ನವದೆಹಲಿ: ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ರಸ್ತೆ ಬದಿಯ ಮಾರಾಟಗಾರರಿಗೆ ಆತ್ಮ ನಿರ್ಭರ ವಿಶೇಷ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ 5,000 ಕೋಟಿ ರೂ.ಗಳ ಸಾಲ ಸೌಲಭ್ಯ ಪಡೆಯಲು ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು 10 ಸಾವಿರ ರೂ.ಗಳ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ರಾಜ್ಯ ಸರ್ಕಾರಗಳು ಸಂಗ್ರಹಿಸಿದ ಡೇಟಾ ಪ್ರಕಾರ ಸುಮಾರು 50 ಲಕ್ಷ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಈ ಯೋಜನೆಗೆಂದೇ ಸರ್ಕಾರದಿಂದ ಸುಮಾರು 5 ಸಾವಿರ ಕೋಟಿ ರೂ. ಹಣ ಹರಿದುಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಜೊತೆಗೆ ಡಿಜಿಟಲ್ ಪಾವತಿ ಮತ್ತು ಸಮಯೋಚಿತ ಮರುಪಾವತಿಯನ್ನು ಉತ್ತೇಜಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ದೇಶದ ಟಾಪ್ ಟೆನ್ ರಾಜ್ಯಗಳಲ್ಲಿ 35 ಲಕ್ಷ ಬೀದಿ ಬದಿ ಮಾರಾಟಗಾರರಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 7.8 ಲಕ್ಷ ಮಾರಾಟಗಾರರಿದ್ದು, ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ 5.5 ಲಕ್ಷ ಮಾರಾಟಗಾರರನ್ನು ಹೊಂದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಲಾಗಿದೆ.
SBI ವರದಿಯಂತೆ ದೇಶದ ಒಟ್ಟು ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಇಂತಿದೆ...
ಸಂಖ್ಯೆ | ರಾಜ್ಯ | ಬೀದಿಬದಿ ವ್ಯಾಪಾರಿಗಳು(ಲಕ್ಷಗಳಲ್ಲಿ) |
ಉತ್ತರ ಪ್ರದೇಶ | 7.8 | |
2. | ಪಶ್ಚಿಮ ಬಂಗಾಳ | 5.5 |
3. | ಬಿಹಾರ | 5.3 |
4. | ರಾಜಸ್ತಾನ | 3.1 |
5. | ಮಹಾರಾಷ್ಟ್ರ | 2.9 |
6. | ತಮಿಳುನಾಡು | 2.8 |
7. | ಆಂಧ್ರಪ್ರದೇಶ | 2.1 |
8. | ಕರ್ನಾಟಕ | 2.1 |
9. | ಗುಜರಾತ್ | 2 |
10. | ಕೇರಳ | 1.9 |
11. | ಅಸ್ಸಾಂ | 1.9 |
12. | ಒಡಿಶಾ | 1.7 |
13. | ಹರಿಯಾಣ | 1.5 |
