ETV Bharat / bharat

ಆರ್​ಬಿಐನ ಡೆಪ್ಯುಟಿ ಗವರ್ನರ್​ಗೆ ತಲಾಶ್: ರೇಸ್​ನಲ್ಲಿ ನಾಲ್ವರು ಅರ್ಥಶಾಸ್ತ್ರಜ್ಞರು! -

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ತಮ್ಮ ಸೇವಾ ಅವಧಿ ಮುಕ್ತಾಯವಾಗುವ ಆರು ತಿಂಗಳು ಮೊದಲೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ತೆರವಾದ ಸ್ಥಾನ ತುಂಬಲು ಕೇಂದ್ರ ಸರ್ಕಾರ ಸೂಕ್ತ ಅಭ್ಯರ್ಥಿಗಾಗಿ ತಲಾಶ್ ನಡೆಸಿದೆ.

ಸಾಂದರ್ಭಿಕ ಚಿತ್ರ
author img

By

Published : Jun 25, 2019, 9:43 PM IST

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ತಮ್ಮ ಸೇವಾ ಅವಧಿ ಮುಕ್ತಾಯವಾಗುವ ಆರು ತಿಂಗಳು ಮೊದಲೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ತೆರವಾದ ಸ್ಥಾನ ತುಂಬಲು ಕೇಂದ್ರ ಸರ್ಕಾರ ಸೂಕ್ತ ಅಭ್ಯರ್ಥಿಗಾಗಿ ತಲಾಶ್ ನಡೆಸಿದೆ.

ಆಚಾರ್ಯ ಆಯ್ಕೆಗೂ ಮುನ್ನ ಹೊರಡಿಸಲಾದ ಡೆಪ್ಯುಟಿ ಗವರ್ನರ್​ ಹುದ್ದೆಯ ಜಾಹೀರಾತಿಗೆ 91 ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಅಧಿಕಾರಿಗಳು ಹಾಗೂ ಮಾರುಕಟ್ಟೆಯ ಚಿಂತಕರು ಇದ್ದರು. ಆಯ್ಕೆ ಸಮಿತಿಯು ಈಗಾಗಲೇ ವಿರಳ್ ಆಚಾರ್ಯ ಅವರ ಸ್ಥಾನಕ್ಕೆ ಕೆಲವು ಹೆಸರಗಳನ್ನು ಅಂತಿಮಗೊಳಿಸಿದೆ. ಕೇಂದ್ರ ಸರ್ಕಾರವು ಗವರ್ನರ್ ಅವರನ್ನು ಸಂಪರ್ಕಿಸಿ ಡೆಪ್ಯುಟಿ ಗವರ್ನರ್ ಯಾರು ಎಂಬುದು ತೀರ್ಮಾನಿಸಬೇಕಿದೆ.

ಡೆಪ್ಯುಟಿ ಗವರ್ನರ್ ಹುದ್ದೆಗೆ ಕೆಲವು ಹೆಸರಗಳು ಚಾಲ್ತಿಯಲ್ಲಿದ್ದು, ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರ ಹೆಸರು ಮೊದಲನೇ ಸಾಲಿನಲ್ಲಿದೆ. 2015ರವರೆಗೆ ಸಿಂಗಾಪುರದಲ್ಲಿ ಡಾಯ್ಚ ಬ್ಯಾಂಕ್​ ಎಜಿಎಸ್​ನ ಜಾಗತಿಕ ಸ್ಟ್ಯಾಟರ್ಜಿಸ್ಟ್ ಆಗಿದ್ದರು. ಕಳೆದ ತಿಂಗಳಲ್ಲಿ ಸನ್ಯಾಲ್ ಅವರು ಆರ್ಥಿಕ ಬೆಳವಣಿಗೆ ಬೆಂಬಲಿಸುವ ಕಡಿಮೆ ಬಡ್ಡಿ ದರಕ್ಕೆ ಸಹಮತ ವ್ಯಕ್ತಪಡಿಸಿದ್ದರು.

ಆರ್‌ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಎಂಪಿಸಿ ಸದಸ್ಯರಾದ ಮೈಕೆಲ್ ಪತ್ರ್​, ಜೆಪಿ ಮೋರ್ಗಾನ್ ಚೇಸ್ ಅಂಡ್ ಕಂಪನಿ ಇಂಡಿಯಾ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ಸಜ್ಜಿದ್ ಚಿನೊಯ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅಜಿತ್ ರಾನಡೆ ಕೂಡು ಈ ರೇಸ್​ನಲ್ಲಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.