ETV Bharat / bharat

ಇವರ ನದಿ ಸ್ವಚ್ಛತೆ ಮಾದರಿ ಸರ್ಕಾರಕ್ಕೊಂದು ಪಾಠ.. ಸಂತನ ಸಾಧನೆ ಕೊಂಡಾಡಿದ್ದ ಎಪಿಜೆ ಕಲಾಂ!!

ಸಂತ ಬಲ್ಬೀರ್ ಸಿಂಗ್ ಸೀಚೆವಾಲ್, ಕಾಳಿ ವೀ ನದಿಯ ಸ್ವಚ್ಛತೆಯ ಸವಾಲನ್ನು ಸ್ವೀಕರಿಸಿ ಅಭಿಯಾನ ಪ್ರಾರಂಭಿಸಿದರು. ಆದರೆ, ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅವರೇ ಖುದ್ದಾಗಿ ನದಿಗೆ ಹಾರಿ, ಅದರಲ್ಲಿದ್ದ ಕಳೆ ಹಾಗೂ ಸಸ್ಯಗಳನ್ನು ತೆಗೆಯುವ ಕೆಲಸ ಪ್ರಾರಂಭಿಸಿದರು. ಇದನ್ನು ನೋಡಿದ ಹಲವು ಹಳ್ಳಿ ಜನ ಈ ಅಭಿಯಾನಕ್ಕೆ ಕೈಜೋಡಿಸಿದರು..

Sant Balbir Singh
ಸಂತ ಬಲ್ಬೀರ್ ಸಿಂಗ್ ಸೀಚೆವಾಲ್
author img

By

Published : Aug 1, 2020, 5:38 PM IST

ಚಂಡೀಗಢ(ಪಂಜಾಬ್) : ಅಭಿವೃದ್ಧಿಯ ಹೆಸರಿನಲ್ಲಿ ನದಿ ನೀರನ್ನು ಮನುಷ್ಯ ಕಲುಷಿತಗೊಳಿಸುತ್ತಿದ್ದಾನೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯಲು ನೀರಿಲ್ಲದೆ ಹಲವು ಪ್ರದೇಶಗಳಲ್ಲಿ ಜನರು ಪರದಾಡುತ್ತಿದ್ದಾರೆ. ಕಲುಷಿತ ನೀರನ್ನು ಕುಡಿಯುತ್ತಿರುವ ಪರಿಣಾಮವಾಗಿ ರೋಗಗಳು ಜನರನ್ನು ಮುತ್ತಿಕ್ಕುತ್ತಿದೆ. ನದಿ, ಕೆರೆಗಳು ಕಲುಷಿತಗೊಂಡು, ಅದರ ನೀರು ಕುಡಿಯಲು ಅಯೋಗ್ಯವೆನಿಸಿದೆ.

ನದಿಯ ಸ್ವಚ್ಛತೆಗೆ ಸರ್ಕಾರ ಎಂತಹ ಯೋಜನೆ ರೂಪಿಸಿದರೂ ಫಲಿಸುತ್ತಿಲ್ಲ. ಆದರೆ, ಇವೆಲ್ಲದರ ನಡುವೆ ಪದ್ಮಶ್ರೀ ಪುರಸ್ಕೃತ ಸಂತ ಬಲ್ಬೀರ್ ಸಿಂಗ್ ಸೀಚೆವಾಲ್ ಎಂಬುವರು ನದಿ ನೀರಿನ ಸ್ವಚ್ಛತೆಯಲ್ಲಿ ಮೈಲುಗಲ್ಲು ಸ್ಥಾಪಿಸಿದ್ದಾರೆ. ಸಂತ ಬಲ್ಬೀರ್ ಸಿಂಗ್ ಸೀಚೆವಾಲ್, ಪಂಜಾಬ್​ನ ಸೀಚೆವಾಲ್​ನವರು. ಅವರ ಸತತ 20 ವರ್ಷಗಳ ಕಠಿಣ ಪರಿಶ್ರಮವು ನದಿ ನೀರಿನ ಸ್ವಚ್ಛತೆಗೆ ದೇಶಕ್ಕೆ ಸರಳ ಮತ್ತು ಕೈಗೆಟುಕುವ ಮಾದರಿಯನ್ನು ನೀಡಿದೆ.

