ETV Bharat / bharat

ಸಬರಮತಿಗೆ ಬಂದಿಳಿದ ಸಮುದ್ರ ವಿಮಾನ: ಅಕ್ಟೋಬರ್ 31ಕ್ಕೆ ಪ್ರಧಾನಿಯಿಂದ ಚಾಲನೆ

ಸಮುದ್ರ ವಿಮಾನ ಸೇವೆಗೆ ಅಕ್ಟೋಬರ್ 31ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಇಂದು ಸಬರಮತಿಗೆ ಸಮುದ್ರ ವಿಮಾನ ಬಂದಿಳಿದಿದೆ.

sea plane
ಸಮುದ್ರ ವಿಮಾನ
author img

By

Published : Oct 26, 2020, 5:26 PM IST

ಅಹಮದಾಬಾದ್ (ಗುಜರಾತ್): ಸಮುದ್ರ ವಿಮಾನ (ಸೀ ಪ್ಲೇನ್​​) ಇಂದು ಅಹಮದಾಬಾದ್ ಬಳಿಯ ಸಬರಮತಿ ಏರೋಡ್ರಮ್​​ಗೆ ಆಗಮಿಸಿದ್ದು, ಅಕ್ಟೋಬರ್ 31ರಂದು ಪ್ರಧಾನಿ ಮೋದಿ ಈ ಸಮುದ್ರ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.

ಮಾಲ್ಡೀವ್ಸ್​ನ ಮಾಲೆಯಿಂದ ಹೊರಟಿದ್ದ ಈ ಸಮುದ್ರ ವಿಮಾನ ತಾಂತ್ರಿಕ ವಿಚಾರಕ್ಕೆ ಕೇರಳದ ಕೊಚ್ಚಿಯ ವೆಂಡುರ್ತಿ ಕಾಲುವೆಯಲ್ಲಿ ಭಾನುವಾರ ಲ್ಯಾಂಡ್ ಆಗಿತ್ತು. ಈಗ ಕೊಚ್ಚಿಯಿಂದ ಅಹಮದಾಬಾದ್​ನ ಸಬರಮತಿಗೆ ಬಂದು ತಲುಪಿದೆ.

19 ಆಸಗಳನ್ನು ಹೊಂದಿದ ಈ ಸಮುದ್ರ ವಿಮಾನದಲ್ಲಿ 12 ಪ್ರಯಾಣಿಕರು ಪ್ರಯಾಣಿಸಬಹುದು ಎಂದು ದಕ್ಷಿಣ ನೌಕಾ ವಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈಗ ಸದ್ಯಕ್ಕೆ ಈ ವಿಮಾನ ಸಬರಮತಿ ನದಿಯಿಂದ ಕೆವಾಡಿಯಾದ ಬಳಿಯಿರುವ ಏಕತಾ ಪ್ರತಿಮೆಯ ಬಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಆಂತರಿಕ ಸಂಚಾರಿ ವಿಮಾನವಾಗಿ ಬಳಕೆಯಾಗಲಿದೆ.

ಇದಕ್ಕಾಗಿ ಸಮುದ್ರ ವಿಮಾನ ಸೇವೆಗಾಗಿ ಸಬರಮತಿ ಮತ್ತು ಕೆವಾಡಿಯಾ ಬಳಿ ಏರೋಡ್ರಮ್​ಗಳ ನಿರ್ಮಾಣ ಮಾಡಲಾಗಿತ್ತು. ಈ ಯೋಜನೆಯನ್ನು ಒಳನಾಡು ಜಲ ಸಾರಿಗೆ ಪ್ರಾಧಿಕಾರ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಜಂಟಿಯಾಗಿ ನಿರ್ವಹಿಸುತ್ತಿದ್ದು, ಈ ಏರೋಡ್ರಮ್​ಗಳ ಮೂಲಕವೇ ಸಮುದ್ರ ವಿಮಾನ ಸಂಚಾರ ಆರಂಭಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.