ಔರಂಗಬಾದ್: ರಸ್ತೆ ಟೆಂಡರ್ನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದಕ್ಕೆ ಶಿವಸೇನೆ ಶಾಸಕ ಸಂಜಯ್ ಶಿರ್ಸಾತ್ ಮತ್ತು ಔರಂಗಬಾದ್ ಪಾಲಿಕೆಯ ಉಪ ಮೇಯರ್ ರಾಜೇಂದ್ರ ಜಂಜಲ್ ಕಾರ್ಯಕರ್ತರ ಜೊತೆಗೂಡಿ ಶಿವಸೇನೆಯ ಮಾಜಿ ಕಾರ್ಪೋರೇಟರ್ ಸುಶೀಲ್ ಖೇಡ್ಕರ್ ಎಂಬುವರನ್ನು ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಔರಂಗಬಾದ್ನ ಸತಾರದಲ್ಲಿ ನಡೆಯುತ್ತಿದ್ದ 2.25 ಕೋಟಿ ರೂ. ಮೌಲ್ಯದ ರಸ್ತೆ ಟೆಂಡರ್ನಲ್ಲಿ ಹರಾಜು ಕೂಗದಂತೆ ಶಾಸಕ ಸಂಜಯ್ ಶಿರ್ಸಾತ್ ಬೆದರಿಕೆ ಹಾಕಿದ್ದರು. ಆದರೂ ಸಹ ನಾನು ಹರಾಜಿನಲ್ಲಿ ಪಾಲ್ಗೊಂಡಿದ್ದೆ. ಆದ್ದರಿಂದ ಸಂಜಯ್ ಶಿರ್ಸಾತ್ ಮತ್ತು ರಾಜೇಂದ್ರ ಜಂಜಲ್ ಹಾಗೂ ಕಾರ್ಯಕರ್ತರು ನನಗೆ ಹೊಡೆದಿದ್ದಾರೆ. ನಂತರ ನಾನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಎಂದು ವೇದಂತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಶಿವಸೇನೆ ಮಾಜಿ ಕಾರ್ಪೋರೇಟರ್ ಸುಶೀಲ್ ಖೇಡ್ಕರ್ ಹೇಳಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಹನುಮಂತ್ ಭಪ್ಕರ್ ಪಿಟಿಐಗೆ ತಿಳಿಸಿದ್ದಾರೆ.
ಆದರೆ, ಸಂಜಯ್ ಶಿರ್ಸಾತ್ ಮತ್ತು ರಾಜೇಂದ್ರ ಜಂಜಲ್ ಮಾತ್ರ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.