ETV Bharat / bharat

ಬರಿಗಣ್ಣಿಗೆ ಕಾಣದ ಶತ್ರು ವಿರುದ್ಧ ಇಡೀ ವಿಶ್ವದ ಯುದ್ಧ... ಶತಮಾನದಲ್ಲಿ ಕಂಡು ಕೇಳರಿಯದ ವಾರ್​ ಇದು - ಕೊರೊನಾ ವೈರಸ್ ಭೀತಿ

ಜಾಗತೀಕರಣವು ಇಡೀ ಜಗತ್ತನ್ನು ಒಂದು ಜಾಗತಿಕ ಗ್ರಾಮವನ್ನಾಗಿ ರೂಪಾಂತರಿಸಿದೆ. ವಿಮಾನ ಪ್ರಯಾಣವು ನಿರೀಕ್ಷೆಗಿಂತಲೂ ಹೆಚ್ಚು ವಿಸ್ತರಣೆಯಾಗಿದ್ದರಿಂದಾಗಿ, ಪ್ರಮುಖ ಪ್ರವಾಸೋದ್ಯಮ ದೇಶಗಳಿಗೆ ಈ ಮಾರಣಾಂತಿಕ ರೋಗ ಹರಡಿದೆ ಮತ್ತು ಭಾರತಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಚೀನಾ ಆರಂಭದಲ್ಲಿ ವುಹಾನ್ನಲ್ಲಿ ಕಾಣಿಸಿಕೊಂಡ ಈ ವೈರಸ್ನ ತೀವ್ರತೆಯನ್ನು ಗುರುತಿಸಿರಲಿಲ್ಲ. ಹೀಗಾಗಿ ಚೀನಾ ಇದಕ್ಕೆ ಭಾರಿ ಬೆಲೆಯನ್ನೂ ತೆತ್ತಿದೆ.

Coronavirus
ಕೊರೊನಾ
author img

By

Published : Mar 26, 2020, 2:44 PM IST

ಇದು ಇನ್ನೊಂದು ವಿಶ್ವಯುದ್ಧ. ಈ ಅನಂತ ರಣಾಂಗಣದಲ್ಲಿ ಬರಿಗಣ್ಣಿಗೆ ಕಾಣದ ವೈರಸ್ ಎಂಬ ಮಾರಕ ಶತ್ರುವಿನ ವಿರುದ್ಧ ನಾವೆಲ್ಲರೂ ಮಾನವೀಯತೆಯ ಹೋರಾಟ ನಡೆಸುತ್ತಿದ್ದೇವೆ! ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಕೊರೋನಾ ವೈರಸ್ ಅನ್ನು ತಡೆಯಲು ಎಲ್ಲ ಪ್ರಯತ್ನ ಮತ್ತು ಶ್ರಮವನ್ನೂ ವಹಿಸುತ್ತಿದೆ. ಪ್ರತಿಯೊಬ್ಬ ಪೌರನೂ ಈ ಯುದ್ಧದಲ್ಲಿ ಯೋಧನಾಗಿದ್ದಾನೆ ಮತ್ತು ಇಡಿ ಮನುಕುಲವನ್ನು ರಕ್ಷಿಸುವವನಾಗಿ ರೂಪಾಂತಗೊಂಡಿದ್ದಾನೆ. ಈ ಶತಮಾನದಲ್ಲೇ ಕಂಡುಕೇಳರಿಯದ ಯುದ್ಧ ಇದು! ಹತ್ತು ದಿನಗಳ ಹಿಂದೆ ಈ ಕೋವಿಡ್ ಅನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸುವುದಕ್ಕೂ ಮುನ್ನ 4,291 ಜನರು ಸಾವನ್ನಪ್ಪಿದ್ದರು ಮತ್ತು 114 ದೇಶಗಳಲ್ಲಿ 184,000 ಜನರಿಗೆ ಹಬ್ಬಿತ್ತು. ಇದು ಈಗ 180 ದೇಶಗಳಿಗೆ ಹಬ್ಬಿದೆ ಮತ್ತು 3 ಲಕ್ಷ ಜನರಿಗೆ ಹಬ್ಬಿದ್ದು, 13,700 ಜನರನ್ನು ಸಾಯಿಸಿದೆ.

ಜಾಗತೀಕರಣವು ಇಡೀ ಜಗತ್ತನ್ನು ಒಂದು ಜಾಗತಿಕ ಗ್ರಾಮವನ್ನಾಗಿ ರೂಪಾಂತರಿಸಿದೆ. ವಿಮಾನ ಪ್ರಯಾಣವು ನಿರೀಕ್ಷೆಗಿಂತಲೂ ಹೆಚ್ಚು ವಿಸ್ತರಣೆಯಾಗಿದ್ದರಿಂದಾಗಿ, ಪ್ರಮುಖ ಪ್ರವಾಸೋದ್ಯಮ ದೇಶಗಳಿಗೆ ಈ ಮಾರಣಾಂತಿಕ ರೋಗ ಹರಡಿದೆ ಮತ್ತು ಭಾರತಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಚೀನಾ ಆರಂಭದಲ್ಲಿ ವುಹಾನ್ನಲ್ಲಿ ಕಾಣಿಸಿಕೊಂಡ ಈ ವೈರಸ್ನ ತೀವ್ರತೆಯನ್ನು ಗುರುತಿಸಿರಲಿಲ್ಲ. ಹೀಗಾಗಿ ಚೀನಾ ಇದಕ್ಕೆ ಭಾರಿ ಬೆಲೆಯನ್ನೂ ತೆತ್ತಿದೆ. ನಂತರ, ತನ್ನ ಎಲ್ಲ ಸಂಪನ್ಮೂಲವನ್ನು ಬಳಸಿ ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿತು. ದಕ್ಷಿಣ ಕೊರಿಯಾ ಮತ್ತು ಜರ್ಮನಿ ಈಗಾಗಲೇ ಬೀಜಿಂಗ್ನ ಅನುಭವದಿಂದ ಪಾಠ ಕಲಿತಿವೆ ಮತ್ತು ವ್ಯಾಪಕ ಪರೀಕ್ಷೆಗಳನ್ನು ಮಾಡುವ ಮೂಲಕ ಈ ವೈರಸ್ ಅನ್ನು ಹರಡದಂತೆ ತಡೆಯಲು ಶ್ರಮಿಸುತ್ತಿವೆ. ಇಟಲಿ ಸಾಕಷ್ಟು ಮುನ್ನೆಚ್ಚರಿಕೆ ಇಲ್ಲದ್ದರಿಂದ ಮತ್ತು ವೈರಸ್ ಅನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಭಾರಿ ಬೆಲೆ ತೆರುವಂತಾಯಿತು.

ಬ್ರಿಟನ್ ಮತ್ತು ಅಮೆರಿಕ ತೀವ್ರ ಗೊಂದಲಕ್ಕೆ ಒಳಗಾಗಿರುವ ಸನ್ನಿವೇಶದಲ್ಲಿ ಭಾರತವು ಹಲವು ರೀತಿಯಲ್ಲಿ ಇದನ್ನು ನಿಯಂತ್ರಿಸಿ ಎರಡನೇ ಹಂತದಲ್ಲೇ ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಜನತಾ ಕರ್ಫ್ಯೂ ಯಶಸ್ವಿಯಾದ ನಂತರದಲ್ಲಿ 11 ಸಾವಿರಕ್ಕೂ ಹೆಚ್ಚು ಪ್ರಯಾಣಿಕ ರೈಲು ಮತ್ತು ಅಂತಾರಾಜ್ಯ ಬಸ್ಗಳನ್ನು ಈ ತಿಂಗಳ ಕೊನೆಯವರೆಗೆ ನಿಲ್ಲಿಸಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ತಮ್ಮ ಗಡಿಗಳನ್ನು ಬಂದ್ ಮಾಡಿವೆ. ಕೊರೋನಾ ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಸರ್ಕಾರಗಳು, ವೈದ್ಯಕೀಯ ವೃತ್ತಿಪರರು, ಜನರು ಮತ್ತು ಮಾಧ್ಯಮವು ಒಟ್ಟಾಗಿ ಇದರ ವಿರುದ್ಧ ಯುದ್ಧ ಸಾರಬೇಕಿದೆ. ಇದರ ಗುಣಲಕ್ಷಣಗಳು ಮತ್ತು ಜನರಿಗೆ ಅಪಾರ ಪ್ರಮಾಣದಲ್ಲಿ ಹರಡುತ್ತಿರುವ ರೀತಿಯನ್ನು ಗಮನಿಸಿ ಜನರು ಎಚ್ಚರಿಕೆಯಿಂದಿರಬೇಕಿದೆ.

