ಮುಂಬೈ: ಬಾಲಿವುಡ್ನ ಪ್ರಸಿದ್ಧ ಗಾಯಕಿ ಅನುರಾಧಾ ಪೌಡ್ವಾಲ್ ತಮ್ಮ ತಾಯಿ ಎಂದು ಹೇಳಿ 50 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ರು. ಈ ದೂರಿನ ಹಿನ್ನೆಲೆ ತಿರುವನಂತಪುರಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ, ಸುಪ್ರೀಂಕೋರ್ಟ್ ಇಂದು ತಡೆ ನೀಡಿದೆ.
ಕರ್ಮಲಾ ಮೊಡೆಕ್ಸ್(45) ಅನುರಾಧ ಅವರಿಂದ 50 ಕೋಟಿ ರೂ. ಪರಿಹಾರ ಕೊಡಿಸುವಂತೆ ತಿರುವನಂತಪುರ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನುರಾಧ ಹಾಗೂ ಅರುಣ್ ಪೌಡ್ವಾಲ್ ನನ್ನ ತಂದೆ ತಾಯಿ. ನಾನು ಹುಟ್ಟಿದ ನಾಲ್ಕೇ ದಿನಕ್ಕೆ ತಂದೆ ತಾಯಿ ನನ್ನನ್ನು ದೂರ ಮಾಡಿದ್ದರು. ಪೊನ್ನಚ್ಚನ್ ಹಾಗೂ ಅಗ್ನಿಸ್ ದಂಪತಿ ಮಡಲಿಗೆ ನನ್ನನ್ನು ಹಾಕಿ ತಂದೆ, ತಾಯಿ ಹೋಗಿದ್ದರು. ತಮ್ಮ ಬ್ಯುಸಿ ಕೆಲಸದ ಕಾರಣದಿಂದ ನನ್ನನ್ನು ಸಾಕಲು ಆಗದೇ ಅವರು ನನ್ನಿಂದ ದೂರವಾಗಿದ್ದರು ಎಂದು ಕರ್ಮಾಲಾ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ನೇತೃತ್ವದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಈ ಪ್ರಕರಣವನ್ನು ತಿರುವನಂತಪುರಂ ನ್ಯಾಯಾಲಯದಿಂದ ಮುಂಬೈಗೆ ವರ್ಗಾಯಿಸಲು ಪೌಡ್ವಾಲ್ ಅರ್ಜಿ ಸಲ್ಲಿಸಿದ್ದರು.
ಪೌಡ್ವಾಲ್ ಅವರು ಪದ್ಮಶ್ರೀ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದು, ಸಂಗೀತ ಸಂಯೋಜಕ ಅರುಣ್ ಪೌಡ್ವಾಲ್ ಅವರನ್ನು ವಿವಾಹವಾಗಿದ್ದಾರೆ. ದೂರಿನಲ್ಲಿ ಮಹಿಳೆ ಅವರಿಬ್ಬರು ನನ್ನ ಹೆತ್ತವರು ಎಂದಿದ್ದರು. ಆದ್ರೆ ಇದನ್ನು ದಂಪತಿಗಳು ನಿರಾಕರಿಸಿದ್ದಾರೆ. ಕೌಟುಂಬಿ ನ್ಯಾಯಾಲಯದಲ್ಲಿದ್ದ ಈ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ದಂಪತಿಗಳಿಬ್ಬರು ಉನ್ನತ ನ್ಯಾಯಾಲಯಕ್ಕೆ ತೆರಳಿದ್ದರು.