ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ನ ಮಂಡಳಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿದೆ.
ಕರ್ನಾಟಕ ಹೈಕೋರ್ಟ್‌ಗೆ 5 ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದು, ಶಿವಶಂಕರ್ ಅನರಣ್ಣವರ್, ಎಂ ಗಣೇಶಯ್ಯ, ಉಮಾ, ವಿ ಶ್ರೀಶಾನಂದ, ಜೆ ಸಂಜೀವ್ ಕುಮಾರ್ ಮತ್ತು ಪಿ ನೇಮಾಚಂದ್ರ ದೇಸಾಯಿ ಅವರ ಹೆಸರು ಇದೆ.
ಆಂಧ್ರಪ್ರದೇಶದ ಹೈಕೋರ್ಟ್‌ಗೆ ಬಿ.ಕೃಷ್ಣ ಮೋಹನ್, ಕೆ ಸುರೇಶ್ ರೆಡ್ಡಿ ಮತ್ತು ಜೆ.ಲಲಿತಾ ಕುಮಾರಿ ಅವರನ್ನು ಶಿಫಾರಸು ಮಾಡಲಾಗಿದೆ.
ತೆಲಂಗಾಣ ಹೈಕೋರ್ಟ್‌ಗೆ ಬಿ ವಿಜಯ್ಸೆನ್ ರೆಡ್ಡಿ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ.