ಗಯಾ (ಬಿಹಾರ): ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಗಯಾ ಧಾಮ್‌ನಿಂದ ಬೆಳ್ಳಿ ಇಟ್ಟಿಗೆ ಮತ್ತು ಫಾಲ್ಗು ನದಿಯ ಮರಳನ್ನು ಸಾಂಕೇತಿಕವಾಗಿ ಬಳಸಲಾಗುತ್ತದೆ.
ದೇವಾಲಯದ ಭೂಮಿ ಪೂಜೆಗೆ ದೇಶದ ಎಲ್ಲ ಪವಿತ್ರ ನದಿಗಳ ನೀರು ಮತ್ತು ರಾಷ್ಟ್ರಾದ್ಯಂತ ಪ್ರಮುಖ ದೇವಾಲಯಗಳ ಸನ್ನಿದಾನಗಳಿಂದ ಮಣ್ಣು ಬಳಸಲಾಗುತ್ತಿದೆ. ಗಯಾದ ಫಾಲ್ಗು ನದಿಯಿಂದ ಮರಳನ್ನು ಅಯೋಧ್ಯೆಗೆ ಸುಮಾರು ಒಂದು ತಿಂಗಳ ಹಿಂದೆಯೇ ಕಳುಹಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಅರ್ಚಕ ಪ್ರೇಮನಾಥ್ ತೈಯಾ ಹೇಳಿದ್ದಾರೆ.
ಗಯಾ ಧಾಮ್‌ನಿಂದ ಬೆಳ್ಳಿ ಇಟ್ಟಿಗೆ:
ದೇವಾಲಯದ ಅಡಿಪಾಯಕ್ಕಾಗಿ ಗಯಾ ಧಾಮ್‌ನಿಂದ ಒಂದು ಕಿಲೋಗ್ರಾಂ ಮತ್ತು ಕಾಲು ಕೆ.ಜಿ ಬೆಳ್ಳಿಯ ಇಟ್ಟಿಗೆಯನ್ನು ಕಳುಹಿಸಲಾಗುವುದು. ವಿಎಚ್‌ಪಿ ಜಿಲ್ಲಾಧ್ಯಕ್ಷ ಡಾ.ಎನ್.ಕೆ.ಗುಪ್ತಾ ನೇತೃತ್ವದ ಸಮಿತಿ ಬೆಳ್ಳಿ ಇಟ್ಟಿಗೆ ನಿರ್ಮಾಣದ ಮೇಲ್ವಿಚಾರಣೆ ನಡೆಸಲಿದೆ.
ಫಾಲ್ಗು ನದಿಯ ಮಹತ್ವ:
ಭಗವಾನ್ ರಾಮ ಮತ್ತು ಅವರ ಸಹೋದರ ಲಕ್ಷ್ಮಣ, ಸೀತಾ ಅವರು ಫಾಲ್ಗು ನದಿಯ ದಡದಲ್ಲಿ ತಂದೆ ರಾಜ ದಶರಥನ ಆತ್ಮದ ಉದ್ಧಾರಕ್ಕಾಗಿ ದೇಣಿಗೆ ನೀಡಿದ್ದಾರೆ ಎಂದು ನಂಬಲಾಗಿದೆ. ಇದನ್ನು ಅನುಸರಿಸಿ, ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದಲ್ಲಿ ಫಾಲ್ಗು ನದಿಯ ಮರಳನ್ನು ಬಳಸಲಾಗುತ್ತಿದೆ.