ETV Bharat / bharat

ದೇಶದ ಏಕೈಕ ಸಂಸ್ಕೃತ ಪತ್ರಿಕೆ ಹೊರತರುತ್ತಿರುವ ಮುಸ್ಲಿಂ ಸಹೋದರರು, ಓದುಗರ ಕೊರತೆಗೂ ಡೋಂಟ್​ ಕೇರ್​!

ವಿಶ್ವಾಸ ವೃತ್ತಾಂತ್ ಭಾರತದ ಒಂದೇ ಸಂಸ್ಕೃತಿ ಪತ್ರಿಕೆಯಾಗಿದ್ದು, ಹಿಂದೂ ಸಂಸ್ಕೃತಿ ಸಂಪ್ರದಾಯದ ಭಾಗವಾದ ಭಾಷೆಯ ಬೆಳೆವಣಿಗೆಗೆ ಶ್ರಮವಹಿಸುತ್ತಿದೆ.

author img

By

Published : Sep 8, 2020, 10:07 PM IST

sanskrit-newspaper-of-surat
ದೇಶದ ಒಂದೇ ಸಂಸ್ಕೃತ ಪತ್ರಿಕೆಗೆ ಓದುಗರ ಕೊರತೆ

ಸೂರತ್: ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಭಾಷೆಗೆ ಪ್ರಧಾನ ಸ್ಥಾನ ನೀಡಲಾಗಿತ್ತು. ಆದರೆ, ಈಚೆಗಿನ ಸಂಸ್ಕೃತ ಭಾಷೆ ಬಳಕೆ ಕೇವಲ ಶೇ.1ರಷ್ಟು ಇಳಿಮುಖವಾಗಿದೆ.

sanskrit-newspaper-of-surat
ದೇಶದ ಒಂದೇ ಸಂಸ್ಕೃತ ಪತ್ರಿಕೆಗೆ ಓದುಗರ ಕೊರತೆ

ಸದ್ಯ ಸೂರತ್​ನ ದಾವೂದಿ ಬೋಹ್ರಾಸ್​ ಸಮುದಾಯದ ಸಹೋದರರಿಬ್ಬರು ಸಂಸ್ಕೃತ ಭಾಷೆಯ ಶ್ರೀಮಂತಿಕೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಯುವ ಮನಸ್ಸುಗಳಿಗೆ ಮುಟ್ಟಿಸಲು ವಿಶ್ವಾಸ ವೃತ್ತಾಂತ್​ ಎಂಬ ಪತ್ರಿಕೆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಭಾರತದಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಈ ಪತ್ರಿಕೆ ಒಂದೇ ಆಗಿದೆ.

ಈ ಪತ್ರಿಕೆಯು 2011ರ ಏಪ್ರಿಲ್ 26ರಂದು ಆರಂಭಗೊಂಡಿದ್ದು, ವಿಶ್ರಮಿಸದೇ ಇಲ್ಲಿಯವರೆಗೆ ಮುನ್ನುಗ್ಗಿ ನಡೆಯುತ್ತಿದೆ. ಸೈಫೀ ಸಂಜೆಲಿವಾಲಾ ಮತ್ತು ಮುರ್ತಾಜಾ ಖಂಭಾತ್​ವಾಲಾ ಈ ಸಂಸ್ಕೃತ ಪತ್ರಿಕೆಯ ಬಂಡಿಗೆ ನೊಗವಾಗಿದ್ದಾರೆ. ಹಿಂದೂ-ಮುಸ್ಲಿಮರ ಏಕತೆಗೆ ಸೇತುವೆಯಾಗಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಹಿಂದೂ ವೇದಗಳು, ಪುರಾಣಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಮೂಲಕ ನಮ್ಮ ಹಳೆಯ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡಲು ನಿರಂತರವಾಗಿ ಶ್ರಮಿಸುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ನಿತ್ಯ ಹತ್ತು ಹಲವು ಭಾಷೆಯಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಆದರೆ ಒಂದು ಸಂಸ್ಕೃತ ಪತ್ರಿಕೆ ಇದೆ ಎಂದು ಯಾರಿಗೂ ತಿಳಿದಿಲ್ಲ. ಅದು ಇಂದಿನವರೆಗೂ ಪ್ರಕಟಿಸುತ್ತಲೇ ಬಂದಿದೆ. ಸಂಸ್ಕೃತ ಭಾಷೆಗೆ ಆಕರ್ಷಣೆಗೊಂಡಿದ್ದೇನೆ. ಅದನ್ನು ಉತ್ತೇಜಿಸಲು ಬಯಸುತ್ತೇನೆ ಎಂದು ವ್ಯವಸ್ಥಾಪಕ ಸಂಪಾದಕ ಮುರ್ತುಜಾ ಈ ಟಿವಿ ಭಾರತ್​ ಗೆ ತಿಳಿಸಿದರು.

