ETV Bharat / bharat

ಮಹಾ ಚುನಾವಣೆ ರಂಗು.. ಉದ್ಧವ್​ ಪುತ್ರ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ! - ವರ್ಲಿ ವಿಧಾನಸಭೆ ಕ್ಷೇತ್ರ

ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ವರ್ಲಿ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ

ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ
author img

By

Published : Oct 3, 2019, 3:25 PM IST

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣ ರಂಗು ಪಡೆದುಕೊಂಡಿದ್ದು, ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ

ಶಿವಸೇನಾ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್​ ರೊಡ್​ ಶೋ ಮೂಲಕ ಆಗಮಿಸಿದ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದಲ್ಲಿ 11.38 ಕೋಟಿ ಆಸ್ತಿ, ಒಂದು ಬಿಎಂಡಬ್ಲ್ಯೂ ಕಾರು ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಟ್ವಿಟ್ಟರ್​ನಲ್ಲಿ ತನ್ನ ತಾತ ಬಾಳ್ ಠಾಕ್ರೆಗೆ ಫೋಟೋಗೆ ನಮಸ್ಕರಿಸುತ್ತಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.

ರೋಡ್​ ಶೋನಲ್ಲಿ ಶಿವಸೇನಾ ಪಕ್ಷದ ಕಾರ್ಯಕರ್ತರೊಂದಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಕೂಡ ಪಾಲ್ಗೊಂಡಿದ್ದರು. ಒಟ್ಟು 288 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಿಜೆಪಿ 145 ಕ್ಷೇತ್ರ ಹಾಗೂ ಶಿವಸೇನೆ 125 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.