ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಉಂಟಾಗಿರುವ ನೀರಿನ ಅಭಾವ ನೀಗಿಸಲು ಮಳೆ ನೀರು ಸಂರಕ್ಷಣೆ ಮಾಡಿ ಎಂದು ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದ ವಿವಿಧ ಗ್ರಾಮದ ಮುಖ್ಯಸ್ಥರು ಮತ್ತು ಆಯಾ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸಹಿ ಉಳ್ಳ ಪತ್ರ ತಲುಪಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದ ಸೋನ್ಭದ್ರ ಜಿಲ್ಲೆಯ 637 ಹಳ್ಳಿಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಬರೆದಿರುವ ಪತ್ರ ತಲುಪಿದೆ.
ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ 'ಗ್ರಾಮದ ಮುಖ್ಯಸ್ಥರಿಗೆ ನಮಸ್ಕಾರ, ನೀವೂ ಮತ್ತು ನಿಮ್ಮ ಗ್ರಾಮದ ಸಹೋದರ ಸಹೋದರಿಯರು ಆರೋಗ್ಯವಾಗಿದ್ದೇರೆಂದು ಭಾವಿಸುತ್ತೇನೆ. ಇನ್ನೇನು ಕಲ ದಿನಗಳಲ್ಲೇ ಮಳೆಗಾಲ ಪ್ರಾರಂಭವಾಗುತ್ತಿದೆ. ಸಾಕಷ್ಟು ಮಳೆಯನ್ನ ಆಶೀರ್ವದಿಸುವ ಆ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಆಶೀರ್ವಾದವನ್ನ(ಮಳೆ ನೀರು) ನಾವು ಸಂರಕ್ಷೀಸಿಕೊಳ್ಳಬೇಕಾಗಿದೆ'. ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರ ತಲುಪಿದ ಕೂಡಲೆ ಗ್ರಾಮ ಸಭೆಯನ್ನ ನಡೆಸಿ ಮಳೆ ನೀರನ್ನ ಹೇಗೆ ಸಂರಕ್ಷಣೆ ಮಾಡಬೇಕು ಎಂದು ಚರ್ಚೆ ನಡೆಸಿ. ನೀವು ಮಳೆ ನೀರನ್ನ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳೂತ್ತೀರ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.