ಸಂಗಾರೆಡ್ಡಿ(ತೆಲಂಗಾಣ) : ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ವ್ಯಾನ್ ಮತ್ತು ರಾಜ್ಯ ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ.
ಅಪಘಾತದಲ್ಲಿ ಐವರು ಮಹಿಳೆಯರು ಮತ್ತು 10 ವರ್ಷದ ಬಾಲಕಿ ಸೇರಿ 6 ಜನ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಸಂಗಾರೆಡ್ಡಿ ಪ್ರಾಂತ್ಯದ ಪಸಲ್ವಾದಿ ಗ್ರಾಮದವರು ಎಂದು ತಿಳಿದು ಬಂದಿದ್ದು, ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.