ETV Bharat / bharat

ಯುವತಿ ಶೂಟೌಟ್​ ಪ್ರರಕಣ: 600 ಪುಟಗಳ ಚಾರ್ಜ್​​ಶೀಟ್ ಸಲ್ಲಿಸಲಿರುವ ಎಸ್​ಐಟಿ - ವಿಶೇಷ ತನಿಖಾ ತಂಡ (ಎಸ್​​ಐಟಿ)

ಬಲ್ಲಬ್​ಗಢ ಪ್ರದೇಶದಲ್ಲಿ 21 ವರ್ಷದ ಯುವತಿ ನಿಕಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದಾಬಾದ್ ಪೊಲೀಸರು ಮೂವರನ್ನು ಬಂಧಿಸಿದ್ದರು, ಇದೀಗ ಇವರ ವಿರುದ್ಧ 600 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

sit-will-file-chargesheet-in-nikita-tomar-murder-case-today
ಫರೀದಾಬಾದ್​ ಕೊಲೆ ಪ್ರಕರಣ
author img

By

Published : Nov 6, 2020, 2:05 PM IST

ಫರಿದಾಬಾದ್ (ಹರಿಯಾಣ): ನಡುರಸ್ತೆಯಲ್ಲೇ ಯುವತಿ ಮೇಲೆ ಶೂಟೌಟ್ ನಡೆಸಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್​​ಐಟಿ) ಪ್ರಕರಣ ನಡೆದು 11 ದಿನಗಳ ಬಳಿಕ ಚಾರ್ಜ್​ ಶೀಟ್ ಸಲ್ಲಿಸಲಿದ್ದಾರೆ. ಪೊಲೀಸ್ ಅಧಿಕಾರಿ ಪ್ರಕಾರ, ನಿಕಿತಾ ತೋಮರ್​ ಹತ್ಯೆ ಮಾಡಿದ ಆರೋಪಿಗಳಾದ ತೌಸಿಫ್, ರೆಹಾನ್ ಮತ್ತು ಅಜ್ರು ಎಂಬುವವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಲಾಗುವುದು. ಆರೋಪಿಗಳ ವಿರುದ್ಧ ಎಸ್​ಐಟಿ 25 ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದಿದ್ದಾರೆ.

ಫರೀದಾಬಾದ್​ ಕೊಲೆ ಪ್ರಕರಣ

ಈ ಸಾಕ್ಷ್ಯದಲ್ಲಿ ಮುಖ್ಯವಾಗಿ ಸಿಸಿಟಿವಿ ದೃಶ್ಯಾವಳಿಗಳು, ಅಪರಾಧಕ್ಕಾಗಿ ಬಳಿಸಿದ ಶಸ್ತ್ರಾಸ್ತ್ರಗಳು, ಆರೋಪಿಗಳ ಕೈಯಲ್ಲಿದ್ದ ಬಂದೂಕು, ಬಟ್ಟೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ಕಳುಹಿಸಿರುವ ಕಾರಿನ ವರದಿ ಸಹ ಸೇರಿದೆ.

600 ಪುಟದ ಚಾರ್ಜ್​ಶೀಟ್​ನಲ್ಲಿ ಸುಮಾರು 60 ಮಂದಿಯ ಸಾಕ್ಷ್ಯಗಳಿದ್ದು, ಗುರುವಾರ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಇದಕ್ಕೂ ಮೊದಲು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಸ್ಟಡಿಯಲ್ಲಿಟ್ಟುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.