ETV Bharat / bharat

ಉತ್ತರ ಕೊರಿಯಾದ ರಹಸ್ಯ ಅಣುಬಾಂಬ್ ತಯಾರಿಕಾ ನೆಲೆ ಪತ್ತೆ

ಪ್ಲಾನೆಟ್​ ಲ್ಯಾಬ್ಸ್​ ಎಂಬ ಸಂಸ್ಥೆಯು ಸೆರೆಹಿಡಿದ ಉಪಗ್ರಹ ಚಿತ್ರಗಳನ್ನು ಮಿಡಲ್​ಬರ್ರಿ ಅಂತಾರಾಷ್ಟ್ರೀಯ ಅಧ್ಯಯನಗಳ ಸಂಸ್ಥೆಯು ವಿಶ್ಲೇಷಣೆ ಮಾಡಿದ್ದು, ಉತ್ತರ ಕೊರಿಯಾದಲ್ಲಿ ಸಕ್ರಿಯ ಅಣುಬಾಂಬ್ ತಯಾರಿಕಾ ವಸಾಹತು ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದೆ. ಪೋಂಗ್ಯಾಂಗ್ ಬಳಿಯ ವೊಲ್ಲೊ-ರಿ ಎಂಬ ಹಳ್ಳಿಯ ಬಳಿ ಈ ಅಣುಕೇಂದ್ರ ಕಾರ್ಯನಿರ್ವಹಿಸುತ್ತಿರುವುದಾಗಿ ಸಿಎನ್​ಎನ್​ ವರದಿ ಮಾಡಿದೆ.

author img

By

Published : Jul 9, 2020, 5:48 PM IST

undeclared NKorean facility
undeclared NKorean facility

ವಾಶಿಂಗ್ಟನ್: ಗೌಪ್ಯ ಸ್ಥಳವೊಂದರಲ್ಲಿ ಉತ್ತರ ಕೊರಿಯಾ ಅಣು ಸಿಡಿತಲೆಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಉಪಗ್ರಹ ಚಿತ್ರಗಳ ಮಾಹಿತಿಯನ್ನಾಧರಿಸಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ವರದಿ ಮಾಡಿದೆ.

ಪ್ಲಾನೆಟ್​ ಲ್ಯಾಬ್ಸ್​ ಎಂಬ ಸಂಸ್ಥೆಯು ಸೆರೆಹಿಡಿದ ಉಪಗ್ರಹ ಚಿತ್ರಗಳನ್ನು ಮಿಡಲ್​ಬರ್ರಿ ಅಂತಾರಾಷ್ಟ್ರೀಯ ಅಧ್ಯಯನಗಳ ಸಂಸ್ಥೆಯು ವಿಶ್ಲೇಷಣೆ ಮಾಡಿದ್ದು, ಉತ್ತರ ಕೊರಿಯಾದಲ್ಲಿ ಸಕ್ರಿಯ ಅಣುಬಾಂಬ್ ತಯಾರಿಕಾ ವಸಾಹತು ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದೆ. ಪೋಂಗ್ಯಾಂಗ್ ಬಳಿಯ ವೊಲ್ಲೊ-ರಿ ಎಂಬ ಹಳ್ಳಿಯ ಬಳಿ ಈ ಅಣುಕೇಂದ್ರ ಕಾರ್ಯನಿರ್ವಹಿಸುತ್ತಿರುವುದಾಗಿ ಸಿಎನ್​ಎನ್​ ವರದಿ ಮಾಡಿದೆ.

"ಉಪಗ್ರಹದಲ್ಲಿ ಕಾಣುತ್ತಿರುವ ಸ್ಥಳದಲ್ಲಿ ಅಣುಬಾಂಬ್ ತಯಾರಿಕೆಯ ಎಲ್ಲ ಕುರುಹುಗಳೂ ಇವೆ. ಸುರಕ್ಷತಾ ವಲಯ, ಅಲ್ಲೇ ಇರಲು ಮನೆಗಳು, ರಾಜಕೀಯ ಮುಖಂಡರು ಭೇಟಿ ನೀಡಿದ ಕುರುಹು ಹಾಗೂ ಭೂಗತ ಕಾರ್ಯಾಚರಣೆ ಪ್ರದೇಶ ಹೀಗೆ ಹಲವಾರು ವ್ಯವಸ್ಥೆಗಳು ಸ್ಥಳದಲ್ಲಿರುವುದು ಗೋಚರಿಸುತ್ತಿದೆ. ಇದರ ಪಕ್ಕದಲ್ಲೇ ಬಾಟಲಿ ನೀರಿನ ಕಾರ್ಖಾನೆ ಇದ್ದು, ಅಲ್ಲಿ ಇಂಥ ಯಾವುದೇ ಕುರುಹುಗಳು ಇಲ್ಲ." ಎಂದು ಮಿಡಲ್​ಬರ್ರಿ ಇನ್​ಸ್ಟಿಟ್ಯೂಟ್​​ನ ಪ್ರಾಧ್ಯಾಪಕ ಜೆಫ್ರಿ ಲೂಯಿಸ್ ಹೇಳಿದ್ದಾರೆ.

"ಎಲ್ಲಕ್ಕೂ ಪ್ರಮುಖವಾಗಿ ಈ ಸ್ಥಳದಲ್ಲಿ ಭಾರಿ ಪ್ರಮಾಣದ ವಾಹನ ಸಂಚಾರವಿದೆ. ಕಾರು, ಲಾರಿ, ಶಿಪ್ಪಿಂಗ್ ಕಂಟೇನರ್​ಗಳು ಎಲ್ಲೆಡೆ ಕಾಣುತ್ತಿದ್ದು, ಕಾರ್ಖಾನೆಯು ಅತ್ಯಂತ ಸಕ್ರಿಯವಾಗಿರುವಂತೆ ಕಾಣಿಸುತ್ತಿದೆ. ಅನೇಕ ವರ್ಷಗಳಿಂದ ಈ ಸ್ಥಳದಲ್ಲಿ ಒಂದೇ ಸಮನೆ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿ ಖಚಿತವಾಗಿಯೂ ಅಣು ಸಾಮಗ್ರಿಗಳನ್ನೇ ತಯಾರಿಸಲಾಗುತ್ತಿದೆ" ಎನ್ನುತ್ತಾರೆ ಲೂಯಿಸ್.

ಅಣು ನಿಶಸ್ತ್ರೀಕರಣ ಅಧ್ಯಯನ ಸಂಸ್ಥೆಯ ಭಾಗವಾಗಿರುವ ಜೇಮ್ಸ್​ ಮಾರ್ಟಿನ್ ಸೆಂಟರ್ 2015 ರಲ್ಲಿಯೇ ಈ ಅಣುಬಾಂಬ್ ತಯಾರಿಕಾ ಸ್ಥಳವನ್ನು ಪತ್ತೆ ಮಾಡಿತ್ತು. ಆದರೆ ಉತ್ತರ ಕೊರಿಯಾದ ನಿಲುವಿನಲ್ಲಿ ಸ್ಪಷ್ಟತೆ ಇರದ ಕಾರಣ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.