂದು ಯೋಜನೆಯು ವಿತರಣಾ ಸಂಸ್ಥೆಗಳನ್ನು ಲಾಭದತ್ತ ಕೊಂಡೊಯ್ಯಲಿದೆ.

ಈಟಿವಿ ಭಾರತ: ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯುತ್ ದರ ಏರಿಸಿ, ಜನರ ಮೇಲಿನ ಭಾರ ಹೆಚ್ಚಿಸಲಾಗಿದೆ ಎಂಬ ದೂರುಗಳಿವೆ. ಆಯೋಗದ ಗಮನಕ್ಕೆ ಈ ದೂರು ಬಂದಿದೆಯೆ?

ಶ್ರೀ ರಂಗರಾವ್: ವಾಸ್ತವದಲ್ಲಿ ಏಪ್ರಿಲ್ ಮತ್ತು ಮೇ 2019ರ ವಿದ್ಯುಚ್ಚಕ್ತಿ ಬಿಲ್ ಅನ್ನೇ ಬಳಕೆದಾರರಿಗೆ ಈ ಏಪ್ರಿಲ್ ಹಾಗೂ ಮೇ ತಿಂಗಳಿಗೆ ನೀಡಬೇಕು ಎಂದು ಆಯೋಗ ಆದೇಶಿಸಿದೆ. ಲಾಕ್‍ಡೌನ್ ಹಿನ್ನೆಲೆ ವಿದ್ಯುತ್ ಮೀಟರ್ ಮಾಪನ ನಡೆಸಲು ಸಾಧ್ಯವಾಗಿಲ್ಲ. ನಾನು ವಿತರಣಾ ಸಂಸ್ಥೆಗಳ ಮುಖ್ಯಸ್ಥರ ಜೊತೆಗೆ ಖುದ್ದಾಗಿ ಮಾತನಾಡಿದ್ದೇನೆ. ನಾನು ಬಳಕೆದಾರರ ದೂರನ್ನು ಅವರ ಗಮನಕ್ಕೆ ತಂದಿದ್ದೇನೆ. ಮೂರು ತಿಂಗಳ ಬಿಲ್‍ನ ಸರಾಸರಿ ಮೊತ್ತವನ್ನು ಗಣನೆಗೆ ತೆಗೆದುಕೊಂಡಿದ್ದರಿಂದ ಈ ಸಮಸ್ಯೆ ತಲೆದೋರಿದೆ. ಏಕೆಂದರೆ, ದರದ ಹಂತಗಳಲ್ಲಿ ಬದಲಾವಣೆಗೊಂಡು ಬಿಲ್ ಮೊತ್ತ ಹೆಚ್ಚಳವಾಗಿದೆ. ವಿತರಣಾ ಸಂಸ್ಥೆಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಿತಿಗಳನ್ನು ರಚಿಸಿವೆ. ದೂರು ನೀಡಿದ ಎಲ್ಲ ಬಳಕೆದಾರರ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು. ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ ಎನ್ನುವುದು ತಪ್ಪು ಕಲ್ಪನೆ ಆಗಿದೆ.

ಈಟಿವಿ ಭಾರತ: ವಿದ್ಯುಚ್ಛಕ್ತಿ ಬೆಲೆ ಪಟ್ಟಿ (ಬಿಲ್) ನಿಯಮವನ್ನು ಯಾಕೆ ಬದಲಾಯಿಸಬಾರದು? ಗ್ರಾಹಕನೊಬ್ಬ ತನ್ನ ಸ್ಮಾರ್ಟ್ ಫೋನ್‍ನಲ್ಲಿ ವಿದ್ಯುತ್ ಮಾಪಕದ ಛಾಯಾ ಚಿತ್ರ ತೆಗೆದುಕಳುಹಿಸಿದ್ದನ್ನು ಪರಿಗಣಿಸಿ, ಏಕೆ ಮೊತ್ತ ನಿರ್ಧರಿಸಬಾರದು?

ಶ್ರೀ ರಂಗರಾವ್: ಇದೊಂದು ಒಳ್ಳೆಯ ಸಲಹೆ ಹಾಗೂ ನಿಯಮ. ಈ ಬಗ್ಗೆ ಈನಾಡು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ನಾನು ಓದಿದ್ದೇನೆ. ಲಾಕ್‍ಡೌನ್ ಬಳಿಕ ವಿದ್ಯುತ್ ಮಾಪಕದ ದತ್ತಾಂಶ ಸಂಗ್ರಹಿಸುವಂತೆ ನಿಯಂತ್ರಣ ಆಯೋಗ ವಿತರಣಾ ಸಂಸ್ಥೆಗಳಿಗೆ ಆದೇಶ ನೀಡಿದ ಬಳಿಕ, ಈ ವರದಿ ಪ್ರಕಟವಾಗಿದೆ. ಈ ವರದಿ ಮೊದಲೇ ಪ್ರಕಟವಾಗಿದ್ದರೆ ಅದನ್ನು ಪರಿಗಣಿಸಿ, ನಿಯಂತ್ರಣ ಆಯೋಗ ಆದೇಶ ನೀಡುವ ಸಾಧ್ಯತೆ ಇತ್ತು. ಈ ನಿಯಮಾವಳಿ ದೆಹಲಿಯಲ್ಲಿ ಈಗಾಗಲೇ ಉತ್ತಮವಾಗಿ ಜಾರಿಗೊಂಡಿದೆ. ಇದನ್ನು ತೆಲಂಗಾಣದಲ್ಲಿ ಕೂಡಾ ನಾವು ಶೀಘ್ರದಲ್ಲೇ ಜಾರಿಗೊಳಿಸುತ್ತೇವೆ. ಅದಕ್ಕಾಗಿ ವಿತರಣಾ ಸಂಸ್ಥೆಗಳಿಗೆ ಆದೇಶ ನೀಡುತ್ತೇವೆ.

