ನಾಗ್ಪುರ( ಮಹಾರಾಷ್ಟ್ರ): ವಿಜಯದಶಮಿ ನಿಮಿತ್ತ ಇಂದು ನಾಗ್ಪುರದಲ್ಲಿ ಆರ್ಎಸ್ಎಸ್ ಕೇಂದ್ರ ಕಚೇರಿ ಝಗಮಗಿಸುತ್ತಿದೆ. ಸರಸಂಘ ಚಾಲಕ ಮೋಹನ್ ಭಾಗವತ್ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಪಥ ಸಂಚಲನ ಹಾಗೂ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿದರು.
ಬೆಳಗ್ಗೆಯೇ ವಿಜಯ ದಶಮಿ ಪಥ ಸಂಚಲನದಲ್ಲಿ ಸಾವಿರಾರು ಕರ ಸೇವಕರು ಜಮಾಯಿಸಿದ್ದಾರೆ. ಮೋಹನ್ ಭಾಗವತ್ ಸೇರಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ನಿವೃತ್ತ ಭೂ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಭಾಗವಹಿಸಿದ್ದಾರೆ. ಇನ್ನು ಎಚ್ಸಿಎಲ್ ಸ್ಥಾಪಕ ಶಿವ ನಾಡಾರ್ ಮುಖ್ಯ ಅತಿಥಿಯಾಗಿ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.