ETV Bharat / bharat

ಗೋವಿನ ಸಗಣಿ,ಮೂತ್ರದಲ್ಲಿ ಪೋಷಕಾಂಶಗಳಿವೆ: ಜರ್ಮನ್ ಮಹಿಳೆ - undefined

ಪದ್ಮಶ್ರಿ ಸುದೇವಿ ಮತ್ತು ನೀ ಫ್ರೆಡ್ರಿಕ್ ಐರೀನ್ ಬ್ರುಯಿನಿಂಗ್ ಅವರು ಮಥುರಾ ಜಿಲ್ಲೆಯ ರಾಧಾಕುಂದ್​​​ನಲ್ಲಿ ರಾಧಾ- ಸುರಭಿ ಗೋ ಶಾಲೆಯನ್ನು ನಡೆಸುತ್ತಿದ್ದಾರೆ. ಇಲ್ಲಿ 1,800ಕ್ಕೂ ಅಧಿಕ ಹಸುಗಳಿದ್ದು, ಇದರಲ್ಲಿ ವಯಸ್ಸಾದ, ಅನಾರೋಗ್ಯ ಪೀಡಿತ ಹಾಗೂ ಗಾಯಗೊಂಡ ಹಸುಗಳ ಆರೈಕೆ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : May 30, 2019, 9:24 AM IST

ಮಥುರಾ: ಮನೆ ಹಾಗೂ ತೋಟಗಾರಿಕೆಯಲ್ಲಿ ಹಸುಗಳು ಪಾಲನೆ-ಪೋಷಣೆ ಲಾಭದಾಯಕ ಎಂಬುದನ್ನು ಸರ್ಕಾರ ಜನರಿಗೆ ಮನವರಿಕೆ ಮಾಡಿಸಬೇಕು ಎಂದು ಭಾರತದಲ್ಲಿ ಗೋ ಶಾಲೆ ನಡೆಸುತ್ತಿರುವ ಜರ್ಮನ್ ಮಹಿಳೆ ಪದ್ಮಶ್ರೀ ಸುದೇವಿ ಹೇಳಿದ್ದಾರೆ.

ಪದ್ಮಶ್ರಿ ಸುದೇವಿ ಮತ್ತು ನೀ ಫ್ರೆಡ್ರಿಕ್ ಐರೀನ್ ಬ್ರುಯಿನಿಂಗ್ ಅವರು ಮಥುರಾ ಜಿಲ್ಲೆಯ ರಾಧಾಕುಂದ್​​​ನಲ್ಲಿ ರಾಧಾ-ಸುರಭಿ ಗೋ ಶಾಲೆ ನಡೆಸುತ್ತಿದ್ದಾರೆ. ಇಲ್ಲಿ 1,800ಕ್ಕೂ ಅಧಿಕ ಹಸುಗಳಿದ್ದು, ಇದರಲ್ಲಿ ವಯಸ್ಸಾದ, ಅನಾರೋಗ್ಯ ಪೀಡಿತ ಹಾಗೂ ಗಾಯಗೊಂಡ ಹಸುಗಳ ಆರೈಕೆ ಮಾಡುತ್ತಿದ್ದಾರೆ.

ಕೃಷಿಯನ್ನು ಉಳಿಸಲು ದೊಡ್ಡ ರೀತಿಯಲ್ಲಿ ಹಸುಗಳು ನೆರವಾಗುತ್ತವೆ. ಹಸುಗಳ ಮಾಲೀಕರಿಗೆ ಗೋ ಸೇವೆ ಲಾಭದಾಯಕ ಎಂಬುದನ್ನು ಸರ್ಕಾರ ತಿಳಿಸಬೇಕಿದೆ ಎಂದು ಸಲಹೆ ನೀಡಿದರು.

ಜನರು ವಿಷಯುಕ್ತ ಆಹಾರ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ಅನೇಕ ವಿಧದ ಕಾಯಿಲೆಗಳಿಂದ ನರಳಿ ಸಾವನ್ನಪ್ಪುತ್ತಿದ್ದಾರೆ. ಅವರು ಬಳಸುವ ತರಕಾರಿ, ಧಾನ್ಯ ಮತ್ತು ಹಾಲು ಕಲುಷಿತವಾಗಿದ್ದು, ರಾಸಾಯನಿಕ ಗೊಬ್ಬರ ಕೃಷಿಯನ್ನು ಹಾಳು ಮಾಡುತ್ತಿದೆ. ಗೋವಿನ ಸಗಣಿ ಮತ್ತು ಮೂತ್ರದಲ್ಲಿ ಸಂರಕ್ಷಿತ ಪೋಷಕಾಂಶಗಳು ತುಂಬಿವೆ ಎಂದು ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.