ಸೆಹೋರ್/ಬಿಹಾರ: ಅಂದಾಜು 32 ಲಕ್ಷಕ್ಕೂ ಅಧಿಕ ಹಣವನ್ನ ನಗರದಲ್ಲಿನ ಯುಕೋ(UCO) ಬ್ಯಾಂಕಿನಿಂದ ಖದೀಮರು ಕದ್ದೊಯ್ದ ಘಟನೆ ಸೋಮವಾರ ಸೆಹೋರ್ ನಗರದಲ್ಲಿ ನಡೆದಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬ್ಯಾಂಕಿನ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲನೆ ನಡೆಸಿ, ಕೃತ್ಯ ಎಸಗಿದ ಗುಂಪು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದು, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.