ಚಂಡೌಲಿ(ಉತ್ತರ ಪ್ರದೇಶ): ಗಂಗಾ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಚಂಡೌಲಿ ಜಿಲ್ಲೆಯ ಮಹೇಜಿ ಗ್ರಾಮದ ಬಳಿ ನಡೆದಿದೆ.
ಶನಿವಾರ ಸಂಜೆ 40 ಕಾರ್ಮಿಕರನ್ನು ಹೊತ್ತ ದೋಣಿ ಗಂಗಾ ನದಿ ದಾಟುತ್ತಿತ್ತು ಆದರೆ ಮಧ್ಯದ ಹಂತಕ್ಕೆ ತಲುಪಿದಾಗ ದೋಣಿ ಬೋರಲಾಗಿದೆ ಎಂದು ಚಂಡೌಲಿ ಎಸ್‌ಪಿ, ಹೇಮಂತ್ ಕುಟಿಯಲ್ ಹೇಳಿದ್ದಾರೆ. 35 ಮಂದಿ ಈಜಿ ದಡ ಮುಟ್ಟಿದ್ದಾರೆ. ಐವರು ಮಹಿಳೆಯರು ಸೇರಿದಂತೆ ಆರು ಮಂದಿ ನಾಪತ್ತೆಯಾಗಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿದ್ದರು.
ಘಟನೆ ನಡೆದ ನಂತರ ಸ್ಥಳಕ್ಕೆ ಬಂದ ರಕ್ಷಣಾ ತಂಡ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿತು ಆದರೆ ಇಲ್ಲಿಯವರೆಗೆ ಯಾರೂ ಕೂಡ ಪತ್ತೆಯಾಗಿಲ್ಲ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಸ್ಥಳದಲ್ಲೆ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಮಹೇಜಿ ಗ್ರಾಮದ ಹಲವಾರು ನಿವಾಸಿಗಳು ಗಾಜಿಪುರದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.