ಸಂಸ್ಕೃತ ಪತ್ರಿಕೆಯೂ ಸಾಕಷ್ಟು ಓದುಗರ ಕೊರತೆ ಎದುರಿಸುತ್ತಿದೆ. ಇದರಿಂದ ಆರ್ಥಿಕ ಸಂಕಷ್ಟ ಕೂಡ ಇದೆ. ಮಾವ ಸೈಫೀ ಸಂಜಲಿವಾಲಾ ಅವರು ನೆರವು ನೀಡಿದ್ದರಿಂದ ಪ್ರಕಟಣೆ ಮುಂದುವರಿಸಲಾಗಿದೆ ಎಂದರು.

ಸಂಸ್ಕೃತ ಭಾಷೆಯಲ್ಲಿ ಅನೇಕ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದವು. ಆದರೆ, ಸದ್ಯ ಎಲ್ಲ ಪತ್ರಿಕೆ ಮುಚ್ಚಿಕೊಂಡಿವೆ. ಓದುಗರ ಸಂಖ್ಯೆ ಇಲ್ಲ, ಸರ್ಕಾರದ ಪ್ರೋತ್ಸಾಹವಿಲ್ಲದೇ ಕಷ್ಟ ಎದುರಿಸಬೇಕಾಗಿದೆ ಎಂದು ವಿಶ್ವಾಸ್​ ವೃತ್ತಾಂತ್ ಪತ್ರಿಕೆಯ ಸಂಪಾದಕ ಶಿವರಾಜ ಝಾ ಹೇಳಿದರು.

ಈ ಪ್ರತಿಕೆಯ ಆನ್​ಲೈನ್​ನಲ್ಲಿಯೂ ಲಭ್ಯವಿದೆ. ಈಗಾಗಲೇ ಬಿಹಾರ, ಒಡಿಶಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಜಮ್ಮು ರಾಜ್ಯದಲ್ಲಿನ ಓದುಗರನ್ನು ಹೊಂದಿದೆ. ಇದರ ಚಂದದಾರರು ಇದ್ದು, ವಿಶ್ವದ ಅನೇಕ ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಅಷ್ಟೇ ಅಲ್ಲದೇ ಶಿಕ್ಷಣ ಸಂಸ್ಥೆಗಳು, ಸಮುದಾಯಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿವೆ ಎನ್ನಲಾಗಿದೆ.

ತಾರತಮ್ಯ ಮತ್ತು ಧಾರ್ಮಿಕ ವಿಂಗಡಣೆ ಬಗ್ಗೆ ಯೋಚಿಸದೆ, ಸಂಸ್ಕೃತ ಭಾಷೆಯ ಸಂಪ್ರದಾಯವನ್ನು ಜೀವಂತವಾಗಿಡಲು ಶ್ರಮಿಸಲಾಗುತ್ತಿದೆ.

ಈ ಇಬ್ಬರ ಸಹೋದರರ ಪ್ರಯತ್ನವು, ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪ್ರಕಟಣೆ ಮುಂದುವರೆಸಿದ್ದು, ಭಾಷೆಯ ಸಂರಕ್ಷಣೆಯ ಹಂಬವನ್ನು ಎತ್ತಿ ತೋರಿಸುತ್ತದೆ. ಸಂಸ್ಕೃತ ಸಂಪ್ರದಾಯವನ್ನು ಜೀವಂತವಾಗಿಡುವ ಇವರ ಮಹಾದಾಸೆ ನಿಜಕ್ಕೂ ಶ್ಲಾಘನೀಯವಲ್ಲವೇ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.