ಚೆನ್ನೈ :ಈ ಕೊರೊನಾ ಮಹಾಮಾರಿ ವಿರುದ್ಧ ಹಲವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ಇಲ್ಲದ ಕಷ್ಟದಲ್ಲಿ ಇರುವರಿಗೆ ಆರ್ಥಿಕವಾಗಿ ಸಹಾಯ ಮಾಡಿ ಮಾನವೀಯತೆ ತೋರುತ್ತಿದ್ದಾರೆ. ಅಂತೆಯೇ ಖ್ಯಾತ ಗಾಯಕ ಸತ್ಯಂ ಮಹಾಲಿಂಗಂ ಕೂಡ ಸಂಗಿತಗಾರರಿಗೆ ಸಹಾಯ ಮಾಡಲುಮುಂದಾಗಿದ್ದಾರೆ.
ಕೊರೊನಾದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಗೀತಗಾರರಿಗೆ ಹಣ ಸಂಗ್ರಹಿಸಲು ಗಾಯಕ ಸತ್ಯನ್ ಮಹಾಲಿಂಗಂ ಕಳೆದ 63 ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.
ಸಂಗೀತಗಾರರಿಗೆ ಸಹಾಯ ಮಾಡಲು ಇಲ್ಲಿಯವರೆಗೆ ನಾನು ₹ 15 ಲಕ್ಷಕ್ಕಿಂತ ಹೆಚ್ಚು ಸಂಗ್ರಹಿಸಿದ್ದೇನೆ ಎಂದು ಹೇಳಿದ್ದಾರೆ.