ETV Bharat / bharat

ಒಬ್ಬಂಟಿ ಹಿರಿಯ ನಾಗರಿಕರ ನೆರವಿಗೆ ಧಾವಿಸಿ: ಕೇಂದ್ರ - ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ

ದೇಶಾದ್ಯಂತ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ಹಿರಿಯ ನಾಗರಿಕರ ನೆರವಿಗೆ ಧಾವಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

supreme court
ಸುಪ್ರೀಂ ಕೋರ್ಟ್​
author img

By

Published : Aug 4, 2020, 1:52 PM IST

ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಧಾವಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಕೊರೊನಾ ಸೋಂಕು ಹರಡಿರುವ ಈ ವೇಳೆ ಹಿರಿಯ ನಾಗರಿಕರಿಗೆ ಪಿಂಚಣಿ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಔಷಧಗಳನ್ನು ಒದಗಿಸಬೇಕು ಎಂದು​ ಆಗ್ರಹಿಸಿ ಮಾಜಿ ಕಾನೂನು ಮಂತ್ರಿ ಅಶ್ವಿನಿ ಕುಮಾರ್ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್​​​ ನ್ಯಾಯಮೂರ್ತಿ ಅಶೋಕ್​ ಭೂಷಣ್​, ನ್ಯಾಯಮೂರ್ತಿ ಆರ್.ಎಸ್.ರೆಡ್ಡಿ ಅವರಿದ್ದ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು.

ಈ ವೇಳೆ, ಒಬ್ಬಂಟಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಅಗತ್ಯದ ವೇಳೆಗಳಲ್ಲಿ ಸಹಕಾರ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

ಇದರ ಜೊತೆಗೆ ವೃದ್ಧಾಶ್ರಮಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್​ ಧರಿಸುವಂತೆ ಸೂಚನೆ ನೀಡಬೇಕು ಎಂದೂ ಸರ್ಕಾರಗಳಿಗೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.