ಕತ್ರಜ್(ಮಹಾರಾಷ್ಟ್ರ): ಪುಣೆ ಸಮೀಪದ ಕತ್ರಜ್ ಘಾಟ್‌ನಲ್ಲಿ ಎಸ್‌ಟಿ ಬಸ್ 50 ಅಡಿ ಆಳಕ್ಕೆ ಉರುಳಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಬಸ್ನಲ್ಲಿ ಸುಮಾರು 40ರಿಂದ 50 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪುಣೆಯಿಂದ ಸತಾರಾ ಕಡೆಗೆ ಸಾಗುತ್ತಿರುವ ಶಿವಶಾಹಿ ಬಸ್ ಕತ್ರಜ್ ಘಾಟ್‌ನಲ್ಲಿ 50 ಅಡಿ ಆಳದ ಕಣಿವೆಯಲ್ಲಿ ಉರುಳಿದೆ. ಸೋಮವಾರ ಮಧ್ಯಾಹ್ನ ಈ ಅವಘಢ ಸಂಭವಿಸಿದೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಈಗಾಗಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.