ನವದೆಹಲಿ: ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜೀಪಿಂಗ್ ನಡುವೆ ಹುವಾನ್ನಲ್ಲಿ ಅತ್ಯುತ್ತಮ ಮಾತುಕತೆ ನಡೆದಿತ್ತು. ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೆಚ್ಚು ಸ್ಥಿರತೆ ಕಂಡು ಬಂದಿದೆ ಎಂದು ನೂತನ ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಚೀನಾ ಅಧ್ಯಕ್ಷರು ಈ ವರ್ಷವೂ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆ ಬಳಿಕ ಮತ್ತಷ್ಟು ಮಾತುಕತೆಗಳು ನಡೆಯಲಿವೆ ಎಂದಿರುವ ಅವರು, ನಾನೂ ಸಹ ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡುವೆ, ಆದರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಅಮೆರಿಕ ವಿದೇಶಾಂಗ ಸಚಿವರು ಭೇಟಿ ಕೊಡುವ ವಿಚಾರ ಮಾತನಾಡಿದ ವಿದೇಶಾಂಗ ಸಚಿವ ಜೈ ಶಂಕರ್ ಈ ಬಾರಿ ಅಮೆರಿಕ ನಿಯೋಗದೊಂದಿಗೆ ಖಂಡಿತವಾಗಿ ವ್ಯಾಪಾರ ಸಂಬಂಧಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ನಾನು ನಮ್ಮ ದೇಶದ ಒಳಿತಿನ ಬಗ್ಗೆ ಯೋಚಿಸಿದರೆ ಅವರು ಒಳಿತಿನ ಬಗ್ಗೆ ಯೋಚಿಸ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ಬಾರಿ ರಾಯಭಾರ ಸರಿಹೊಂದುವುದಿಲ್ಲ ಎಂದು ಅವರು ಹೇಳಿದರು.
ಈ ನಡುವೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
`