ETV Bharat / bharat

ಬಿಜೆಪಿಯ ಹಿರಿಯ ಮುಖಂಡ ಶಹನ್ವಾಜ್​​​ ಹುಸೇನ್​​​ಗೆ ಕೊರೊನಾ - Shahnawaz Hussain COVID positive

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹುಸೇನ್ ಸ್ಟಾರ್ ಪ್ರಚಾರಕರಾಗಿದ್ದಾರೆ. ಸದ್ಯ ಅವರಿಗೆ ಕೊರೊನಾ ದೃಢಪಟ್ಟಿರುವ ಮಾಹಿತಿಯನ್ನು ಅವರು ಖುದ್ದು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

Shahnawaz Hussain tests Covid-19 positive
ಬಿಜೆಪಿಯ ಹಿರಿಯ ಮುಖಂಡ ಸೈಯದ್ ಶಹನಾವಾಜ್ ಹುಸೇನ್ ಗೆ ಕೊರೊನಾ
author img

By

Published : Oct 22, 2020, 7:24 AM IST

ಪಾಟ್ನಾ(ಬಿಹಾರ): ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಸೈಯದ್ ಶಹನ್ವಾಜ್​​ ಹುಸೇನ್​ಗೆ ಕೋವಿಡ್ -19 ದೃಢಪಟ್ಟಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹುಸೇನ್ ಸ್ಟಾರ್ ಪ್ರಚಾರಕರಾಗಿದ್ದಾರೆ. ಸದ್ಯ ಅವರಿಗೆ ಕೊರೊನಾ ದೃಢಪಟ್ಟಿರುವ ಮಾಹಿತಿಯನ್ನು ಅವರು ಖುದ್ದು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

"ನಾನು ಕೊರೊನಾ ಪಾಸಿಟಿವ್​ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದೆ. ನನ್ನ ಊಹೆಯಂತೆ ಇದೀಗ ವರದಿ ಪಾಸಿಟಿವ್​ ಬಂದಿದೆ" ಎಂದು ಹುಸೇನ್ ಟ್ವೀಟ್ ಮಾಡಿದ್ದಾರೆ.

"ಮುನ್ನೆಚ್ಚರಿಕಾ ಕ್ರಮವಾಗಿ, ನನ್ನನ್ನು ಏಮ್ಸ್​​ನಲ್ಲಿ ದಾಖಲಿಸಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಬೇಗ ಗುಣಮುಖವಾಗುವೆ. ಆತಂಕ ಪಡುವ ವಿಚಾರ ಏನೂ ಇಲ್ಲ" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.