ಒಂದು ಶತಮಾನದ ಹಿಂದೆ ಸ್ಪಾನಿಷ್ ಫ್ಲೂ ಎಂಬ ಸಾಂಕ್ರಾಮಿಕ ರೋಗ ಹರಡಿದ್ದಾಗ 150 ಮಿಲಿಯನ್ ಜನಸಂಖ್ಯೆಯಲ್ಲಿ ಕಾಲು ಭಾಗ ಜನರು ಇದರ ಬಾಧೆಗೆ ಒಳಗಾಗಿದ್ದರು. ಈ ಇತಿಹಾಸ ಜನರ ಮನಸಿನಿಂದ ಮರೆಯಾಗುವ ಮುನ್ನವೇ ಈ ವೈರಸ್ನ ಬಾಧೆ ಶುರುವಾಗಿದೆ. ಇತ್ತೀಚಿನ ದಶಕಗಳಲ್ಲಿ ಕಂಡುಕೊಂಡಿರುವ ಆಂಟಿಬಯಾಟಿಕ್ಸ್ ಇಂತಹ ರೋಗದ ತೀವ್ರತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಆದರೆ, 2003 ರಲ್ಲಿ ಕಂಡುಬಂದ ಸಾರ್ಸ್ ವೈರಸ್ ಮತ್ತು 2013 ರಲ್ಲಿ ಕಂಡುಬಂದ ಮಿಡಲ್ ಈಸ್ಟ್ ಫ್ಲೂ ಜನರಲ್ಲಿ ಭೀತಿ ಉಂಟು ಮಾಡಿದ್ದವು.

ಇದಕ್ಕೆ ಪ್ರತಿಯಾಗಿ, ಪ್ರಸ್ತುತ ಕೊರೊನಾ ವೈರಸ್ ಈ ಶತಮಾನದ ಮಾರಣಾಂತಿಕ ರೋಗವಾಗಿ ಹಲವು ದೇಶಗಳ ಇಡೀ ಆರ್ಥಿಕತೆ, ಸಾಮಾಜಿಕ ಮತ್ತು ಆರೋಗ್ಯ ವಲಯಗಳನ್ನು ಬಾಧಿಸಿದೆ. ತುರ್ತು ವೈದ್ಯಕೀಯ ಸಲಕರಣೆ ಪೂರೈಕೆಯ ಕೊರತೆಯು ಅಮೆರಿಕಕ್ಕೂ ಬಾಧಿಸಿದೆ. ಇತ್ತೀಚೆಗೆ ಚೀನಾದಲ್ಲಿ ಉದ್ಯಮವನ್ನು ಸ್ಥಗಿತಗೊಳಿಸಿದ್ದರಿಂದಾಗಿ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. 1941 ರಲ್ಲಿ ಇಂತಹ ದೊಡ್ಡ ಪ್ರಮಾಣದ ವಿಪತ್ತನ್ನು ನಿರ್ವಹಿಸುವುದು ಹೇಗೆ ಎಂದು ಫ್ರಾಂಕ್ಲಿನ್ ಡೆ ರೂಸ್ವೆಲ್ಟ್ ನೇತೃತ್ವದ ಅಮೆರಿಕ ಸರ್ಕಾರವು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತ್ತು. ವಿಶ್ವ ಯುದ್ಧ 2 ರಲ್ಲಿ ಅಮೆರಿಕದ ವಾಹನ ಉದ್ಯಮವು ಕಾರು ಉತ್ಪಾದನೆಯನ್ನು ನಿಲ್ಲಿಸಿ,ಗಂಟೆಗೆ ಹತ್ತಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಉತ್ಪಾದಿಸಿ ದೇಶದ ಜಯಕ್ಕೆ ಕಾರಣವಾಗಿದ್ದವು. ಡಯಾಗ್ನಾಸ್ಟಿಕ್ ಟೆಸ್ಟಿಂಗ್ ತಾಂತ್ರಿಕತೆಯಲ್ಲಿ ಭಾರತ ಹಿಂದೆ ಬಿದ್ದಿದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿರುವ ಮಧ್ಯೆಯೇ, ಖಾಸಗಿ ಆಸ್ಪತ್ರೆಗಳಿಗೂ ಡಯಾಗ್ನೋಸ್ಟಿಕ್ಗೆ ಅನುಮತಿ ನೀಡಿರುವುದು ಸರಿಯಾದ ನಿರ್ಧಾರವಾಗಿದೆ.

