ETV Bharat / bharat

ಬಿಜೆಪಿ ಏನೇ ಮಾಡಿದರೂ ನಮ್ಮದೇ ಸರ್ಕಾರ: ಶರದ್​ ಪವಾರ್​​ ಖಡಕ್​ ಮಾತು

ಮಹಾರಾಷ್ಟ್ರದಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಮುಂದಿನ ನಡೆಯ ಕುರಿತು ಶಿವಸೇನೆ ನಾಯಕ ಉದ್ಧವ್​ ಠಾಕ್ರೆ ಹಾಗೂ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಸುದ್ದಿಗೋಷ್ಠಿ ನಡೆಸಿದರು.

Shiv Sena-NCP address the media in Mumbai
author img

By

Published : Nov 23, 2019, 2:39 PM IST

ಮುಂಬೈ: ರಾತ್ರೋರಾತ್ರಿ ಬಿಜೆಪಿ ಬೆಂಬಲಿಸಿ ಶನಿವಾರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಜಿತ್​ ಪವಾರ್​ ಪಕ್ಷದ ವಿರುದ್ಧವಾಗಿ ನಡೆದುಕೊಂಡು ಅಶಿಸ್ತಿನಿಂದ ವರ್ತಿಸಿದ್ದಾರೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಬೇಸರ ವ್ಯಕ್ತಪಡಿಸಿದರು.

ಶಿವಸೇನೆ ಹಾಗೂ ಎನ್​ಸಿಪಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜಿತ್ ಪವಾರ್ ಅವರ ನಿರ್ಧಾರ ಪಕ್ಷದ ರೇಖೆಗೆ ವಿರುದ್ಧವಾಗಿದೆ. ಅವರ ನಡೆಯಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ. ಎನ್‌ಸಿಪಿ ಕಾರ್ಯಕರ್ತ, ಮುಖಂಡರಾಗಲೀ ಎನ್‌ಸಿಪಿ-ಬಿಜೆಪಿ ಸರ್ಕಾರದ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

  • Sharad Pawar, NCP Chief at NCP-Shiv Sena press conference in Mumbai: All the MLAs who are going must know that there is an anti defection law and the possibility of them losing their assembly membership is high. pic.twitter.com/8YrdIkCn2x

    — ANI (@ANI) November 23, 2019 " class="align-text-top noRightClick twitterSection" data=" ">

ಒಂದು ವೇಳೆ ಎನ್​ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದರೆ, ಅವರೆಲ್ಲರೂ ಪಕ್ಷಾಂತರ ಕಾಯ್ದೆಯಡಿ ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಅವರಿಗೆ ಸಮಯ ಕೊಟ್ಟಿದ್ದಾರೆ. ಆದರೆ, ಸಾಬೀತುಪಡಿಸಲು ಬಿಜೆಪಿ ವಿಫಲವಾಗುತ್ತದೆ. ಏಕೆಂದರೆ ನಮ್ಮ ಶಾಸಕರು ನಮ್ಮನ್ನೇ ಬೆಂಬಲಿಸಲಿದ್ದಾರೆ. ಅದರ ನಂತರ ಮೊದಲೇ ನಿರ್ಧರಿಸಿದಂತೆ ನಮ್ಮ ಮೂರು ಪಕ್ಷಗಳು (‘ಕಾಂಗ್ರೆಸ್ (44), ಶಿವಸೇನೆ (56) ಮತ್ತು ಎನ್‌ಸಿಪಿ (55) ಸರ್ಕಾರ ರಚಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • NCP Chief Sharad Pawar: I'm sure Governor has given them time to prove majority but they won't be able prove it. After that our three parties will form the government as we had decided earlier. #Maharashtra pic.twitter.com/MxXwZUBPah

ಬೆಳಿಗ್ಗೆ ಪ್ರಮಾಣ ವಚನ ಸಮಾರಂಭಕ್ಕೆ ಹೋಗಿದ್ದ 10 ಶಾಸಕರಲ್ಲಿ ಮೂವರು ಈ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪವಾರ್​, ಮೂವರು ಮಾತ್ರವಲ್ಲ ಎಲ್ಲರೂ ನಮ್ಮನ್ನೇ ಬೆಂಬಲಿಸುತ್ತಾರೆ. ಬಿಜೆಪಿ ಏನೇ ಮಾಡಿದರೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಖಡಕ್ಕಾಗಿ ಹೇಳಿದರು.

ಈ ವೇಳೆ ಪ್ರಮಾಣ ವಚನದ ಸಮಾರಂಭದಲ್ಲಿ ಹಾಜರಾಗಿದ್ದ ಎನ್‌ಸಿಪಿ ಶಾಸಕ ರಾಜೇಂದ್ರ ಶಿಂಗಾನೆ ಮಾತನಾಡಿ, ಅಜಿತ್ ಪವಾರ್ ಅವರು ಏನೋ ಚರ್ಚಿಸಬೇಕು ಎಂದು ರಾಜಭವನಕ್ಕೆ ನನ್ನನ್ನು ಕರೆದುಕೊಂಡು ಹೋದರು. ಜೊತೆಗೆ ಪಕ್ಷದ ಕೆಲವು ಶಾಸಕರಿದ್ದಷ್ಟೇ. ಈ ಸರ್ಕಾರ ರಚನೆಗೆ ಎಂಬ ವಿಷಯ ಗೊತ್ತಿರಲಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶರದ್ ಪವಾರ್ ಮತ್ತು ಎನ್‌ಸಿಪಿ ಜೊತೆಗಿದ್ದೇನೆ ಎಂದು ಅಜಿತ್​ ಪವಾರ್​ ಹೇಳಿದ್ದೇನೆ ಎಂದರು.

ಶರದ್ ಪವಾರ್ ಅವರು ಇಂದು ಸಂಜೆ 4 ಗಂಟೆಗೆ ಎನ್‌ಸಿಪಿ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ.

Intro:Body:

nat

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.