ETV Bharat / bharat

ಅನರ್ಹ ಶಾಸಕರ ಅರ್ಜಿ ವಿಚಾರಣೆ: 15 ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂಕೋರ್ಟ್​ನಿಂದ ತಡೆ - ಅನರ್ಹ ಶಾಸಕರ ಅರ್ಜಿಯ ವಿಚಾರಣೆ

ಇಂದಿಗೆ ಎಲ್ಲ ವಾದ - ಪ್ರತಿವಾದಗಳು ಮುಕ್ತಾಯಗೊಂಡಿದ್ದು, ನ್ಯಾಯಮೂರ್ತಿ ಎನ್​ ವಿ ರಮಣ್​​ ನೇತೃತ್ವದ ತ್ರಿಸದಸ್ಯ ಪೀಠದಿಂದ ಮಹತ್ವದ ಆದೇಶ ಹೊರಡಿಸಿದೆ.

ಅನರ್ಹರ ಅರ್ಜಿ ವಿಚಾರಣೆ
author img

By

Published : Sep 26, 2019, 11:50 AM IST

Updated : Sep 26, 2019, 4:24 PM IST

ನವದೆಹಲಿ/ಬೆಂಗಳೂರು: ಅನರ್ಹ ಶಾಸಕರ ಮ್ಯಾರಾಥಾನ್‌ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್​ನಲ್ಲಿ ನಡೆಯಿತು. ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಿದ್ದು, ವಾದ - ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್​​ನ ತ್ರಿಸದಸ್ಯ ಪೀಠದಿಂದ ಪಕ್ಷಗಳಿಗೆ ಶಾಕಿಂಗ್​ ನ್ಯೂಸ್ ನೀಡಿದೆ.

ಇಂದಿಗೆ ಎಲ್ಲ ವಾದ- ಪ್ರತಿವಾದಗಳು ಮುಕ್ತಾಯವಾಗಿದ್ದು, ಅಕ್ಟೋಬರ್​ 22ರ ಬಳಿಕ ಅನರ್ಹತೆ ಶಾಸಕರ ಬಗ್ಗೆ ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿರುವ ಸುಪ್ರೀಂಕೋರ್ಟ್​ 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಅನರ್ಹ ಶಾಸಕರ ಪರ ಸಂದೀಪ್​ ಪಾಟೀಲ್​ ವಾದ ಮಂಡನೆ ಮಾಡಿದರು.

ಇದರಿಂದ ಉಪಚುನಾವಣೆಗೆ ತಯಾರಿ ನಡೆಸುತ್ತಿದ್ದ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್​ನಿಂದ ಶಾಕ್​ ಸಿಕ್ಕಿದೆ. ಸುಪ್ರೀಂಕೋರ್ಟ್​ನಿಂದ ಮುಂದಿನ ಆದೇಶ ಹೊರಬೀಳುವ ವರೆಗೂ ಈ ಕ್ಷೇತ್ರಗಳಿಗೆ ಚುನಾವಣೆ ನಡೆಯದಂತೆ ತ್ರಿಸದಸ್ಯ ಪೀಠ ತಿಳಿಸಿದೆ. ಹೀಗಾಗಿ ಎಲ್ಲ 17 ಶಾಸಕರ ಅನರ್ಹತೆ ಮುಂದುವರಿದಿದೆ.

ಇಂದಿನ ತಮ್ಮ ಪ್ರತಿವಾದದಲ್ಲಿ ಮಹಾರಾಷ್ಟ್ರದಲ್ಲಿ ಶಾಸಕರನ್ನು ಕೂಡಿಹಾಕಿದ್ದು, ಸೇರಿದಂತೆ ಪ್ರಮುಖ ವಿಚಾರಗಳನ್ನು ನ್ಯಾ.ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಪ್ರಸ್ತುತಪಡಿಸಿದರು.

ಬುಧವಾರ ನಡೆದಿದ್ದ ವಾದ ಮಂಡನೆ ವೇಳೆ ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಗಂಟೆಗಳಿಗೂ ಅಧಿಕ ಕಾಲ ಸುದೀರ್ಘವಾಗಿ ವಾದ ಮಂಡಿಸಿದ್ದರು. ಈ ವೇಳೆ ಪಕ್ಷೇತರ ಶಾಸಕರ ಸುಧಾಕರ್ ಪರ ವಕೀಲ ಸುಂದರಂ ಸಹ ತಮ್ಮ ವಾದವನ್ನು ಕೋರ್ಟ್​ ಮುಂದಿಟ್ಟಿದ್ದರು.

Intro:Body:

ನವದೆಹಲಿ/ಬೆಂಗಳೂರು: ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ಆರಂಭವಾಗಿದ್ದು, ಕಾಂಗ್ರೆಸ್ ಪರ ವಕೀಲ್ ಕಪಿಲ್ ಸಿಬಲ್ ಪ್ರತಿವಾದ ಮಂಡಿಸುತ್ತಿದ್ದಾರೆ.

ಇಂದಿನ ತಮ್ಮ ಪ್ರತಿವಾದದಲ್ಲಿ ಮಹಾರಾಷ್ಟ್ರದಲ್ಲಿ ಶಾಸಕರನ್ನ ಕೂಡಿಹಾಕಿದ್ದು ಸೇರಿದಂತೆ ತಮ್ಮ ಪ್ರಮುಖ ವಿಚಾರಗಳನ್ನು ನ್ಯಾ.ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದಾರೆ.

ಬುಧವಾರ ನಡೆದಿದ್ದ ವಾದ ಮಂಡನೆ ವೇಳೆ ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಗಂಟೆಗಳಿಗೂ ಅಧಿಕ ಕಾಲ ಸುದೀರ್ಘವಾಗಿ ವಾದ ಮಂಡಿಸಿದ್ದರು. ಈ ವೇಳೆ ಪಕ್ಷೇತರ ಶಾಸಕರ ಸುಧಾಕರ್ ಪರ ವಕೀಲ ಸುಂದರಂ ಸಹ ತಮ್ಮ ವಾದವನ್ನು ಕೋರ್ಟ್​ ಮುಂದಿಟ್ಟಿದ್ದರು.

ಇಂದಿಗೆ ಎಲ್ಲ ವಾದ-ಪ್ರತಿವಾದಗಳು ಮುಕ್ತಾಯವಾಗುವ ಸಾಧ್ಯತೆಯಿದ್ದು ಹೀಗಾಗಿ ಅನರ್ಹ ಭವಿಷ್ಯ ಇಂದೇ ನಿರ್ಧರಿತವಾಗಲಿದೆ. ಉಪಚುನಾವಣೆ ಘೋಷಣೆ ಹಾಗೂ ನಾಮಪತ್ರ ಸಲ್ಲಿಕೆಯ ವಿಚಾರವೂ ಕೋರ್ಟ್​ ತನ್ನ ನಿಲುವು ತಿಳಿಸುವ ಸಾಧ್ಯತೆ ಇದೆ.

Conclusion:
Last Updated : Sep 26, 2019, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.