ವ್ಯಾಪಕ ಪ್ರಮಾಣದಲ್ಲಿ ಇದು ದೇಶವನ್ನು ವ್ಯಾಪಿಸುವುದಕ್ಕೂ ಮೊದಲೇ ಭಾರತೀಯರಲ್ಲಿ ಇದನ್ನು ತಡೆಯುವ ಮತ್ತು ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಹತ್ತೇ ದಿನಗಳಲ್ಲಿ ಚೀನಾ ಸಾವಿರ ಬೆಡ್ನ ಆಸ್ಪತ್ರೆಯನ್ನು ಕಟ್ಟಿಸಿತ್ತು ಮತ್ತು ಕೇವಲ ಡೈಪರ್ಗಳನ್ನು ಧರಿಸಿ ಚೀನಾದಲ್ಲಿ ವೈದ್ಯರು ಕೊರೊನಾ ಪೀಡಿತರನ್ನು ಚಿಕಿತ್ಸಿಸಿದ ರೀತಿಯು ಸ್ವಯಂ ಸೇವೆ ಮತ್ತು ದಕ್ಷತೆಯ ಅಪೂರ್ವವಾದ ಉದಾಹರಣೆಯಾಗಿದೆ. ವೈರಸ್ ಪತ್ತೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ವೈದ್ಯರು ಹಾಗೂ ನರ್ಸ್ಗಳ ಪ್ರಯತ್ನವು ಯಾವುದೇ ದೇವರ ಕೆಲಸಕ್ಕಿಂತ ಕಡಿಮೆಯೇನಲ್ಲ. ಕೋವಿಡ್ಗೆ ಚಿಕಿತ್ಸೆಯನ್ನು ಕಂಡುಹಿಡಿಯಲು ಸುಮಾರು ಒಂದೂವರೆ ವರ್ಷಗಳೇ ಬೇಕಾಗಬಹುದು ಎಂದು ವಿವಿಧ ಅಧ್ಯಯನಗಳು ಹೇಳುತ್ತವೆ. ಭಾರತದಲ್ಲಿ ಅಪಾಯಕರವಾದ ಮೂರನೇ ಹಂತಕ್ಕೆ ಇದು ತಲುಪುವುದಕ್ಕೂ ಮೊದಲು ಇಡೀ ದೇಶವೇ ಒಂದಾಗಿ ಈ ದುಷ್ಟ ಶಕ್ತಿಯನ್ನು ದೂರವಿಡುವ ಅಗತ್ಯವಿದೆ.