ಇದನ್ನು ಸರ್ಕಾರಗಳು ಕೂಡ ಈವರೆಗೆ ಮಾಡಲು ಸಾಧ್ಯವಾಗಿಲ್ಲ. ಬೃಹತ್ ಚಳವಳಿಯನ್ನು ಆರಂಭಿಸುವ ಮೂಲಕ ಬಲ್ಬೀರ್ ಸಿಂಗ್ ಇದನ್ನು ಮಾಡಿದ್ದಾರೆ. ಇಂದಿನಿಂದ ಸುಮಾರು 20 ವರ್ಷಗಳ ಹಿಂದೆ, ಅಂದರೆ ಜುಲೈ 15, 2000ರಂದು ಪಂಜಾಬ್​ನ ಜಲಂಧರ್‌ನ ಪವಿತ್ರ ಕಾಳಿ ವೀ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸೀಚೆವಾಲ್ ಕೈಗೆತ್ತಿಕೊಂಡರು. ಈ ಮೂಲಕ ಜಗತ್ತಿಗೆ ಮಾದರಿಯಾದರು.

ಸಂತ ಬಲ್ಬೀರ್ ಸಿಂಗ್ ಸೀಚೆವಾಲ್, ಕಾಳಿ ವೀ ನದಿಯ ಸ್ವಚ್ಛತೆಯ ಸವಾಲನ್ನು ಸ್ವೀಕರಿಸಿ ಅಭಿಯಾನವನ್ನು ಪ್ರಾರಂಭಿಸಿದರು. ಆದರೆ, ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅವರೇ ಖುದ್ದಾಗಿ ನದಿಗೆ ಹಾರಿ, ಅದರಲ್ಲಿದ್ದ ಕಳೆ ಹಾಗೂ ಸಸ್ಯಗಳನ್ನು ತೆಗೆಯುವ ಕೆಲಸವನ್ನು ಪ್ರಾರಂಭಿಸಿದರು. ಇದನ್ನು ನೋಡಿದ ಹಲವು ಹಳ್ಳಿಗಳ ಜನರು ಈ ಅಭಿಯಾನಕ್ಕೆ ಜಿಗಿದರು. ಇವರೆಲ್ಲರ ಒಗ್ಗಟ್ಟಿನ ಮಂತ್ರದಿಂದ ಬಂದಿರುವ ಫಲಿತಾಂಶವು ಇಂದು ನಮ್ಮೆಲ್ಲರ ಮುಂದಿದೆ.

ಇವರ ನದಿ ಸ್ವಚ್ಛತೆ ಮಾದರಿ ಸರ್ಕಾರಕ್ಕೊಂದು ಪಾಠ

ಕಾಳಿ ವೀ ನದಿಯನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿದ ನಂತರ, ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದು ಮತ್ತು ನೀರಿನ ಮಟ್ಟವನ್ನು ಹೆಚ್ಚಿಸುವುದು ಬಲ್ಬೀರ್ ಸಿಂಗ್ ಅವರ ಮುಂದಿನ ಉದ್ದೇಶವಾಗಿತ್ತು. ಇದಕ್ಕಾಗಿ ಅವರು ಸುಲ್ತಾನಪುರದಲ್ಲಿ ಭೂಮಿಯನ್ನು ಅಗೆದು ಅದರ ಮೂಲಕ ಮಳೆ ನೀರು ಸಂಗ್ರಹಿಸುವ ಮಾದರಿ ಸಿದ್ಧಪಡಿಸಿದರು. ವ್ಯರ್ಥವಾಗೋ ಮಳೆ ನೀರನ್ನು ಅವರು ಹಿಡಿದಿಟ್ಟು ಮಾಡಿದ ಮಾದರಿ ಕಾರ್ಯವಿದು.

