ETV Bharat / bharat

ನಿರ್ಭಯಾ  ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ವಿಚಾರ: ಅರ್ಜಿ ವಿಚಾರಣೆ ಮುಂದೂಡಿಕೆ - ಅಪರಾಧಿ ಪವನ್​​ ಕುಮಾರ್​​ ಗುಪ್ತಾ

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಮುಂದೂಡಿದೆ.

Nirbhaya convicts
ಸುಪ್ರೀಂಕೋರ್ಟ್
author img

By

Published : Feb 13, 2020, 12:39 PM IST

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಈ ಅರ್ಜಿಯ ಸಂಬಂಧ ಅಪರಾಧಿಗಳು ತಮ್ಮ ಪ್ರತಿಕ್ರಿಯೆಯನ್ನು ಕೋರ್ಟ್‌ಗೆ ಸಲ್ಲಿಸಿದ ನಂತರವಷ್ಟೇ ವಿಚಾರಣೆ ಮುಂದುವರೆಯಲಿದೆ.

ಅಪರಾಧಿ ಪವನ್​​ ಕುಮಾರ್​​ ಗುಪ್ತಾ ವಿಚಾರವಾಗಿ ನಿಷ್ಪಕ್ಷಪಾತ ಸಲಹೆ ನೀಡಲು ಹಿರಿಯ ವಕೀಲೆ ಅಂಜನಾ ಪ್ರಕಾಶ್ ಅವರನ್ನು ​​ಆ್ಯಮಿಕಸ್‌ ಕ್ಯೂರಿಯಾಗಿ ಕೋರ್ಟ್‌ ನೇಮಿಸಿದೆ. ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್ ಮತ್ತು ಎ. ಎಸ್. ಬೋಪಣ್ಣ ಅವರ ನ್ಯಾಯಪೀಠವು ಈ ನಿರ್ಧಾರ ಪ್ರಕಟಿಸಿತು.

ನಾಳೆ ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆ ಮುಂದುವರೆಯುವುದು ಎಂದು ನ್ಯಾಯಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.