ಭಾರತಕ್ಕೆ ಇದು ವೈದ್ಯಕೀಯ ತುರ್ತಿನ ಸ್ಥಿತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದ ಪ್ರಕಾರ ಕೊರೊನಾದಿಂದ ಹದಿಹರೆಯದವರೂ ಕೂಡ ತಪ್ಪಿಸಿಕೊಳ್ಳಲಾಗದು. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಒಟ್ಟಾಗಿ ಯೋಜನೆಯನ್ನು ರೂಪಿಸಬೇಕಿದೆ. ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಎಲ್ಲವನ್ನೂ ಬಂದ್ ಮಾಡಲು ಸರ್ಕಾರಗಳು ಆದೇಶ ಹೊರಡಿಸಿವೆ. ದೈನಂದಿನ ಅಗತ್ಯಗಳು, ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಮನೆಯಲ್ಲಿ ಇರಬೇಕಿದೆ. ನಮ್ಮ ದೇಶದ 50 ಮಿಲಿಯನ್ ಕೆಲಸಗಾರರ ಪೈಕಿ ಶೇ. 85 ರಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ. ಎಲ್ಲ ಕಂಪನಿಗಳು, ಉದ್ಯಮಗಳು ಮತ್ತು ಸ್ವಯಂ ಉದ್ಯೋಗದ ಮೂಲವೇ ಮುಚ್ಚಿಹೋದರೆ, ಅವರು ಜೀವನ ನಡೆಸುವುದೇ ಕಷ್ಟವಾಗುತ್ತದೆ. ಬ್ರಿಟನ್ ತನ್ನ ಶೇ. 80 ರಷ್ಟು ಕೆಲಸಗಾರರ ವೇತನವನ್ನು ಪಾವತಿ ಮಾಡಲು ನಿರ್ಧರಿಸಿದ್ದರೆ, ದೊಡ್ಡ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಈ ವಿಪತ್ತಿನ ಸಮಯದಲ್ಲಿ ರಕ್ಷಣೆ ಒದಗಿಸಲು ನಿರ್ಧರಿಸಲಾಗಿದೆ.

ಹೈದರಾಬಾದ್ನಲ್ಲಿ ಮಹಿಳೆಯೊಬ್ಬಳು ಉಚಿತವಾಗಿ ಸ್ಯಾನಿಟೈಸರ್ಗಲು ಮತ್ತು ಮಾಸ್ಕ್ಗಳನ್ನು ಮಾಡಿ ವಿತರಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಅರ್ಹವಾಗಿದೆ. ಸಾಂಕ್ರಾಮಿಕ ವೈರಸ್ನ ನಿಯಂತ್ರಣವು ಅತ್ಯಂತ ನಿರ್ಣಾಯಕವಾಗಿರುವ ಈ ಸಮಯದಲ್ಲಿ ಪೌಷ್ಠಿಕಾಂಶವೂ ಕೂಡ ಅಗತ್ಯವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕೋಳಿ ಉದ್ಯಮದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದನ್ನು ಖಂಡಿಸಬೇಕಿದೆ. ಎಲ್ಲಕ್ಕಿಂತ ಪ್ರಮುಖವಾಗಿ, ತಮ್ಮನ್ನು ಹಾಗೂ ಇತರರನ್ನು ರಕ್ಷಿಸಿಕೊಳ್ಳಲು ಕ್ವಾರಂಟೈನ್ನಲ್ಲಿ ಜನರು ಇರುವುದಕ್ಕೆ ಸಿದ್ಧವಾಗುವುದು ಅತ್ಯಂತ ಅಗತ್ಯವಾಗಿದೆ. ಜಿಪಿಎಸ್ ಆಪ್ ಮತ್ತು ಸ್ಥಳಗಳನ್ನು ವೈರಸ್ನಿಂದ ಸ್ವಚ್ಛಗೊಳಿಸುವ ಮೂಲಕ ಕೊರೊನಾ ವೈರಸ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ಇದನ್ನು ನಿಯಂತ್ರಿಸಲು ದಕ್ಷಿಣ ಕೊರಿಯಾ ಒಂದು ಹಂತದ ಮಟ್ಟಿಗೆ ಯಶಸ್ಸು ಕಂಡಿದೆ. ತಂತ್ರಜ್ಞಾನ ಮತ್ತು ಮಾಧ್ಯಮದ ಬೆಂಬಲ ಹಾಗೂ ವೈದ್ಯರ ತ್ಯಾಗ ಹಾಗೂ ಜನರ ಸಹಕಾರವು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.