ಕೊಳಕು ನೀರನ್ನು ಸಂಸ್ಕರಿಸಲು ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ಜನರಲ್ಲಿ ಅವರು ಮನವಿ ಮಾಡಿದರು. ನಂತರ ಅದಕ್ಕಾಗಿ ಹಲವು ಸಸ್ಯಗಳನ್ನು ಅನೇಕ ಹಳ್ಳಿಗಳಲ್ಲಿ ನಡೆಸಲಾಯಿತು. ಆ ಮೂಲಕ ಕೊಳಕು ನೀರನ್ನು ಮತ್ತೆ ಕೃಷಿಯಲ್ಲಿ ಬಳಸಲು ಪ್ರಾರಂಭಿಸಲಾಯಿತು. ಇದರ ನಂತರ ಅವರು ತಮ್ಮದೇ ಗ್ರಾಮ ಸೀಚೆವಾಲ್‌ನಲ್ಲಿ ಬಾವಿ ನೀರಿನ ಸಂರಕ್ಷಣೆ ಪ್ರಾರಂಭಿಸಿದರು. ಈ ಕ್ರಮ ಕ್ರಮೇಣ ನೂರಾರು ಇತರ ಹಳ್ಳಿಗಳು ಮತ್ತು ಪಟ್ಟಣಗಳಿಗೆ ಹರಡಿತು. ಈ ಪ್ರಕ್ರಿಯೆಯಲ್ಲಿ ಕೆರೆಗಳಲ್ಲಿ ನೀರನ್ನು ಸಂಗ್ರಹಿಸುವ ಮೊದಲು ಬಾವಿಗಳನ್ನು ಬಳಸಿ ನೀರನ್ನು ಪ್ರಾಥಮಿಕವಾಗಿ ಸ್ವಚ್ಛಗೊಳಿಸಿ ಫಿಲ್ಟರ್ ಮಾಡಲಾಗುತ್ತದೆ. ಸ್ಥಳೀಯ ತಂತ್ರಗಳನ್ನಷ್ಟೇ ಬಳಸಿ ಯಾವುದೇ ಯಂತ್ರೋಪಕರಣಗಳ ಬಳಕೆಯಿಲ್ಲದೆ ನೀರನ್ನು ಸಂಸ್ಕರಿಸಲಾಗುತ್ತದೆ.

ಬಲ್ಬೀರ್​ ಸಿಂಗ್​ ಅವರ ಕಾರ್ಯ ಎಷ್ಟು ಖ್ಯಾತಿ ಪಡೆಯಿತೆಂದರೆ, ಅಗಸ್ಟ್ 17, 2006 ರಂದು ಆಗಿನ ರಾಷ್ಟ್ರಪತಿಗಳಾದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಬಲ್ಬೀರ್​ ಸಿಂಗ್​ ಅವರ ನದಿ ಸ್ವಚ್ಛತಾ ಮಾದರಿ ನೋಡಲು ಸೀಚೆವಾಲ್‌ಗೆ ಭೇಟಿ ನೀಡಿದ್ದರು. ಕಾಳಿ ವೀ ನದಿ ಶುಚಿಗೊಳಿಸುವಿಕೆ ಮತ್ತು ನೀರಿನ ಸಂರಕ್ಷಣೆಯ ಗ್ರಾಮದ ಈ ಕಾರ್ಯವನ್ನು ಅವರು ಉದಾತ್ತ ಕಾರ್ಯವೆಂದು ಬಣ್ಣಿಸಿದ್ದರು.

ಅಷ್ಟೇ ಅಲ್ಲ, ಸಂತರ ಮಾದರಿಯನ್ನು ನೋಡಲು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಸೀಚೆವಾಲ್​ಗೆ ಭೇಟಿ ನೀಡಿದ್ದಾರೆ.

ಸಂತ ಬಲ್ಬೀರ್​ ಸಿಂಗ್​ ಅವರ ಕರಸೇವೆ(ನಿಸ್ವಾರ್ಥ ಸೇವೆ)ಯು ಕಾಳಿ ವೀ ನದಿಯಿಂದ ಪ್ರಾರಂಭವಾಯ್ತು. ಅದು ಕಳೆದ 20 ವರ್ಷಗಳಲ್ಲಿ ಸೆಟ್ಲೆಜ್ ನದಿಯನ್ನು ತಲುಪುವ ಮೂಲಕ ಕ್ರಾಂತಿಕಾರಿ ಇತಿಹಾಸ ಸೃಷ್ಠಿಸಿದೆ. ಅವರ ಉದಾತ್ತ ಕಾರ್ಯಕ್ಕಾಗಿಯೇ ಭಾರತ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.