ಈಟಿವಿ ಭಾರತ: ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಹಂಚಿಕೆ ಹಾಗೂ ವಿತರಣೆಯಲ್ಲಿನ ತಮ್ಮ ಹುಳುಕುಗಳನ್ನು ಮುಚ್ಚಿಡಲು ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ವಿದ್ಯುತ್ ಬಳಕೆಯಾಗುತ್ತಿದೆ ಎಂದು ಪ್ರತಿಪಾದಿಸುತ್ತವೆ ಎಂಬ ಆರೋಪಗಳಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶ್ರೀ ರಂಗರಾವ್: ಎಲ್ಲ ವಿದ್ಯುತ್ ಸಂಪರ್ಕಗಳಿಗೆ ಮೀಟರ್ ಇರಲೇ ಬೇಕು. ಹಾಗಾದಾಗ ಇಂತಹ ಆರೋಪ - ಪ್ರತ್ಯಾರೋಪಗಳು ಎದುರಾಗುವುದಿಲ್ಲ. ನೀವು ಹೇಳಿದ್ದರಲ್ಲಿ ಕೂಡಾ ಸತ್ಯಾಂಶವಿದೆ. ಮಹಾರಾಷ್ಟ್ರದಲ್ಲಿ ಅಲ್ಲಿನ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಡೆಸಿದ ತನಿಖೆಯೊಂದರ ಪ್ರಕಾರ, ವಿದ್ಯುತ್ ವಿತರಣೆ ಮತ್ತು ಹಂಚಿಕೆಯಲ್ಲಿನ ಲೋಪ, ಸೋರಿಕೆಯನ್ನು ಮುಚ್ಚಿಡಲು ಕೃಷಿ ಕ್ಷೇತ್ರದ ಮೇಲೆ ದೂರಲಾಗುತ್ತದೆ ಎಂಬ ಅಂಶ ಬಯಲಾಗಿದೆ. ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಆದಿತ್ಯ ಯೋಜನೆಯಲ್ಲಿ ಕೂಡಾ ವ್ಯವಸಾಯದ ಪಂಪ್‍ಸೆಟ್‍ಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತ್ಯೇಕ ಮೀಟರ್ ವ್ಯವಸಾಯದ ಪಂಪ್‍ಸೆಟ್‍ಗಳಿಗೆ ಪ್ರಸ್ತಾಪಿಸಲಾಗಿದೆ.

ಈಟಿವಿ ಭಾರತ: ಪ್ರಸ್ತಾಪಿತ ವಿದ್ಯುಚ್ಛಕ್ತಿ ತಿದ್ದುಪಡಿ ಕರಡು ಮಸೂದೆ, ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮೇಲೆ ಏನಾದರೂ ದುಷ್ಪರಿಣಾಮ ಬೀರಲಿದೆಯೆ?

ಶ್ರೀ ರಂಗರಾವ್: ಖಂಡಿತವಾಗಿಯೂ ಪ್ರಸ್ತಾವಿತ ಕರಡು ಮಸೂದೆ ಅತಿ ಹೆಚ್ಚಿನ ಪರಿಣಾಮಗಳನ್ನು ಬೀರಲಿದೆ. ದೇಶದ ಎಲ್ಲ ರಾಜ್ಯಗಳ ಆಯೋಗದ ಅಧಿಕಾರಿಗಳ ಮೂರು ದಿನಗಳ ಆನ್‍ಲೈನ್ ಸಮ್ಮೇಳನ ಇತ್ತೀಚೆಗೆ ನಡೆಯಿತು. ಈ ಸಮ್ಮೇಳನದಲ್ಲಿ ನಾನು ಹಾಗೂ ತ್ರಿಪುರಾ ಆಯೋಗದ ಅಧ್ಯಕ್ಷರು ಈ ತಿದ್ದುಪಡಿಯ ಬಗ್ಗೆ ಚರ್ಚಿಸಲೇಬೇಕು ಎಂದು ಆಗ್ರಹಪಡಿಸಿದೆವು. ಈ ತಿದ್ದುಪಡಿ ಮಸೂದೆಯ ಕರಡು ಪ್ರತಿಯಲ್ಲಿ ವಿದ್ಯುತ್ ಖರೀದಿ ಒಪ್ಪಂದಗಳ ಮೇಲೆ ವಿವಾದಗಳನ್ನು ಬಗೆ ಹರಿಸಲು ಒಂದು ರಾಷ್ಟ್ರೀಯ ಮಟ್ಟದ ಬೋರ್ಡ್ ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪವನ್ನು ನಾವು ವಿರೋಧಿಸಿ ಇಂತಹ ಬೋರ್ಡ್ ಒಂದರ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದ್ದೇವೆ. ನಾವು ರಾಜ್ಯ - ರಾಜ್ಯಗಳ ನಡುವಣ ವಿದ್ಯುತ್ ಹಂಚಿಕೆ ಹಾಗೂ ಸಾಗಾಟ ಸಂಬಂಧ ಹೊಸ ನಿಯಂತ್ರಣಗಳನ್ನು ಕೂಡಾ ವಿರೋಧಿಸಿದ್ದೇವೆ. ನ್ಯಾಷನಲ್ ಲೋಡ್ ಡಿಸ್ಪಾಚ್ ಸೆಂಟರ್ ಮೂಲಕ ಇಂತಹ ನಿಯಂತ್ರಣವನ್ನು ಪ್ರಸ್ತಾಪಿಸಲಾಗಿದೆ. ನಾವು ಅದನ್ನು ವಿರೋಧಿಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.