ETV Bharat / bharat

ತಮಿಳುನಾಡಿನಲ್ಲಿ ಫ್ರೆಂಡ್ಸ್ ಆಫ್ ಪೊಲೀಸ್​ ವ್ಯವಸ್ಥೆ ರದ್ದುಗೊಳಿಸಿ; ಸಿಪಿಐ - ಸಿಪಿಐನ ರಾಜ್ಯ ಕಾರ್ಯದರ್ಶಿ ಆರ್.ಮುತರಸನ್,

ಸಿಪಿಐನ ರಾಜ್ಯ ಕಾರ್ಯದರ್ಶಿ ಆರ್.ಮುತರಸನ್, ಎಫ್‌ಒಪಿ ಪರಿಚಯಿಸುವ ಸಮಯದಲ್ಲಿಯೂ ಸಹ, ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
author img

By

Published : Jul 5, 2020, 9:14 PM IST

ಚೆನ್ನೈ (ತಮಿಳುನಾಡು) : ಫ್ರೆಂಡ್ಸ್ ಆಫ್ ಪೊಲೀಸ್ (ಎಫ್‌ಒಪಿ) ಯೋಜನೆಯನ್ನು ಕೇವಲ ಎರಡು ತಿಂಗಳು ಅಲ್ಲ, ಶಾಶ್ವತವಾಗಿ ರದ್ದುಗೊಳಿಸಬೇಕೆಂದು ತಮಿಳುನಾಡು ಸರ್ಕಾರಕ್ಕೆ ಕಮ್ಯೂನಿಸ್ಟ್​ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಜ್ಯ ಘಟಕ ಒತ್ತಾಯಿಸಿದೆ.

ಸಿಪಿಐನ ರಾಜ್ಯ ಕಾರ್ಯದರ್ಶಿ ಆರ್. ಮುತರಸನ್ ಈ ಕುರಿತು ಹೇಳಿಕೆ ನೀಡಿದ್ದು, ಟುಟಿಕೋರಿನ್ ಜಿಲ್ಲೆಯ ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿರುವ ಪೊಲೀಸರು ಪಿ. ಜಯರಾಜ್ ಮತ್ತು ಅವರ ಪುತ್ರ ಜೆ. ಬೆನ್ನಿಕ್ಸ್‌ರ ಮೇಲೆ ಹಲ್ಲೆ ನಡೆಸಲು ಎಫ್‌ಒಪಿ ಸಿಬ್ಬಂದಿಯನ್ನು ಬಳಸಿದ್ದೇ ಅವರ ಸಾವಿಗೆ ಕಾರಣವಾಗಿದೆ. ಎಫ್‌ಒಪಿ ಪರಿಚಯಿಸುವ ಸಮಯದಲ್ಲಿಯೂ ಸಹ ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಎಫ್‌ಒಪಿಯನ್ನು ರಾಜ್ಯ ಪೊಲೀಸರು ಎರಡು ತಿಂಗಳ ಕಾಲ ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಮುತರಸನ್, ಇದನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.