ETV Bharat / bharat

ಕಣಿವೆನಾಡಲ್ಲಿ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳ ಶೋಧ: ಎಲ್​ಇಟಿಯ ನಾಲ್ವರು ಸೆರೆ - ಸೋಫೋರ್​ ಎನ್​​ಕೌಂಟರ್

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಗಾಗಿ ಪ್ರತಿದಿನವೂ ಶೋಧ ಕಾರ್ಯ ನಡೆಯುತ್ತಿದೆ. ಸೇನಾ ಕಾರ್ಯಾಚರಣೆಯಲ್ಲಿ ನಾಲ್ವರು ಎಲ್​ಇಟಿ ಉಗ್ರರನ್ನು ಸೆರೆ ಹಿಡಿಯಲಾಗಿದೆ.

terrorist arrested
ಉಗ್ರರ ಸೆರೆ
author img

By

Published : Jun 24, 2020, 10:29 AM IST

ಬಾರಾಮುಲ್ಲಾ (ಜಮ್ಮು ಕಾಶ್ಮೀರ): ಸೋಪೋರ್​ನ ಪೋಥ್ಕಾ ಮಕಾಂಹಾಗೂ ಚಂಪೂರ್​ ಅಥೂರಾ ಬಳಿ ರಕ್ಷಣಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಲಷ್ಕರ್ ಇ ತೋಯ್ಬಾದ ನಾಲ್ವರು ಭಯೋತ್ಪಾದಕರು ಸೆರೆಯಾಗಿದ್ದಾರೆ.

ಸೋಪೋರ್ ಪೊಲೀಸರು, 52 ರಾಷ್ಟ್ರೀಯ ರೈಫಲ್ಸ್​ ಹಾಗೂ ಸೆಂಟ್ರಲ್​ ರಿಸರ್ವ್ ಪೊಲೀಸ್ ಫೋರ್ಸ್​(ಸಿಆರ್​​ಪಿಎಫ್​) ಜಂಟಿಯಾಗಿ ಕೈಗೊಂಡ ಹುಡುಕಾಟದಲ್ಲಿ ನಾಲ್ವರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ಅವಿತುಕೊಂಡಿರಬಹುದಾದ ಭಯೋತ್ಪಾದಕರಿಗೆ ಸೇನೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಮಂಗಳವಾರ ರಕ್ಷಣಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಪುಲ್ವಾಮಾದ ಬಂಡ್ಜೂ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು. ಇದರ ಜೊತೆಗೆ ಓರ್ವ ಸಿಆರ್​ಪಿಎಫ್​ ಸಿಬ್ಬಂದಿ ಹುತಾತ್ಮನಾಗಿದ್ದರು.

ಕಳೆದ ಒಂದು ವಾರದಿಂದ ಒಟ್ಟು 8 ಭಯೋತ್ಪಾದಕರನ್ನು ಪುಲ್ವಾಮಾ ಹಾಗೂ ಶೋಪಿಯಾನ್ ಜಿಲ್ಲೆಗಳಲ್ಲಿ ಸೇನೆ ಹೊಡೆದುರುಳಿಸಿದೆ. ಈ ಉಗ್ರರಲ್ಲಿ ಜೈಷ್ ಇ ಮಹಮ್ಮದ್​ ಹಾಗೂ ಹಿಜ್ಬುಲ್​ ಮುಜಾಹಿದ್ದೀನ್​ನ ಉಗ್ರರು ಸೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.