ನವದೆಹಲಿ: ಕೊರೊನಾ ವೈರಸ್ನಿಂದಾಗಿ ಭಾರತದ ವ್ಯಾಪಾರ ಕ್ಷೇತ್ರದ ಮೇಲೆ ಉಂಟಾದ ಪರಿಣಾಮಗಳ ಕುರಿತು ಇಂದು ವಿವಿಧ ಸಚಿವಾಲಯಗಳ ಕಾರ್ಯದರ್ಶಿ ಮಟ್ಟದ ಸಭೆ ನಡೆಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ಕೆಲವು ದಿನಗಳ ಹಿಂದೆ, ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ನಿಂದ ಭಾರತದ ಆಮದು ಪತ್ತು ರಫ್ತುದಾರರ ಮೇಲೆ ಬೀರಿದ ಕೆಟ್ಟ ಪರಿಣಾಮಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಕೈಗಾರಿಕೆಗಳಿಗೆ ಆಹ್ವಾನ ನೀಡಿದ್ದೇವೆ ಎಂದಿದ್ದಾರೆ.
-
Secretary-level meeting to be held tomorrow over coronavirus impact on trade, says Sitharaman
— ANI Digital (@ani_digital) February 18, 2020 " class="align-text-top noRightClick twitterSection" data="
Read @ANI Story | https://t.co/qbAs0gX4DK pic.twitter.com/KoH7QVhRsd
">Secretary-level meeting to be held tomorrow over coronavirus impact on trade, says Sitharaman
— ANI Digital (@ani_digital) February 18, 2020
Read @ANI Story | https://t.co/qbAs0gX4DK pic.twitter.com/KoH7QVhRsdSecretary-level meeting to be held tomorrow over coronavirus impact on trade, says Sitharaman
— ANI Digital (@ani_digital) February 18, 2020
Read @ANI Story | https://t.co/qbAs0gX4DK pic.twitter.com/KoH7QVhRsd
ಈ ಬಗ್ಗೆ ಮಂಗಳವಾರ ಔಷಧ, ಜವಳಿ, ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಯಂತ್ರಾಂಶ, ಸೌರ, ಶಸ್ತ್ರಚಿಕಿತ್ಸಾ ಉಪಕರಣಗಳು, ಬಣ್ಣಗಳು, ರಸಗೊಬ್ಬರ, ರಾಸಾಯನಿಕ ಚಿಕಿತ್ಸೆ, ಟೆಲಿಕಾಂ, ತಾಮ್ರ, ಗಾಜು, ಮೊಬೈಲ್ ಉತ್ಪಾದನೆ, ಖಾದ್ಯ ತೈಲ, ಆರೋಗ್ಯ, ಪ್ರವಾಸೋದ್ಯಮ, ಸಾಗಣೆ ಮತ್ತು ಸಮುದ್ರ ಆಹಾರ ಉತ್ಪನ್ನಕ್ಕೆ ಸಂಬಂಧಿಸಿದವರ ಜೊತೆ ಮಾತನಾಡಲಾಗಿದೆ. ಇದರಲ್ಲಿ ಕೆಲವು ರಫ್ತಿಗೆ ಸಂಬಂದಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಕೆಲವು ಆಮದಿಗೆ ಸಂಬಂಧಿಸಿದ ಸಮಸ್ಯೆಗಳನ್ನ ಎದುರಿಸುತ್ತಿವೆ ಎಂದು ಹೇಳಿದ್ದಾರೆ.
ಎಲ್ಲಾ ಸಮಸ್ಯೆಗಳನ್ನ ಕೇಳಿದ್ದೇವೆ ಈ ಬಗ್ಗೆ ಬುಧವಾರ, ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳು ಒಂದೆಡೆ ಕುಳಿತು ಚರ್ಚೆ ನಡೆಸಲಾಗುತ್ತದೆ. ಇದರಿಂದ ಪ್ರತಿಯೊಂದು ವಿಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಆಯಾ ಕಾರ್ಯದರ್ಶಿಗಳೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ.
ಪ್ರಧಾನ ಆರ್ಥಿಕ ಸಲಹೆಗಾರರು ಕೂಡ ಈ ಸಭೆಯ ಭಾಗವಾಗಿರುತ್ತಾರೆ. ಸಂಬಂಧಪಟ್ಟ ಇಲಾಖೆಗಳನ್ನು ಹಣಕಾಸು ಸಚಿವಾಲಯ, ವಿವಿಧ ಕಾರ್ಯದರ್ಶಿಗಳು ಮತ್ತು ಪ್ರಧಾನ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.