14. | ಮಧ್ಯಪ್ರದೇಶ | 1.4 |
15. | ಪಂಜಾಬ್ | 1.4 |
ರಸ್ತೆಬದಿ ಮಾರಾಟಗಾರರ ಸರಾಸರಿ ಆದಾಯ (ನ್ಯಾಷನಲ್ ಅಸೋಸಿಯೇಶನ್ ಆಫ್ ಸ್ಟ್ರೀಟ್ ವೆಂಡರ್ಸ್ ಆಫ್ ಇಂಡಿಯಾ 2018-19)
ನಗರ | ಅಂದಾಜು ಜನಸಂಖ್ಯೆ | ದಿನನಿತ್ಯದ ಅಂದಾಜು ಆದಾಯ (ರೂಪಾಯಿಗಳಲ್ಲಿ) |
ಅಹ್ಮದಾಬಾದ್ | 127,000 | 63 |
ಕೋಲ್ಕತ್ತಾ | 191,000 | 65 |
ದೆಹಲಿ | 200,000 | 66 |
ಮುಂಬೈ | 200,000 | 65 |
ಪಾಟ್ನಾ | 60,000 | 50 |
"ಬ್ಯಾಂಕಿಂಗ್ ಚಾನೆಲ್ ಮೂಲಕ, ಮುದ್ರಾ ಯೋಜನೆ, ಬೀದಿ ಮಾರಾಟಗಾರರು ಮತ್ತು ಮುದ್ರಾ ಯೋಜನೆಯಡಿ ಶಿಶು ಲೋನ್ ಹೊಂದಿರುವವರಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಇನ್ನು ಬೀದಿ ಬದಿ ವ್ಯಾಪಾರಿಗಳು ಕೊರೊನಾ ಲಾಕ್ಡೌನ್ ಹೇರಿಕೆಯಿಂದ ಗರಿಷ್ಠ ಪ್ರಮಾಣದ ಪರಿಣಾಮ ಎದುರಿಸುತ್ತಿದ್ದು, ಇವರಿಗೆ ಸುಲಭವಾಗಿ ಸಾಲ ಒದಗಿಸುವುದು ತುರ್ತಾಗಿ ಅಗತ್ಯವಿರುತ್ತದೆ ಎಂದು ವರದಿ ತಿಳಿಸಿದೆ.
ಬ್ಯಾಂಕ್ಗಳಿಗೆ ಎದುರಾದ ಸವಾಲು:
- ಈ ವಲಯಕ್ಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಸಾಲವನ್ನು ವಿಸ್ತರಿಸಲು ಬ್ಯಾಂಕುಗಳಿಗೆ ಯಾವುದೇ ಅನುಭವವಿಲ್ಲ ಮತ್ತು ಈ ವಲಯ ತಕ್ಕ ಉತ್ಪನ್ನವನ್ನು ಹೊಂದಿಲ್ಲ.
- ಹೆಚ್ಚಿನ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಕ್ರೆಡಿಟ್ ಇತಿಹಾಸ ಲಭ್ಯವಿಲ್ಲ. ಅಂದರೆ ಅವರು ಈ ಹಿಂದೆ ಬ್ಯಾಂಕ್ಗಳಿಂದ ಯಾವುದೇ ಸಾಲ ಪಡೆದಿಲ್ಲ. ಈ ಕಾರಣ ಸಾಲಗಾರರ ಸಾಲದ ಮೌಲ್ಯವನ್ನು ನಿರ್ಣಯಿಸಲು ಬ್ಯಾಂಕುಗಳಿಗೆ ಕಷ್ಟವಾಗಲಿದೆ.
- ಇನ್ನು ಬೀದಿ ಬದಿ ವ್ಯಾಪಾರಿ ಸಾಲಗಳಲ್ಲಿ ರಾಜಕೀಯ ಮಧ್ಯವರ್ತಿಗಳ ಪಾಲ್ಗೊಳ್ಳುವಿಕೆ ಇದ್ದು, ಇದರಿಂದಾಗಿ 5000 ಕೋಟಿ ರೂ. ಹಣದ ದುರುಪಯೋಗವಾಗುವ ಸಾಧ್ಯತೆಗಳಿವೆ.
- ಈ ಸಾಲಗಳಲ್ಲಿ ಹೆಚ್ಚಿನವು ವ್ಯವಹಾರದಲ್ಲಿ ಬಂಡವಾಳವಾಗಿ ಹೂಡಿಕೆ ಮಾಡುವ ಬದಲು ಬಳಕೆಯ ಉದ್ದೇಶಕ್ಕಾಗಿ ಹೋಗುತ್ತವೆ. ಇದು ಬ್ಯಾಂಕುಗಳಿಗೆ ಮರುಪಾವತಿ ಆಗುವುದು ಕಷ್ಟ ಎನ್ನಲಾಗ್ತಿದೆ.